ಚಳ್ಳಕೆರೆ:ತಾಲೂಕಿನ ಎಲ್ಲಾ ಅಂಗಡಿ ಶಾಲಾ ಕಾಲೇಜುಗಳ ಕಚೇರಿಗಳ ನಾಮಫಲಕಗಳು ಹಾಗೂ ವ್ಯವಹಾರಿಕ ಬೋರ್ಡ್ ಗಳಲ್ಲಿ 60% ರಷ್ಟು ಕನ್ನಡ ನಾಮಪಲಕ ಕಡ್ಡಾಯವಾಗಿ ಜಾರಿಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಳಗದ ಸದಸ್ಯರು ಒತ್ತಾಯಿಸಿದ್ದಾರೆ.
ನಗರದ ತಾಲೂಕು ಕಚೇರಿ ಶಿರಸ್ತೆದಾರ ಮುನಿ ವೆಂಕಟಪ್ಪ ರವರಿಗೆ ಮನವಿ ಸಲ್ಲಿಸಿ ಮಾತನಾಡಿದ ಸಂಘಟನೆಯ ಅಧ್ಯಕ್ಷ ಮಂಜುನಾಥ್ ರಾಜ್ಯ ಸರ್ಕಾರ 2024ರ ಫೆಬ್ರವರಿಯಲ್ಲಿ ಜಾರಿಗೆ ತಂದ ಆದೇಶದ ಪ್ರಕಾರ ರಾಜ್ಯದ ವ್ಯವಹಾರಿಕ ಸಂಸ್ಥೆಗಳು ಅಂಗಡಿ ಮುಂಗಟ್ಟುಗಳು ಹೋಟೆಲ್ ಶಾಲೆ ಸೇರಿದಂತೆ ಎಲ್ಲಾ ಕಚೇರಿಗಳ ನಾಮಫಲಕಗಳಲ್ಲಿ ಶೇಕಡ 60ರಷ್ಟು ಕನ್ನಡದಲ್ಲಿ ಇರಬೇಕು ಎಂದು ಸ್ಪಷ್ಟವಾಗಿ ತಿಳಿಸಿದೆ ಆದರೆ ಇದುವರೆಗೂ ಚಳ್ಳಕೆರೆ ತಾಲೂಕಿನ ಅಂಗಡಿ ಶಾಲೆ ಹಾಗು ಪ್ರಚಾರ ನಾಮಫಲಕಗಳಲ್ಲಿ ಕನ್ನಡಕ್ಕಿಂತ ಹೆಚ್ಚಾಗಿ ಇಂಗ್ಲಿಷ್ ಮತ್ತು ಇತರೆ ಭಾಷೆಗಳಲ್ಲಿ ನಾಮಫಲಕಗಳು ಬಳಸುತ್ತಿದ್ದು ಇದು ಸರ್ಕಾರದ ಆದೇಶದ ನೇರ ಉಲ್ಲಂಘನೆಯಾಗಿದೆ ನಮ್ಮ ಕನ್ನಡ ಭಾಷೆ ರಾಜ್ಯದ ಸಂಸ್ಕೃತಿಯ ಹೆಗ್ಗುರುತಾಗಿದ್ದು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ನಾಮಫಲಕಗಳನ್ನು ಬದಲಾವಣೆ ಮಾಡಿಸುವ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಗೌರವ ಅಧ್ಯಕ್ಷ ಸಿ ಬೋಜರಾಜ ಪ್ರಧಾನ ಕಾರ್ಯದರ್ಶಿ ಚಂದ್ರಣ್ಣ ಯುವ ಘಟಕದ ಅಧ್ಯಕ್ಷ ಗಿರೀಶ್ ,ಮೋದಿನ್, ಮಂಜುನಾಥ, ತಿಪ್ಪೇಸ್ವಾಮಿ, ಶ್ರೀಶೈಲ, ಶೇಖರ್ ಮಹಬೂಬ್ ಭಾಷಾ, ಇಬ್ರಾಹಿಂ ,ಪ್ರಕಾಶ್, ಬೋರೆಶ್, ಸುರೇಶ್, ಉಮೇಶ್, ದಿನೇಶ್, ಓಂಕಾರಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು
About The Author
Discover more from JANADHWANI NEWS
Subscribe to get the latest posts sent to your email.