
ನಾಯಕನಹಟ್ಟಿ : ಕಾಯಕಯೋಗಿ, ಮಾಡಿದಷ್ಟು ನೀಡು ಭಿಕ್ಷೆ ಎಂಬ ನಾನ್ನುಡಿಯೊಂದಿಗೆ ನಿರ್ಮಿಸಿದಂತಹ ಚಿಕ್ಕೆಕೆರೆ 25 ವರ್ಷಗಳ ನಂತರ ಕೋಡಿ ಬಿದ್ದಿರುವುದರಿಂದ ವೈನ್ ನಿಗಮ ಮಂಡಳಿ ಅಧ್ಯಕ್ಷ ಡಾ|| ಯೋಗೇಶ್ ಬಾಬು ಬಾಗಿನ ಅರ್ಪಿಸಿದರು.










ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಬಾಗಿನ ಅರ್ಪಣೆ ಕಾರ್ಯಕ್ರಮಕ್ಕೆ ನಮ್ಮ ಸ್ನೇಹಿತರು ಹಾಗೂ ಸುತ್ತಮುತ್ತಲ ಗ್ರಾಮಸ್ಥರು, ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ನಮ್ಮನ್ನು ಆಹ್ವಾನಿಸಿದ್ದರು. ಬೇರೆ ಬೇರೆ ಕಾರ್ಯಕ್ರಮಗಳ ನಿಮಿತ್ತ ಬಾಗಿನ ಅರ್ಪಿಸಲು ಆಗಿರಲಿಲ್ಲ. ಶ್ರೀ ಗುರು ತಿಪ್ಪೇರುದ್ರಸ್ವಾಮಿಯ ಆಶೀರ್ವಾದದಿಂದ ಚಿಕ್ಕಕೆರೆ ಕೋಡಿ ಬಿದ್ದಿರುವುದು ತುಂಬಾ ಸಂತೋಷದ ವಿಷಯ. ಎಲ್ಲರೂ ಸಂಭ್ರಮ ಪಡುವಂತ ವಿಚಾರ, ಇಂಥ ವಿಚಾರದಲ್ಲಿ ನಾವು ಕೂಡ ಬಂದು ಗಂಗಾ ಮಾತೆಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದ್ದೇವೆ. ಈ ಭಾಗದ ರೈತರು, ಕೂಲಿ ಕಾರ್ಮಿಕರು, ಎಲ್ಲ ವರ್ಗದ ಜನರ ಸುಖ,ಶಾಂತಿ, ನೆಮ್ಮದಿ ಸಮೃದ್ಧಿಯಿಂದ ಇರಲಿ ಅಂತ ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ ಎಂದರು.
ನಾನು ಒಬ್ಬ ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ, ಈ ಕ್ಷೇತ್ರವನ್ನು 15 ವರ್ಷಗಳ ಕಾಲ ಹಗಲು ರಾತ್ರಿ ಎನ್ನದೆ ಪಕ್ಷ ಸಂಘಟನೆ ಮಾಡಿದ್ದೇನೆ. ಮೊಳಕಾಲ್ಮೂರು ಶಾಸಕ ಎನ್.ವೈ.ಗೋಪಾಲಕೃಷ್ಣ ಗೆಲುವಿಗೆ ಶ್ರಮ ವಹಿಸಿದ್ದೇನೆ. ರಾಜ್ಯದ ಮೂರು ಉಪಚುನಾವಣೆ ಸಂಡೂರು, ಶಿಗ್ಗಾವಿ, ಚನ್ನಪಟ್ಟಣ ಈ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಭರ್ಜರಿ ಜಯಗಳಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶ್ರೀಗುರು ತಿಪ್ಪೇರುದ್ರಸ್ವಾಮಿ ಕಟ್ಟಿಸಿದ ಚಿಕ್ಕಕೆರೆ ಕೋಡಿ ಬಿದ್ದು ಮೈತುಂಬಿ ಹರಿದಿರುವುದು ನಮಗೆಲ್ಲ ಸಂತಸವಾಗಿದೆ, ಈ ಭಾಗದ ಜನರಿಗೆ ಕೆರೆ ಮೇಲೆ ಅಭಿಮಾನವಿರುವಂತಹ ಮತ್ತು ಗೌರವವಿರುವಂತಹರು ಕೆರೆಗೆ ಬಂದು ಬಾಗಿನ ಅರ್ಪಿಸುವುದಕ್ಕೆ ಎಲ್ಲಾರಿಗೂ ಹಕ್ಕು ಇದೆ. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಖಡಕ್ಕಾಗಿ ಉತ್ತರಿಸಿದರು.
ಇದು ಸರ್ಕಾರಿ ಕಾರ್ಯಕ್ರಮ ಅಲ್ಲ, ನನ್ನ ವೈಯಕ್ತಿಕವಾಗಿ ಬಾಗಿನ ಅರ್ಪಿಸುವುದಕ್ಕೆ ಬಂದಿದ್ದೇನೆ. ನಾನು ಒಬ್ಬ ನಿಗಮ ಮಂಡಳಿಯ ಅಧ್ಯಕ್ಷನಾಗಿದ್ದೇನೆ. ಕಳೆದ ಬಾರಿ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ದೆ ಮಾಡಿ ಸೋತಿದ್ದೇನೆ. ಕೆರೆ ಬಾಗಿನ ಅರ್ಪಿಸುವುದಕ್ಕೆ ನನಗೂ ಸಹ ಹಕ್ಕು ಇದೆ ಎಂದು ಹೇಳಿದರು.
ಈ ವರ್ಷದಲ್ಲಿ ಹೆಚ್ಚು ಮಳೆ ಬಿದ್ದಿರುವ ಕಾರಣ ಎಲ್ಲಾ ಕೆರೆಗಳು ತುಂಬಿ ಹರಿದಿದ್ದು, ರೈತರ ಬೋರ್ ವೆಲ್‌ಗಳಲ್ಲಿ ನೀರು ಹೆಚ್ಚಾಗಿ ಬೆಳೆಗಳಿಗೆ ಅನುಕೂಲವಾದೆ , ಜಾನುವಾರುಗಳಿಗೆ ಮೇವು, ಗ್ರಾಮಸ್ಥರಿಗೆ ಕುಡಿಯುವ ನೀರಿನ ಪೂರೈಕೆಗೆ ಅನುಕೂಲವಾಗಿದೆ. ರೈತರ ಬದುಕು ಹಸನಾಗಲಿ, ಅವರ ಮುಖದಲ್ಲಿ ಮಂದಹಾಸ ಮೂಡಲಿ ಎಂದು ಗಂಗಾ ಮಾತೆಗೆ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಾದ ಜಗದೀಶ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹಿಂದುಳಿದ ವರ್ಗ, ಎಸ್.ಟಿ. ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಹೇಮಣ್ಣ ಕಾಲುವೆಹಳ್ಳಿ, ಎಸ್.ಟಿ.ಪಾಲಯ್ಯ, ಹರೀಶ್ ಯುವ ಕಾಂಗ್ರೆಸ್ ಅಧ್ಯಕ್ಷರು ಬ್ಲಾಕ್ ತಳಕು ಮತ್ತು ನಾಯಕನಹಟ್ಟಿ, ಕರ್ನಾಟಕ ರಾಜ್ಯದ ರೈತ ಸಂಘ ಹಸಿರು ಸೇನೆ ವಾಸುದೇವಮೇಟಿ ಬಣದ ನಾಯಕನಹಟ್ಟಿ ಹೋಬಳಿ ಅಧ್ಯಕ್ಷ ಡಾ.ನಾಗರಾಜ್ ಮೀಸೆ, ಜಿಲ್ಲಾ ಕಾರ್ಯದರ್ಶಿ ನವೀನ್ ಮದಕರಿ, ಕರವೇ ಹೋಬಳಿ ಉಪಾಧ್ಯಕ್ಷ ಸಿ.ಎಸ್.ರಾಘವೇಂದ್ರ, ಮಂಜುನಾಥ ಕೆ.ಎಂ., ರಾಜಣ್ಣ ಮಾಜಿ ಗ್ರಾ.ಪಂ.ಅಧ್ಯಕ್ಷ ಎನ್.ದೇವರಹಳ್ಳಿ, ಮಹದೇವರಪುರ ಬೋರಯ್ಯ ಮಾಜಿ ಗ್ರಾ.ಪಂ ಉಪಾಧ್ಯಕ್ಷರು, ರೇಖಲಗೆರೆ ಪ್ರಹ್ಲಾದ್, ಕರವೇ ಹೋಬಳಿ ಅಧ್ಯಕ್ಷ ಜಾಗನೂರಹಟ್ಟಿ ಮುತ್ತಯ್ಯ, ಜಾಗನೂರಹಟ್ಟಿ ಪ್ರಹ್ಲಾದ್. ದುರ್ಗದ ಪಾಲಯ್ಯ ಕಾಟವ್ವನಹಳ್ಳಿ, ತಿಪ್ಪೇಶ್ ನೆರಲಗುಂಟೆ, ದುರಗಣ್ಣ ಗ್ರಾ.ಪಂ.ಸದಸ್ಯ, ತಿಪ್ಪಕ್ಕ, ರಾಧ, ಮಮತ ನಾಯಕನಹಟ್ಟಿ, ಗುಂತಕೋಲಮ್ಮನಹಳ್ಳಿ ವಾಸಣ್ಣ, ಗೂಳಿ ಮಂಜುನಾಥ, ತಿಪ್ಪೇಸ್ವಾಮಿ ಬತ್ತಯ್ಯನಹಟ್ಟಿ, ಕೊಂಡಯ್ಯನಕಪಿಲೆ ಬೋರಣ್ಣ, ಮಲ್ಲಿಕಣ್ಣ ನಾಯಕನಹಟ್ಟಿ. ಮಹಿಳಾ ಮುಖಂಡರು, ಮುಂಖಡರುಗಳು, ಕಾಂಗ್ರೆಸ್ ಪಕ್ಷದ ಮುಂಚೂಣಿ ಘಟಕಗಳ ಪದಾಧಿಕಾರಿಗಳು, ಯುವ ಮುಖಂಡರು, ನಾಯಕನಹಟ್ಟಿ ಹೋಬಳಿಯ ಅಪಾರ ಸಂಖ್ಯೆ ಕಾಂಗ್ರೆಸ್ ಪಕ್ಷದ ಮುಖಂಡರುಗಳು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.