
ಚಳ್ಳಕೆರೆ: ಕಚೇರಿಗೆ ಬಂದ ಸಾರ್ವಜನಿಕರಿಗೆ ಕೆಲಸ ಮಾಡದೆ ಅಲೆದಾಡುವ ಅಧಿಕಾರಿಗಳು ವರ್ಗಾವಣೆ ಪಡೆಯುವಂತೆ ಶಾಸಕ ಟಿ.ರಘುಮೂರ್ತಿ ಅಧಿಕಾರಿಗಳ ವಿರುದ್ದ ಎಚ್ಚರಿಕೆ ನೀಡಿದ್ದಾರೆ.
ಚಳ್ಳಕೆರೆ ನಗರದ ನಗರಸಭೆ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಸದಸ್ಯರಾದ ಜಯಲಕ್ಷ್ಮಿ, ಪ್ರಮೋದ್ ,ಶ್ರೀನಿವಾಸ್ ಮಾತನಾಡಿ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿರುವುದರಿಂದ ಮಕ್ಕಳ ಮೇಲೆ ದಾಳಿ ಮಾಡುತ್ತಿವೆ, ಬೀದಿ ನಾಯಿಗಳಿಗೆ ಕಡಿವಾಣ ಹಾಕುವಂತಡ ಪ್ರತಿ ಸಭೆಯಲ್ಲಿ ಗಮನ ಸೆಳೆದರೂ ಪ್ರಯೋಜನವಾಗಿಲ್ಲಎಂದು ಆರೋಪಿಸಿದರು.
ಶಾಸಕ ಟಿ.ರಘುಮೂರ್ತಿ ಮಾತನಾಡಿ ಬೀದಿ ನಾಯಿಗಳ ಕಡಿವಾಣಕ್ಕೆ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು, ನಾಯಿಗಳಿಂದ ಅನಾವುವಾಗುವ ತನಕ ಸುಮ್ಮನೆ ಇದ್ದರೆ ಹೇಗೆ ಬೀದಿ ನಾಯಿಗಳಿಗೆ ಕಡಿವಾಣ ಹಾಕಬೇಕು ಎಂದು ನಗರಸಭೆ ಪೌರಾಯುಕ್ತರಿಗೆ ಶಾಸಕರು ಸೂಚನೆ ನೀಡಿದರು.
ವೀರಭದ್ರಪ್ಪ.ಮಲ್ಲಿಕಾರ್ಜುನ.ಕವಿತ ಧ್ವನಿಗೂಡಿಸಿ ಎಸ್ಸಿ, ಎಸ್ ಟಿ ವಿದ್ಯಾರ್ಥಿಗಳ ಮೂರು ವರ್ಷದ ವಿದ್ಯಾರ್ಥಿ ವೇತನ ವಿಳಂಬ, ಪೌರಕಾರ್ಮಿಕರ ವಿದ್ಯಾರ್ಥಿಗಳಿಗೂ ವೇತನ, ಲ್ಯಾಬ್ ಟಾಪ್ ವಿತರಣೆ ವಿಳಂಬ ಮಾಡುವುದು, ವಿದ್ಯಾರ್ಥಿಗಳ ಸೌಲಭ್ಯಗಳಿಗಾಗಿ ಅರ್ಜಿ ಹಾಕಿದರೆ, ಅರ್ಜಿಗಳನ್ನು ನಗರಸಭೆ ಅಧಿಕಾರಿ ಗುರುಪ್ರಸಾದ್ ಕಳುಯುತ್ತಾರೆಂದು ಆರೋಪ ಮಾಡಿದರು.














ಶಾಸಕ ಟಿ.ರಘುಮೂರ್ತಿ ಅಧಿಕಾರಿ ವಿರುದ್ದ ಗರಂ ಆಗಿ ನಿಮ್ಮಿಂದ ಎಸ್ ಸಿ, ಎಸ್ ಟಿ ಅನುದಾನ ಬಳಕೆ ಮಾಡದೆ ನಿರ್ಲಕ್ಷ್ಯ ವಹಿಸಿರುವುರಿದಂದ ಮೂರು ವರ್ಷಗಳಿಂದ ವಿದ್ಯಾರ್ಥಿಗಳಿಗೆ ವೇತನ ಕೈತಪ್ಪಿದೆ. ಇದಕ್ಕೆ ನೀವೇ ಹೊಣೆಗಾರರು ಎಂದು ಗುರುಪ್ರಸಾದ್ ಗೆ ಶಾಸಕ ಟಿ.ರಘು ಮೂರ್ತಿ ಕ್ಲಾಸ್ ತೆಗೆದುಕೊಂಡು, 15 ದಿನಗಳೊಳಗೆ ಎಸ್ ಎಸಿ, ಎಸ್ ಟಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕಲ್ಪಿಸಬೇಕು ಎಂದು ನಗರಸಭೆ ಪೌರಾಯುಕ್ತರಿಗೆ ಸೂಚನೆ ನೀಡಿದರು.
ಸದಸ್ಯೆ ತಿಪ್ಪಮ್ಮ. ಸುಜಾತ ಮಾತನಾಡಿ ನಗರದಲ್ಲಿ ಚರಂಡಿಗಳಿಗೆ ಮೂರು ತಿಂಗಳಾದರೂ ಬ್ಲೀಚಿಂಗ್ ಫೌಡರ್ ಹಾಕಲ್ಲ, ಕೇಳಿದರೆ ಖಾಲಿಯಾಗಿದೆ ಎಂಬ ಉತ್ತರ ನೀಡುತ್ತಾರೆ ನಾವು ಬ್ಲೀಚಿಂಗ್ ಪೌಡರ್ ನೋಡೇಯಿಲ್ಲ ಎಂದು ಸಭೆ ಗಮನ ಸೆಳೆದರು.
ಶಾಸಕ ಟಿ.ರಘುಮೂರ್ತಿ ಮಾತಮಾಡಿ ಅನುದಸನ ವಿದ್ದರೂ ಏಕೆ ಖರೀದಿ ಮಾಡಿಲ್ಲಎಲ್ಲದಕ್ಕೂ ಕಾನೂನು ಹೇಳ ಬೇಡಿ ಕೂಡಲೆ ಖರೀದಿಸಿ ಸ್ವಚ್ಚತೆ ಕಾಪಾಡಿ ಎಂದರು.
ಶ್ರೀನಿವಾಸ್ ಮಾತನಾಡಿ ನಗರ ವಿಸ್ತಾರವಾಗಿದೆ ಪೌರಕಾರ್ಮಿಕರ ಸಂಖ್ಯೆ ಕಡಿಮೆ ಇರುವಯದರಿಂದ ಸ್ವಚ್ಚತೆಗೆ ಸಮಸ್ಯೆಯಾ್ಇದೆ ಹೆಚ್ಚುವರಿಗೆ ಪೌರಕಾರ್ಮಿಕರನ್ನು ನೇಮಕ ಮಾಡಿಕೊಳ್ಳುವಂತೆ ತಿಳಿಸಿದರು.
ಪರಿಸರ ಇಂಜಿನಿಯರ್ ನರೇಂದ್ರಬಾಬು ಮಾತನಾಡಿ 22 ಪೌರಕಾರ್ಮಿಕರ ನೇಮಕಕ್ಕೆ ಆದೇಶ ಬಂದಿದ್ದು 15 ದಿನಗಳ ಒಳಗೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದರು.
ನೂತನಸದಸ್ಯೆ ಶಿಲ್ಪ ಮಾತನಾಡಿ ನಾಲ್ಕನೇ ವಾರ್ಡ್ ನಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆದಿಲ್ಲ ರಸ್ತೆ ಚರಂಡಿ ಮಾಡಿಸಿ ಶಾಲಾ ಆವರಣದಲ್ಲಿ ಮರವಿದ್ದು ಬೀಳುವ ಹಂತ ತಲುಪೆ ಅಪಾಯಕ್ಕು ಮುನ್ನ ತೆರವುಗೊಳಿಸಿ ಎಂದರು.
ಮಲ್ಲಿಕಾರ್ಜ್ .ಪ್ರಮೋದ್ .ರಾಘವೇಂದ್ರಾತನಾಡಿ ಇ ಖಾತೆ ಅರ್ಜಿ ಸಲ್ಲಿಸಿದರೆ ಅನ್ ಲೈನ್ ಅರ್ಜಿ ಹಾಕಲ್ಲ ಪದೇ ಪದೆ ಅಲೆದಾಡಿಸುತ್ತಾರೆ ಕಡತಗಳೇ ನಾಪತ್ತೆಯಾಗುತ್ತಿವೆ ಯಾವುದೇ ಕೆಲಸಗಳು ಆಗುತ್ತಿಲ್ಲ ಎಂದು ದೂರಿದರು.
ಕಂದಾಯ ಅಧಿಕಾರಿ ಸತೀಶ್ ಮಾತನಾಡಿ ನನ್ನ ಲಾಗಿನ್ ಗೆ ಬರುತ್ತವೆ ಪೈಲ್ ಬರಲ್ಲ ಎಂದರು.
ಶಾಸಕ ಟಿ. ರಘುಮೂರ್ತಿ ಮಾತನಾಡಿ ಇ ಖಾತೆ ಮಾಡಲು ಎಷ್ಟು ದಿನಬೇಕು ಅರ್ಜಿ ಸ್ವೀಕರಿಸುವಾಗಲೇ ಪರಿಶೀಲನೆ ಮಾಡಿ ಅರ್ಜಿಗಳನ್ನು ಸ್ವೀಕರಿಸಿ ಆನ್ ಲೈನ್ ಹಾಕ ಬೇಕು ನಿಗದಿತ ಅವದಿಯೊಳಗೆ ಇ ಖಾತೆ ನೀಡಬೇಕು.
ಜನರಿಗೆ ಸ್ಪಂದಿಸಿ ಕೆಲಸಬಮಾಡದೆ ಬಹಳ ವರ್ಷಗಳಿಂದ ಇದ್ದರೂ ಕೆಲಸ ಮಾಡದ ಸಿಬ್ಬಂದಿಗಳಿಗೆ ಹುದ್ದೆಯಿಂದ ಬಿಡುಗಡೆಗೊಳಿಸಿ ಎಂದರು.
ಈ ವೇಳೆ ನಗರಸಭೆ ಅಧ್ಯಕ್ಷೆ ಜೈತುನ್ಬಿ, ತಹಶೀಲ್ದಾರ್ ರೇಹಾನ್ ಪಾಷಾ, ನಗರಸಭೆ ಪೌರಾಯುಕ್ತ ಜಗ್ಗರೆಡ್ಡಿ .ವ್ಯವಸ್ಥಾಪಕ ಲಿಂಗರಾಜ್ ನಗರಸಭೆ ಸದಸ್ಯರು ಹಾಗೂ ಕಚೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.