ಚಳ್ಳಕೆರೆ
ಸರಕಾರದಿಂದ ಬರುವ ಸೌಲಭ್ಯಗಳನ್ನು ಅರ್ಹರಿಗೆ ಸಕಲಾಕ್ಕೆ ತಲುಪಿಸುವ ಜತೆಗೆ ಕುಡಿಯೂವ ನೀರು.ನೈರ್ಮಲ್ಯ. ಪರಿಸಕ್ಕೆ ಹೆಚ್ಚು ಒತ್ತು ನೀಡಿ ಮಾದರಿ ಗ್ರಾಮಪಂಚಾಯಿತಿ ಕಟ್ಟಡ ನಿರ್ಮಿಸುವಂತೆ ಶಾಸಕ ಟಿ.ರಘುಮೂರ್ತಿ ಹೇಳಿದರು.
ತಾಲೂಕಿನ ನಗರಂಗಂಗೆರೆ ಗ್ರಾಮಪಂಚಾಯಿತಿ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಗ್ರಾಮ ಪಂಚಾಯಿತಿ ಅನುದಾನ ಮತ್ತು ಮಹಾತ್ಮ ಗಾಂಧಿ ನರೇಗಾ ಯೋಜನೆಯ ಸಹಯೋಗದೊಂದಿಗೆ 65 ಲಕ್ಷರೂ ವೆಚ್ಚದ ನೂತನ ಕಟ್ಟಡಕ್ಕೆ ಭೂಮಿ ಭೂಜೆ ನೆರವೇರಿಸಿ ಮಾತನಾಡಿದರು.
ಗ್ರಾಮಪಂಚಸಯಿತಿಯ ಎಲ್ಲಾ ಸದಸ್ಯರು ಪಕ್ಷ ಬೇದ ಮರೆತು ಒಗ್ಗಟ್ಟಿನಿಂದ ಅಭಿವೃದ್ಧಿ ಕೆಲಗಳನ್ನು ಮಾಡುವ ಮೂಲಕ ಮಾದರಿ ಗ್ರಾಮಪಂಚಾಯಿತಿ ಮಾಡುವಂತೆ ಹೇಳಿದರು.
ಕಟ್ಟಡ ಕಾಮಗಾರಿ ಗುಣಮಟ್ಟ ಹಾಗೂ ನಿಗದಿತ ಸಮಯದೊಳಗೆ ಕಟ್ಟಡ ಕಾಮಗಾರಿ ಪೂರ್ಣಗೊಳಿಸುವಂತೆಕೆ.ಆರ್.ಐ.ಡಿ.ಎಲ್. ಇಲಾಖೆ ಅಧಿಕಾರಿ ನಟರಾಜ್ ಇದೇ ಸಂದರ್ಭದಲ್ಲಿ ಸೂಚಿಸಿದರು.


ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಮಂಗಳಾ.ಉಪಾಧ್ಯಕ್ಷ ಒಬ್ಬಣ್ಣ, ತಾಲ್ಲೂಕು ಗ್ಯಾರೆಂಟಿ ಸಮಿತಿ ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ, ತಾಲ್ಲೂಕು ಪಂಚಾಯತ್ ಕೆಡಿಪಿ ನಾಮ ನಿರ್ದೇಶನ ಸದಸ್ಯ ರಮೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವೀರಭದ್ರಯ್ಯ, ಶಶಿಧರ, ಮುಖಂಡರಾದ ಕುಮಾರಸ್ವಾಮಿ, ರವಿ, ದ್ಯಾಮಣ್ಣ, ರಾಜೇಶ್ವರಿ, ದೇವರಾಜ್, ಮೈನಕುಮಾರ್, ಇದಾಯತ್ ಉಲ್ಲ, ಶೈಲಪ್ಪ, ರಂಗಸ್ವಾಮಿ, ಷಣ್ಮುಖಪ್ಪ, ಸಂಜೀವಮೂರ್ತಿ, ಮಂಜುನಾಥ್, ತಾಪಂ ಇಒ ಶಶಿಧರ್. ಪಿಡಿಒ ರಾಮಚಂದ್ರಪ್ಪ ಇತರರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.