ಚಳ್ಳಕೆರೆ:
ಚಳ್ಳಕೆರೆ ತಾಲೂಕಿನ ಸೋಮಗುದ್ದು ಪಂಚಾಯಿತಿ ವ್ಯಾಪ್ತಿಯ ಗಂಜಿಗುಂಟೆ ಗ್ರಾಮದಲ್ಲಿ ಆಶ್ರಯ ಮನೆಗಳಿಗೆ ನಿಯೋಜನೆ ಆಗಿರುವ ರಿ.ಸ.ನಂ:105ರ ಗೋಮಾಳ ಭೂಮಿಯಲ್ಲಿ ಮಂಗಳವಾರ ಗುಡಿಸಲು ಕಟ್ಟಿಕೊಳ್ಳಲು ಮುಂದಾಗಿದ್ದ ದಲಿತ ಸಮುದಾಯದವರನ್ನು ತಾಲೂಕು ಆಡಳಿತ ಅಧಿಕಾರಿಗಳು ತಡೆಯಲಾಗಿದೆ ಎಂದು ಗ್ರಾಮದ ನಿರಾಶ್ರಿತ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮದಲ್ಲಿ ವಸತಿರಹಿತ ದಲಿತ ಕುಟುಂಬಗಳಿವೆ. ಆಶ್ರಯ ನಿಯೋಜಿತ ಜಾಗದಲ್ಲಿ ಹಕ್ಕು ಪತ್ರ ನೀಡಬೇಕೆಂದು ವರ್ಷಗಳಿಂದ ಹೋರಾಟ ಮಾಡಲಾಗುತ್ತಿದೆ. ತಾಲೂಕು ಕಚೇರಿಯ ಮುಂದೆ ಟೆಂಟ್ ಕಟ್ಟಿ, ಅಡುಗೆ ಮಾಡಿಕೊಂಡು ಅಹೋರಾತ್ರಿ ಪ್ರತಿಭಟನೆ ಮಾಡಲಾಗಿತ್ತು. ಮೂರು ತಿಂಗಳ ಅವಧಿಯಲ್ಲಿ ವ್ಯವಸ್ಥೆ ಮಾಡುವುದಾಗಿ ಕ್ಷೇತ್ರದ ಶಾಸಕರು ಸೇರಿದಂತೆ ತಾಲೂಕು ಆಡಳಿತ ಭರವಸೆ ನೀಡಲಾಗಿತ್ತು. ಪ್ರತಿ ಚುನಾವಣೆಗಳಲ್ಲಿ ಮತ ಪಡೆಯುವುದಕ್ಕಾಗಿ ಹಕ್ಕು ಪತ್ರಗಳ ಆಸೆ ಹೇಳಲಾಗುತ್ತಿದೆ. ಈಗಾಗಲೇ ಗ್ರಾಮದ ಇತರೆ ವರ್ಗದವರು ಗೋಮಾಳ ಭೂಮಿಯಲ್ಲಿ ಮನೆಗಳನ್ನು ಕಟ್ಟಿಕೊಂಡು ಕುರಿ, ಮೇಕೆ ರಪ್ಪಗಳನ್ನು ಹಾಕಿಕೊಂಡಿದ್ದಾರೆ. ಆದರೆ, ದಲಿತ ಸಮುದಾಯದವರು ಗುಡಿಸಲು ಕಟ್ಟಿಕೊಳ್ಳುವುದಕ್ಕೆ ಬಿಡುತ್ತಿಲ್ಲ ಎಂದು ಎನ್. ನಿಜಲಿಂಗಪ್ಪ, ಆರ್. ರಂಗನಾಥ, ಕೆ. ಪ್ರಹ್ಲಾದ, ಎನ್. ಶ್ರೀನಿವಾಸ, ಎ. ಅಜ್ಜಪ್ಪ, ಮಹಾಲಿಂಗಪ್ಪ, ಸಿದ್ದಲಿಂಗಮ್ಮ, ವಿಜಯಮ್ಮ, ಕಮಲಮ್ಮ, ಮಂಜಕ್ಕ, ದ್ಯಾಮಕ್ಕ, ನಾಗಮ್ಮ, ಸೌಮ್ಯ, ಗೀತಮ್ಮ, ಭಾಗ್ಯಮ್ಮ, ಸುಶೀಲಮ್ಮ, ಜಯಮ್ಮ, ಕವಿತಮ್ಮ, ಮಮತಮ್ಮ, ದೇವೀರಮ್ಮ, ಓಬಳಮ್ಮ, ಕೆಂಚಮ್ಮ, ಅನುಸೂಯಮ್ಮ ದೂರಿದ್ದಾರೆ.
ತಹಸೀಲ್ದಾರ್ ರೇಹಾನ್ ಪಾಷಾ ಮಾತನಾಡಿ, ಆಶ್ರಯ ಯೋಜನೆಗಾಗಿ ೫ ಎಕರೆ ನಿಯೋಜನೆ ಮಾಡಲಾಗಿದೆ. ಗ್ರಾಮದ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆಗೆ ಕ್ರಮ ವಹಿಸಲಾಗಿದೆ. ಈಗಾಗಲೇ ಸ್ಥಳೀಯ ಗ್ರಾಮ ಪಂಚಾಯಿತಿಯಿAದ ಕರೆದಿರುವ ಅರ್ಜಿ ಪ್ರಕಾರ ಇನ್ನು ಕೆಲವರು ದಾಖಲೆ ಸಲ್ಲಿಕೆ ಮಾಡಲಾಗಿದೆ. ಇನ್ನೆರೆಡು ತಿಂಗಳಲ್ಲಿ ಅನುಕೂಲ ಕಲ್ಪಿಸುವುದಾಗಿ ಗ್ರಾಮಸ್ಥರನ್ನು ಮನವೊಲಿಸಿದರು.
ತಾಲೂಕು ಪಂಚಾಯಿತಿ ಇಒ ಎಚ್. ಶಶಿಧರ ಮಾತನಾಡಿ, ಆಶ್ರಯ ನಿಯೋಜಿತ ಗೋಮಾಳ ಭೂಮಿಯಲ್ಲಿ ಅಕ್ರಮವಾಗಿ ಕಟ್ಟಿರುವ ಮನೆಗಳ ತೆರವಿಗೆ ಮೂರು ದಿನ ಗಡುವು ನೀಡಲಾಗಿದೆ. ಸ್ಥಳೀಯ ಪಂಚಾಯಿತಿ ವತಿಯಿಂದ ಡಂಗುರ ಸಾರಿಸಿ ತೆರವುಗೊಳಿಸಲು ಸೂಚಿಸಲಾಗುವುದು. ಇದಕ್ಕೂ ಸ್ಪಂದಿಸದಿದ್ದಲ್ಲಿ ಫೆ.೦೭ರಂದು ಜೆಸಿಬಿ ಬಳಸಿ ತೆರವು ಕಾರ್ಯ ಆರಂಭ ಮಾಡುತ್ತೇವೆ. ಇಲ್ಲಿ ಯಾವುದೇ ಜಾತಿ, ವರ್ಗ ಬೇಧವಿಲ್ಲ. ಅರ್ಹ ವಸತಿ ರಹಿತ ಕುಟುಂಬಗಳಿಗೆ ಸಮರ್ಪಕ ಹಕ್ಕುಪತ್ರ ವಿತರಣೆಗೆ ಕ್ರಮ ಕೈಗೊಳ್ಳುತ್ತೇವೆ. ಏಕಾಏಕಿ ಗುಡಿಸಲುಗಳು ಕಟ್ಟುವುದರಿಂದ ಸಮುದಾಯಗಳ ಬಲ ಪ್ರದರ್ಶನವಾಗುತ್ತದೆ. ಇದರಿಂದ ಗ್ರಾಮದಲ್ಲಿ ಗೊಂದಲ ಮತ್ತು ಅಶಾಂತಿಗೆ ಕಾರಣವಾಗುತ್ತದೆ ಎಂದು ಗ್ರಾಮಸ್ಥರಿಗೆ ಮನವರಿಕೆ ಮಾಡಿದ್ದಾರೆ. ಮುಂಜಾಗ್ರತವಾಗಿ ಹೆಚ್ಚಿನ ಪೊಲೀಸ್ ನಿಯೋಜನೆ ಮಾಡಲಾಗಿತ್ತು.
ಪೊಲೀಸ್ ಇನ್ಸ್ಪೆಕ್ಟರ್ ಆರ್.ಎಫ್. ದೇಸಾಯಿ, ಕಂದಾಯ ನಿರೀಕ್ಷಕ ತಿಪ್ಪೇಸ್ವಾಮಿ, ತಾಲೂಕು ವಸತಿ ನೋಡಲ್ ಅಧಿಕಾರಿ ಶ್ರೀನಿವಾಸ್, ಗ್ರಾಮ ಆಡಳಿತಾಧಿಕಾರಿ ಕೇಶವಚಾರಿ ಇದ್ದರು.
ಪಾಷಾ, ತಾಪಂ ಇಒ ಎಚ್. ಶಶಿಧರ, ಪಿಐ ಆರ್.ಎಫ್. ದೇಸಾಯಿ ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.