September 16, 2025
d4-tm1.jpg

ವರದಿ:ನಾಗತಿಹಳ್ಳಿ ಮಂಜುನಾಥ್

ಹೊಸದುರ್ಗ: ಸರ್ಕಾರಿ ನೌಕರಿಯಲ್ಲಿ ಇದ್ದವರು ನಿವೃತ್ತಿಯಾದ ನಂತರ ಅರಾಮಾಗಿ ಮನೆಯಲ್ಲಿ ಮಕ್ಕಳು ಮಮ್ಮೋಕ್ಕಳೊಂದಿಗೆ ಕಾಲ ಕಳೆಯುತ್ತಾರೆ, ಕೆಲವರು ಸಮಾಜ ಸೇವೆಯ ಕಾರ್ಯಗಳಲ್ಲಿ ತೋಡಗಿಸಿಕೊಳ್ಳುತ್ತಾರೆ ನಮ್ಮ ಬದುಕು ಸಾರ್ಥಕವಾಗಬೇಕಾದರೆ ನಿವೃತ್ತಿಯ ನಂತರ ಸಮಾಜ ಸೇವೆ ಮಾಡುವ ಮೂಲಕ ಸೇವಾ ವೃತ್ತಿಯಲ್ಲಿ ಪ್ರವೃತ್ತರಾಗಬೇಕು ಎಂದು ಕರ್ನಾಟಕ ಪ್ರಗತಿ ಗ್ರಾಮೀಣ ಬ್ಯಾಂಕಿನ ರೀಜಿನಲ್ ಮ್ಯಾನೇಜರ್ ಹರಿಪ್ರಸಾದ್ ಅವರು ಕಿವಿ ಮಾತು ಹೇಳಿದರು.
ಪಟ್ಟಣದ ಎಲ್.ಎಲ್.ವಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ಪ್ರಗತಿ ಗ್ರಾಮೀಣ ಬ್ಯಾಂಕಿನ ನೌಕರ ಬಿ.ಎಂ.ಆನAದ್ ಅವರ ವಯೋ ನಿವೃತ್ತಿ ಬೀಳ್ಕೂಡಿಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಬಿ.ಎಂ.ಆನAದ್ ಅವರು ೪೦ ವರ್ಷಗಳ ಕಾಲ ಕ್ರ‍್ಕ್ ಅಂಡ್ ಕ್ಯಾಷಿಯರ್ ಆಗಿ ಸುಧೀರ್ಷ ಸೇವೆಯನ್ನ ನೀಡಿದ್ದಾರೆ, ೪೦ ವರ್ಷಗಳ ಸೇವೆಯಲ್ಲಿದ್ದ ಅವರು ಎಂದೂ ಸಹಾ ಕರ್ತವ್ಯಕ್ಕೆ ದ್ರೋಹ ಬಗೆದವರಲ್ಲಾ,ಕೆÀಲಸ ಮಾಡುವ ಬ್ಯಾಂಕಿನಲ್ಲಿ ಇಂದು ಸಿಬ್ಬಂಧಿಯ ಕೋರತೆ ಇದೆ ಎಂದು ಗೋತ್ತಾದರೆ ಅವರು ಅನಾರೋಗ್ಯವಾಗಿದ್ದೂ ಸಹಾ ಕರ್ತವ್ಯಕ್ಕೆ ಹಾಜುರಾಗುತ್ತಿದ್ದರು ಎಂದು ಶ್ಲಾಘನೀಯ ಮಾತುಗಳನ್ನ ಆಡಿದರು.
ಜಿಲ್ಲೆಯ ಹಲವು ಕಡೆ ಅವರು ೩೦ ವರ್ಷಗಳ ಕಾಲ ಯಶಸ್ವಿಯಾಗಿ ಸೇವೆ ಸಲ್ಲಿಸಿ ಹೊಸದುರ್ಗದಲ್ಲಿ ಹೆಚ್ಚು ಸುಧೀರ್ಘವಾಗಿ ೧೦ ವರ್ಷಗಳ ಕಾಲ ಸೇವೆÀ ಸಲ್ಲಿಸಿ ಹೊಸದುರ್ಗದಲ್ಲೆ ನಿವೃತ್ತಿ ಹೊಂದಿದ್ದಾರೆ, ಅವರು ಹೇಳಿದ ಕೆಲಸವನ್ನ ಚಾಚು ತಪ್ಪದೆ ಮಾಡುವಂತಹ ವ್ಯಕ್ತಿತ್ವ ಅವರದು ತಮ್ಮ ಕೆಲಸದ ಅವಧಿಯಲ್ಲಿ ಸರಿಯಾಗಿ ಕರ್ತವ್ಯವನ್ನ ನಿಭಾಯಿಸಿದ್ದಾರೆ ಎಂಬ ಮೆಚ್ಚುಗೆ ವ್ಯಕ್ತಪಡಿಸಿದ ಅವರು ನಿವೃತ್ತಿಯ ನಂತರ ಅವರು ಸಮಾಜಕ್ಕೆ ಒಳಿತಾಗುವ ಕೆಲಸವನ್ನ ಮಾಡಿ ಸಮಾಜ ಸೇವೆ ಮಾಡುವ ಮೂಲಕ ಅವರ ಬದುಕು ಸಾರ್ಥವಾಗಲಿ ಎಂದು ಶುಭ ಹಾರೈಸಿದರು.
ಗೌರವ ಸ್ವೀಕರಿಸಿ ಮಾತನಾಡಿದ ಬಿ.ಎಂ.ಆನAದ್ ಜಿಲ್ಲೆಯ ವಿವಿಧ ಕಡೆ ಸೇವೆ ಸಲ್ಲಿಸಿರುವ ನನಗೆ ಗ್ರಾಮೀಣ ಪ್ರದೇಶದಲ್ಲಿ ರೈತರು ಹಾಗೂ ಸಾರ್ವಜನಿಕರು ತುಂಭಾ ಸಹಕರಿಸಿದ್ದಾರೆ ಅವರಿಗೆ ನನ್ನ ಅನಂತ ಧನ್ಯವಾದಗಳು ಎಂದ ಅವರು
೪೦ ವರ್ಷಗಳ ಕಾಲ ಸೇವೆ ಮಾಡಿರುವುದು ನನಗೆ ತುಂಭಾ ಸಂತೋಷವನ್ನ ತಂದು ಕೊಟ್ಟಿದೆ ನಾನು ಮಾಡುವ ಕೆಲಸದಲ್ಲಿ ಯಶಸ್ಸು ಕಂಡು ಕೊಂಡಿದ್ದೇನೆ, ನನ್ನನ್ನ ಎಲ್ಲಾ ಅಧಿಕಾರಿ ವರ್ಗದವರು ಮತ್ತು ಸಿಬ್ಬಂಧಿಯವರು ಪ್ರೀತಿ ವಿಶ್ವಾಸದಿಂದ ನಡೆಸಿಕೊಂಡಿದ್ದಾರೆ ಎಂಬ ಹರ್ಷ ವ್ಯಕ್ತಪಡಿಸಿದರು.
ಈ ಸಂಧರ್ಬದಲ್ಲಿ ಲೀಡ್ ಬ್ಯಾಂಕ್ ವ್ಯವಸ್ಧಾಪಕ ಕುಮಾರ್, ಹೊಸದುರ್ಗ ಕರ್ನಾಟಕ ಪ್ರಗತಿ ಗ್ರಾಮೀಣ ಬ್ಯಾಂಕಿನ ವ್ಯವಸ್ಧಾಪಕ ಎ.ಎಸ್.ಶಂಕರ್, ಮುದ್ದೇಬೋರೇನಹಳ್ಳಿ ಬ್ಯಾಂಕ್ ಅಧಿಕಾರಿ ಗುರುಮೂರ್ತಿಮಠ್, ನಿವೃತ್ತ ಅಧಿಕಾರಿ ಬಿ.ದೇವರಾಜ್, ತಾಲೂಕು ಕಛೇರಿ ನಿವೃತ್ತ ಶಿರಸ್ತೆದಾರ್ ಹಾಗೂ ಚುನಾವಣಾಧಿಕಾರಿ ಬಿ.ಕೆ.ನಾಗರಾಜಪ್ಪ, ನಿವೃತ್ತ ಉಪಾಧ್ಯಾಯ ರಾಜಶೇಖರ್‌ಮಂಡಿಮಠ್, ನಿವೃತ್ತ ಉಪನ್ಯಾಸಕ ನಾರಾಯಣಮೂರ್ತಿ ಸೇರಿದಂತೆ ಬ್ಯಾಂಕಿನ ಸಿಬ್ಬಂಧಿವರ್ಗದವರು ಗ್ರಾಹಕರು, ಸ್ನೇಹಿತರು ಹಿತೈಶಿಗಳು ಸೇರಿದಂತೆ ಕುಟುಂಬ ವರ್ಗದವರು ಉಪಸ್ಧಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading