January 29, 2026
IMG-20260105-WA0292.jpg

ನಾಯಕನಹಟ್ಟಿ-: ಮನಸ್ಸನ್ನು ಕಲಿಕೆಯೆಡೆಗೆ ಸೆಳೆಯುವ ವಿಭಿನ್ನವಾದ ಕಾರ್ಯಕ್ರಮ ಕಲಿಕಾ ಹಬ್ಬ, ಖುಷಿಯಿಂದ ಹಬ್ಬದ ವಾತಾವರಣ ಮೂಲಕ ವಿದ್ಯಾರ್ಥಿಗಳು ಕಲಿಕೆಯಲ್ಲಿ ತೊಡಗಿ ಎಂದು ಚಳ್ಳಕೆರೆ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್. ಸುರೇಶ್
ಹೇಳಿದರು.

ಸೋಮವಾರ ಸಮೀಪದ ಗಜ್ಜುನಗಾನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಸಮಗ್ರ ಶಿಕ್ಷಣ ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ, ಚಿತ್ರದುರ್ಗ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಕ್ಷೇತ್ರ ಸಮನ್ವಯ ಅಧಿಕಾರಿಗಳ ಕಚೇರಿ ಚಳ್ಳಕೆರೆ ಸಮೂಹ ಸಂಪನ್ಮೂಲ ಕೇಂದ್ರ ಎನ್ ಮಹದೇವಪುರ ಎಫ್ ಎಲ್ ಎನ್ ಕಲಿಕಾ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕಲಿಕಾ ಚೇತರಿಕೆ ಪೂರಕವಾಗಿ ಮಕ್ಕಳು ಚಟುವಟಿಕೆ ಸಂತೋಷದಾಯಕ ಕಲಿಕೆಯನ್ನು ಮಕ್ಕಳು ಕಲಿಯಬೇಕು ಎಂಬ ಹಿನ್ನೆಲೆಯಿಂದ ಸರ್ಕಾರ ಚಿಂತನೆ ಮಾಡಿದ್ದು, ಈ ಚಿಂತನೆ, ಸಲಹೆ ಹಾಗೂ ಮಾರ್ಗದರ್ಶನದ ಅಡಿಯಲ್ಲಿ ಚಳ್ಳಕೆರೆ ತಾಲ್ಲೂಕಿನಾದ್ಯಂತ ಕಲಿಕಾ ಹಬ್ಬದ ವಾತಾವರಣವನ್ನು ತುಂಬಾ ಉತ್ಸಾಹ, ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ
ಎ೦ದರು.

ಕಲಿಕಾ ಹಬ್ಬದಿಂದ ಮಕ್ಕಳ ಕಲಿಕೆಗೆ ಪ್ರೋತ್ಸಾಹ ಹಾಗೂ ಉತ್ತಮ ಭವಿಷ್ಯ ನಿರ್ಮಾಣ ಮಾಡಬೇಕಾಗಿದೆ ಶಿಕ್ಷಣ ಇಲಾಖೆ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಓದು ಕರ್ನಾಟಕ ಹಾಗೂ ಗಣಿತ ಗಣಕ ಮೂರೂ ಸಿಂಚನ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ ಇದರ ಎಲ್ಲಾ ಸಾರಾ ಕಲಿಕೆಯ ಫಲ ಪರಿಶೀಲನೆ ಮಾಡಲು ಕಲಿಕಾ ಹಬ್ಬವನ್ನು ಪ್ರತಿ ಕ್ಲಸ್ಟರ್ ಹಂತದಲ್ಲಿ ಒಂದನೇ ತರಗತಿಯಿಂದ 5ನೇ ತರಗತಿ ವಿದ್ಯಾರ್ಥಿಗಳು ಮೂಲಭೂತ ಸಾಕ್ಷರತೆ ಸಂಖ್ಯಾ ಜ್ಞಾನ ಯಾವ ರೀತಿ ಪಡೆದಿದ್ದಾರೆ ಪರಿಶೀಲನೆ ಮಾಡುವಂತ ಉದ್ದೇಶದಿಂದ ಈ ಕಲಿಕಾ ಹಬ್ಬವನ್ನು ಆಚರಿಸಲಾಗುತ್ತದೆ ಎಂದು ಅವರು ಹೇಳಿದರು.

ಸಮೂಹ ಸಂಪನ್ಮೂಲ ಅಧಿಕಾರಿ ಮಂಜು ಬಾಬು ಮಾತನಾಡಿದರು, ಸಮ ಸಮಾಜದ ಇಂದಿನ ಆಧುನಿಕ ಕಾಲದಲ್ಲಿ ಯಾವುದಾದರೂ ಸಂಬಂಧ ಗಟ್ಟಿಯಾಗಿ ಉಳಿದಿದೆ ಎಂದರೆ ಅದು ಸರ್ಕಾರಿ ಶಾಲೆಯಲ್ಲಿ ಕಲಿಯುವ ವಿದ್ಯಾರ್ಥಿಗಳು ಬೋಧಿಸುವ ಶಿಕ್ಷಕರ ಸಂಬಂಧ ಈ ಆಧುನಿಕ ವ್ಯವಸ್ಥೆಯಲ್ಲಿ ಗಟ್ಟಿಯಾಗಿ ಉಳಿದಿದೆ ಸರ್ಕಾರಿ ಶಾಲೆಯಲ್ಲಿ ಮೌಲ್ಯವನ್ನು ಕಲಿಸುವಲ್ಲಿ ಸಮಾಜದಲ್ಲಿ ಗಟ್ಟಿತನ ಉಳಿಸಿಕೊಳ್ಳಲು ಬದುಕುವ ಶಕ್ತಿಯನ್ನು ತುಂಬುವಲ್ಲಿ ಇವತ್ತಿನ ಸಮಾಜಕ್ಕೆ ಸರ್ಕಾರಿ ಶಾಲೆ, ಅವಶ್ಯಕತೆ ತುಂಬಾ ಇದೆ ಸರ್ಕಾರಿ ಶಾಲೆಯಲ್ಲಿ ಓದುವಂತ ವಿದ್ಯಾರ್ಥಿಗಳಿಗೆ ಸರ್ಕಾರ ಎಲ್ಲಾ ಮೂಲಭೂತ ಸೌಲಭ್ಯವನ್ನು ನೀಡಿದೆ ಪ್ರತಿಯೊಬ್ಬ ವಿದ್ಯಾರ್ಥಿಯು ಸಮಗ್ರವಾದ ಶಿಕ್ಷಣದ ಕಲಿಕೆಗೆ ಮುನ್ನುಡಿ ಬರೆಯಬೇಕಾಗಿದೆ ವಿದ್ಯಾರ್ಥಿಗಳು ಕಲಿಕೆಯಲ್ಲಿ ಎಮ್ಮರವಾಗಿ ಬೆಳೆಯಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ ಜಿ.ಎಸ್. ತಿಪ್ಪೇಸ್ವಾಮಿ, ತಿಮ್ಮಪ್ಪಯ್ಯನಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಶೈಲಾ ಮಂಜಣ್ಣ, ನಿವೃತ್ತ ಅಂಚೆ ನೌಕರ ಜಯಣ್ಣ, ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಪಲ್ಲವಿ ಶಿವಪ್ರಸಾದ್, ಸದಸ್ಯ ರೇಖಮ್ಮ, ಸಿಆರ್‌ಪಿ. ಸಿ. ಹೇಮಂತಪ್ಪ, ಲಿಂಗರಾಜ್, ಇ.ಸಿ.ಒ. ತಿಪ್ಪೇಸ್ವಾಮಿ, ಲಕ್ಷ್ಮಿಕಾಂತ್ ರೆಡ್ಡಿ, ಬಿ ಆರ್ ಸಿ ಆರ್ ಸದಾಶಿವಯ್ಯ
ಶಾಲೆಯ ಮುಖ್ಯ ಶಿಕ್ಷಕ ಇ.ಬಿ. ಬೊಮ್ಮಲಿಂಗಯ್ಯ, ಎನ್. ದೇವರಹಳ್ಳಿ ಎಚ್ ಎಂ ಶ್ರೀನಿವಾಸ್, ನಿವೃತ್ತ ಶಿಕ್ಷಕ ಸ್ವಾಮಿನಾಥ್, ಜಿ ಟಿ ಆನಂದ್, ಗಜ್ಜುಗಾನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ಜಿ.ಒ. ನಾಗರಾಜ್, ಕೆ.ಒ. ಪೆನ್ನೋಬಳಿ ಡಿ.ಸಿ. ಪಟೇಲ್, ಅತಿಥಿ ಶಿಕ್ಷಕಿ ಕೆ ಬಿ ರೋಜಾ,
ಸೇರಿದಂತೆ ಎನ್ ಮಹದೇವಪುರ ಕ್ಲಸ್ಟರ್ ವಿಭಾಗದ ಶಾಲಾ ಶಿಕ್ಷಕ- ಶಿಕ್ಷಕಿಯರು ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಜರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading