
ಹಿರಿಯೂರು:
ಕನ್ನಡಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಕರ್ನಾಟಕ ಎಂದು ನಾಮಕರಣ ಮಾಡಿ 50 ವರ್ಷಗಳು ಕಳೆದಿವೆ. ಆದರೂ ಕನ್ನಡಿಗರಿಗೆ ಸೂಕ್ತ ಸ್ಥಾನಮಾನ ದೊರೆಯುತ್ತಿಲ್ಲ ಎಂಬುದಾಗಿ ಕನ್ನಡ ಸೇನೆ ತಾಲ್ಲೂಕು ಘಟಕದ ಅಧ್ಯಕ್ಷರಾದ ಶಫೀವುಲ್ಲಾ ಅವರು ಹೇಳಿದರು.
ತಾಲ್ಲೂಕಿನ ಯರದಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಕನ್ನಡ ಸೇನೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ 69ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ನೋಟ್ ಬುಕ್, ಪುಸ್ತಕ, ಪೆನ್ನು, ಪೆನ್ಸಿಲ್ ವಿತರಿಸಿ ಅವರು ಮಾತನಾಡಿದರು.
ಗ್ರಾಮಾಂತರ ಭಾಗದಲ್ಲಿ ಸರ್ಕಾರಿ ಕನ್ನಡ ಶಾಲೆಗಳು ಉಳಿಯಬೇಕು. ಕನ್ನಡ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವ ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು. ಪೋಷಕರು ಕನ್ನಡಭಾಷೆಯನ್ನು ಗೌರವಿಸುವುದಾದರೆ ಮಕ್ಕಳನ್ನು ಕನ್ನಡ ಶಾಲೆಗಳಿಗೆ ಸೇರಿಸಬೇಕು ಎಂಬುದಾಗಿ ಅವರು ಹೇಳಿದರು.
ಕನ್ನಡಸೇನೆ ರಾಜ್ಯ ಸಂಘಟನಾ ಕಾರ್ಯದರ್ಶಿ ಸುವರ್ಣಮ್ಮ ಮಾತನಾಡಿ, ಕನ್ನಡಿಗರು ಹೃದಯ ಶ್ರೀಮಂತಿಕೆ ಉಳ್ಳವರಾಗಿದ್ದು, ಭಾಷೆಯ ಬಗ್ಗೆ ದುರಾಭಿಮಾನ ಬಿಟ್ಟು ಅಭಿಮಾನ ಬೆಳೆಸಿಕೊಳ್ಳೋಣ, ಕನ್ನಡದಲ್ಲಿಯೇ ಮಾತನಾಡೋಣ, ಸ್ವಚ್ಚಂದವಾದ ಭಾಷೆಯಾದ ಕನ್ನಡ ಭಾಷೆ ಉತ್ತಮ ಸಂಸ್ಕಾರ, ಸಂಸ್ಕೃತಿ, ಬಾಂಧವ್ಯ, ರೂಡಿಸಿಕೊಳ್ಳುವ ಭಾಷೆಯಾಗಿದೆ ಎಂಬುದಾಗಿ ಹೇಳಿದರು.
ಈಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕ ಪಿ.ನಾಗರಾಜಪ್ಪ, ಸೇನೆಯ ಗೌರವಾಧ್ಯಕ್ಷ ಸಿದ್ಧಪ್ಪ, ಉಪಾಧ್ಯಕ್ಷ ಭೀಮಣ್ಣ, ನಿರ್ದೇಶಕರಾದ ಅಸಿಫ್, ಮನು, ದಾದಾ ಕಲಂದರ್, ದಾನಿಗಳಾದ ಡಿ.ಕೆ.ಲೋಕೇಶ್, ಎಸ್.ಡಿ.ಎಂ.ಸಿ. ಅಧ್ಯಕ್ಷ ಅಜ್ಜಯ್ಯ, ಸದಸ್ಯರಾದ ಭವ್ಯ, ಶಿವರುದ್ರಮ್ಮ, ಪೂಜಾ, ಶಿಕ್ಷಕ ಟಿ.ಮಹಾಸ್ವಾಮಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.