ವರದಿ: ನಾಗತಿಹಳ್ಳಿ ಮಂಜುನಾಥ್
ಹೊಸದುರ್ಗ:
ಯುವ ಉದ್ಯಮಿ, ಸಮಾಜ ಸೇವಕ ಹಾಗೂ ಶಿಕ್ಷಣ ಪ್ರೇಮಿ ಸದ್ಗುರು ಪ್ರದೀಪ್ ಅವರ ಜನ್ಮದಿನದ ಅಂಗವಾಗಿ ಸ್ನೇಹ ಬಳಗ ಹಾಗೂ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ, ಹೊಸದುರ್ಗ ಇವರ ಸಹಯೋಗದಲ್ಲಿ ಜ.7ರಂದು (ಬುಧವಾರ) ಬೆಳಿಗ್ಗೆ 10.30ಕ್ಕೆ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ.
ಪಟ್ಟಣದ ಗೊರವಿನಕಲ್ಲು ರಸ್ತೆಯಲ್ಲಿರುವ ಸದ್ಗುರು ಆಯುರ್ವೇದ ಸಂಸ್ಥೆ ಕಾರ್ಖಾನೆ ಆವರಣದಲ್ಲಿ ಈ ಶಿಬಿರ ನಡೆಯಲಿದ್ದು, ರಕ್ತದಾನ ಮಾಡಲು ಇಚ್ಛಿಸುವವರು ಸ್ವಯಂಪ್ರೇರಿತರಾಗಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ:
ತುಂಬಿನಕೆರೆ ಬಸವರಾಜ್ – ಮೊ: 9902851474
ಕಪ್ಪಗೆರೆ ದ್ಯಾಮಣ್ಣ – ಮೊ: 9741029954
ದಾನಗಳಲ್ಲಿ ರಕ್ತದಾನ ಅತ್ಯಂತ ಶ್ರೇಷ್ಠ ದಾನವಾಗಿದೆ. ರಕ್ತದಾನ ಮಾಡುವುದರಿಂದ ದಾನಿಗಳ ಆರೋಗ್ಯ ಸುಧಾರಣೆಯಾಗುವುದರ ಜೊತೆಗೆ ಅನೇಕ ಅಮೂಲ್ಯ ಜೀವಗಳನ್ನು ಉಳಿಸಲು ಸಹಕಾರಿಯಾಗುತ್ತದೆ. ಇದು ಸಮಾಜದಲ್ಲಿ ಮಾನವೀಯತೆ ಮತ್ತು ಆರೋಗ್ಯ ಜಾಗೃತಿಯನ್ನು ಹೆಚ್ಚಿಸುತ್ತದೆ. 18 ರಿಂದ 60 ವರ್ಷದೊಳಗಿನ ಆರೋಗ್ಯವಂತರು ರಕ್ತದಾನ ಮಾಡಬಹುದು.
ಸದ್ಗುರು ಪ್ರದೀಪ್
ಮಾಲೀಕರು – ಸದ್ಗುರು ಆಯುರ್ವೇದ, ಹೊಸದುರ್ಗ
About The Author
Discover more from JANADHWANI NEWS
Subscribe to get the latest posts sent to your email.