ವರದಿ:: ಕೆ.ಟಿ.ಓಬಳೇಶ್ ನಲಗೇತನಹಟ್ಟಿ
ನಾಯಕನಹಟ್ಟಿ::ಡಿ.4. ನಾವು ಬಳಸುವ ಶೌಚಾಲಯ ಸ್ವಚ್ಛವಾಗಿಟ್ಟುಕೊಳ್ಳುವುದರಿಂದ ಆರೋಗ್ಯಕರವಾದ ಜೀವನ ನಿರ್ವಹಣೆಗೆ ಪ್ರತಿಯೊಬ್ಬರು ಮುಂದಾಗಬೇಕು ಎಂದು ಅಧ್ಯಕ್ಷೆ ಪಾಪಮ್ಮ ಆನಂದಪ್ಪ ಹೇಳಿದರು.
ಬುಧವಾರ ಹೋಬಳಿಯ ಅಬ್ಬೇನಹಳ್ಳಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ
“ವಿಶ್ವ ಶೌಚಾಲಯ ದಿನ” ನಮ್ಮ ಶೌಚಾಲಯ ನಮ್ಮ ಗೌರವ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದರು.ಅಬ್ಬೇನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಪ್ರತಿ ಹಳ್ಳಿಗಳಲ್ಲಿ ಪ್ರತಿಯೊಬ್ಬರು ಶೌಚಾಲಯಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಇಂದಿಗೂ ನಮ್ಮ ಗ್ರಾಮೀಣ ಪ್ರದೇಶದಲ್ಲಿ ಬಹಳಷ್ಟು ಭಾಗದಲ್ಲಿ ಶೌಚಾಲಯವಿಲ್ಲದೆ ಬಹಿರ್ದೆಸೆ ಪದ್ಧತಿ ಜಾರಿಯಲ್ಲಿದ್ದು ಸರ್ಕಾರದಿಂದ ಸಾಕಷ್ಟು ಯೋಜನೆಗಳ ಮೂಲಕ ಶೌಚಾಲಯ ನಿರ್ಮಾಣಕ್ಕೆ ಅನುದಾನವನ್ನು ನೀಡುತ್ತದೆ ಪ್ರತಿಯೊಬ್ಬರು ಸದುಪಯೋಗಪಡಿಸಿಕೊಳ್ಳಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಪಿಡಿಒ ಎಂ. ಮೋಹನ್ ದಾಸ್ ಮಾತನಾಡಿದರು ಅಬ್ಬೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಪ್ರತಿ ಹಳ್ಳಿಗಳಲ್ಲಿ ಸ್ವಚ್ಛತೆಯ ಬಗ್ಗೆ ಎಲ್ಲಾ ಗ್ರಾಮಗಳಲ್ಲಿ ಜಾಗೃತಿ ಮೂಡಿಸಲಾಗಿದೆ ಇಂದು ಅಬ್ಬೇನಹಳ್ಳಿ ಗ್ರಾಮದ ಪ್ರತಿ ಕೇರಿ ಮತ್ತು ವಾರ್ಡ್ ಹಳ್ಳಿಗಳಲ್ಲಿ ಆಂದೋಲನವನ್ನು ಮಾಡಲಾಗಿದೆ ಪ್ರತಿಯೊಬ್ಬರು ಸ್ವಚ್ಛತೆಗೆ ಮೊದಲ ಆದ್ಯತೆ ನೀಡುವಂತೆ ಒತ್ತಾಯಿಸಿದರು.
ಇನ್ನೂ ಸದಸ್ಯ ಮಾಜಿ ಅಧ್ಯಕ್ಷ ಬಿ .ಶಂಕರ್ ಸ್ವಾಮಿ ಮಾತನಾಡಿದರು. ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಒಂದೊಂದು ಶೌಚಾಲಯ ಇರಬೇಕು ಶೌಚಾಲಯವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು ಸ್ವಚ್ಛತೆಯನ್ನ ಕಾಪಾಡಿಕೊಂಡು ಮತ್ತು ಗ್ರಾಮವನ್ನು ಸಹ ಸ್ವಚ್ಛತೆ ಕಾಪಾಡುವ ಮೂಲಕ ಸ್ವಚ್ಛತೆಗೆ ಮಾದರಿಯ ಗ್ರಾಮ ಪಂಚಾಯತಿಯನ್ನಾಗಿಸಬೇಕು ಎಂದರು.
ಇನ್ನೂ ಇದೇ ವೇಳೆ ಇತ್ತೀಚಿಗೆ ಗ್ರಾಮ ಪಂಚಾಯಿತಿ ಉಪಚುನಾವಣೆಯಲ್ಲಿ ಆಯ್ಕೆಯಾದ ನೂತನ ಗ್ರಾಮ ಪಂಚಾಯಿತಿ ಸದಸ್ಯರಾದ ಪಿ.ಜಿ .ಗಜೇಂದ್ರ ಹಾಗೂ ಕವಿತಾ ರವರನ್ನು ಹೂ ಮಾಲೆ ಹಾಕಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಅಬ್ಬೇನಹಳ್ಳಿ ಉಪಾಧ್ಯಕ್ಷೆ ಬಿ. ಅನಿತಮ್ಮ ಜಿ.ಎಂ. ಜಯಣ್ಣ, ಸದಸ್ಯರಾದ ಪಿ.ಜಿ.ಗಜೇಂದ್ರ, ಕೆ.ಸಿ.ರಾಧ, ಪಡ್ಲ ಬೋರಯ್ಯ,ಶೇಖರಪ್ಪ, ಕವಿತಾ, ಓ ವಿ.ಸಣೋಬಯ್ಯ, ಜೆ.ಪಿ. ಪ್ರಿಯಾಂಕ, ಪಿ.ಟಿ. ನಾಗರಾಜ್,ಸಿದ್ದಲಿಂಗಮ್ಮ, ಬಿ.ಗುಂಡಪ್ಪ, ಬಿ.ಸಣ್ಣ ಪಾಲಯ್ಯ, ಸುಮೀತ್ರಮ್ಮ, ಮಾರಕ್ಕ,
ಹಾಗೂ ಮುಖಂಡರಾದ ಕೊರಡಿಹಳ್ಳಿ ಆನಂದಪ್ಪ, ಎ.ಪಿ. ರೇವಣ್ಣ, ಜಿ.ಎಂ ಜಯಣ್ಣ. ಕೊರಡಿಹಳ್ಳಿ ತಿಪ್ಪೇಶ್ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿಗಳಾದ ಕಾರ್ಯದರ್ಶಿ ಗುರುಸ್ವಾಮಿ ,ಬಿಲ್ ಕಲೆಕ್ಟರ್ ಎ. ಚಂದ್ರಶೇಖರ್, ಎತ್ತು ಎಸ್ ಶಿವತಿಪ್ಪೇಸ್ವಾಮಿ, ಎಂ.ಪಿ. ಈಶ್ವರಪ್ಪ ,ಸುನಿಲ್, ಉಪಸ್ಥಿತರಿದ್ದರು
About The Author
Discover more from JANADHWANI NEWS
Subscribe to get the latest posts sent to your email.