ವರದಿ: ಕೆ.ಟಿ.ಮೋಹನ್ ಕುಮಾರ್
ಸಾಲಿಗ್ರಾಮ (ಮೈಸೂರು ಜಿಲ್ಲೆ): ಸಾಲಿಗ್ರಾಮ ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಒಕ್ಕಲಿಗ ಸಮುದಾಯದ ಮುಖಂಡರುಗಳ ಸಭೆಯನ್ನು ಮಾಡಲಾಯಿತು.
ಸಾಲಿಗ್ರಾಮ ತಾಲೂಕು ವ್ಯಾಪ್ತಿಯ ಮಿರ್ಲೆ, ಚುಂಚನಕಟ್ಟೆ ಹಾಗೂ ಸಾಲಿಗ್ರಾಮ ಹೋಬಳಿಗಳ ವ್ಯಾಪ್ತಿಯಲ್ಲಿನ ಎಲ್ಲಾ ಗ್ರಾಮಗಳಲ್ಲಿರುವ ಒಕ್ಕಲಿಗ ಸಮುದಾಯದ ಜನರನ್ನು ಒಟ್ಟುಗೂಡಿಸಿ ಸಾಲಿಗ್ರಾಮ ತಾಲೂಕು ಒಕ್ಕಲಿಗರ ಸಂಘವನ್ನು ನೂತನವಾಗಿ ಪ್ರಾರಂಭಿಸಲಾಗುವುದು. ಸಂಘವನ್ನು ಎಲ್ಲರ ಸಹಮತ ಹಾಗೂ ಒಮ್ಮತದೊಂದಿಗೆ ಬಲಿಷ್ಠವಾಗಿ ಸಂಘಟಿಸುವ ಮೂಲಕ ಸಂಘದ ವತಿಯಿಂದ ಸಮುದಾಯದ ಜನರಿಗೆ ಅನುಕೂಲವಾಗುವಂತಹ ಕಾರ್ಯಗಳನ್ನು ಮಾಡಲಾಗುವುದು ಎಂದು ಸಭೆಯಲ್ಲಿ ಭಾಗವಹಿಸಿದ್ದ ಮುಖಂಡರುಗಳು ತಿಳಿಸಿದರು. ಸಂಘದ ಸದಸ್ಯತ್ವ ಬಯಸುವವರು ಒಂದು ಸಾವಿರ ರೂ ಹಣವನ್ನು ಪಾವತಿಸಿ ಸದಸ್ಯತ್ವವನ್ನು ಪಡೆಯಬೇಕು. ಸದಸ್ಯತ್ವವನ್ನು ಪಡೆಯ ಬಯಸುವವರು ಎಸ್.ಆರ್.ಪ್ರಕಾಶ್ ಹಾಗೂ ನಾಗೇಶ್ ಅವರುಗಳನ್ನು ಸಂಪರ್ಕಿಸಿ ಹಣ ಪಾವತಿಸಿ ಸದಸ್ಯತ್ವ ಪಡೆಯಬಹುದೆಂದು ತಿಳಿಸಿದ್ದಾರೆ.
ತಾಲೂಕಿನ ಒಕ್ಕಲಿಗ ಸಮುದಾಯದ ಎಲ್ಲಾ ಮುಖಂಡರುಗಳು, ಜನಪ್ರತಿನಿಧಿಗಳು, ಸಂಘ-ಸಂಸ್ಥೆಯವರು ಸಂಘದ ಸದಸ್ಯತ್ವವನ್ನು ಪಡೆಯುವ ಮೂಲಕ ಸಂಘದ ಬೆಳವಣಿಗೆಗೆ ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.
ಸಭೆಯಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಕುಪ್ಪಹಳ್ಳಿ ಸೋಮಶೇಖರ್, ಗ್ರಾ.ಪಂ.ಮಾಜಿ ಅಧ್ಯಕ್ಷ
ಎಸ್.ಆರ್.ಪ್ರಕಾಶ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಕರುಣ್ ಕುಮಾರ್, ಪಾಪಣ್ಣ, ಟ್ರಾಕ್ಟರ್ ಅನಂತ, ಎಸ್.ಜೆ.ಮಹೇಶ್, ತಾಲೂಕು ಕೃಷಿಕ ಸಮಾಜದ ನಿರ್ದೇಶಕ ಎಸ್.ಎ.ರವೀಶ್, ವಾಹನ ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್, ಗೂಡ್ಸ್ ಆಟೋ ಸಂಘದ ಅಧ್ಯಕ್ಷ ರಾಮು, ಮುಖಂಡರುಗಳಾದ ತಿಮ್ಮೇಗೌಡ, ಅಪ್ಪಾಜಿಗೌಡ, ಗುರುಪ್ರಸಾದ್, ಜ್ಯೋತಿವೆಂಕಟೇಶ್, ಸಾ.ರಾ.ಸತೀಶ್, ಡೈರಿಮಹೇಶ್, ನಾಗೇಶ್, ಮಟನ್ ಮಹದೇವ್, ಎಸ್.ಆರ್.ಗೋವಿಂದ, ಮಹೇಂದ್ರ, ಎಸ್.ಜೆ.ಗಿರೀಶ್ ಗೌಡ, ರವಿ, ಕುಮಾರ್, ಬಸವರಾಜು, ಸುರೇಶ, ರಾಜು, ಸೀನಣ್ಣ ಸೇರಿದಂತೆ ಹಲವರು ಭಾಗವಹಿಸಿದ್ದರು.
About The Author
Discover more from JANADHWANI NEWS
Subscribe to get the latest posts sent to your email.