
ಚಳ್ಳಕೆರೆ ಅ.4. ಪ್ರಸಕ್ತ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ
ಓದುತ್ತಿರುವ ವಿದ್ಯಾರ್ಥಿಗಳು ಈಗಿನಿಂದಲೇ
ಶ್ರಮವಹಿಸಿ ಉತ್ತಮ ಅಂಕ ಪಡೆಯುವ ಮೂಲಕ ಶೇ ನೂರಷ್ಟು ಫಲಿತಾಂಶ ಸುಧಾರಣೆಗೆ ಕೊಡುಗೆ ನೀಡಬೇಕು ಎಂದು
ತಾಪಂ ಇಒ ಶಶಿಧರ್ ಕಿವಿ ಮಾತು ಹೇಳಿದರು.
ನಗರದ ಹೆಗ್ಗೆರೆ ತಾಯಮ್ಮ ಬಾಲಕಿಯರ ಸರಕಾರಿ ಪ್ರೌಢಶಾಲೆಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿ ವಿದ್ಯಾರ್ಥಿಗಳೊಂದಿಗೆ ಶಿಕ್ಷಕರಾಗಿ ಪಾಠ ಬೋದಿಸಿದರು.
ಕಳೆದ ಸಾಲಿನಲ್ಲಿ ಫಲಿತಾಂಶ ಕಡಿಮೆ ಬಂದಿರುವ ಶಾಲೆಗಳಿಗೆ ಸರಕಾರ ಕಡಕ್ಕಾಗಿ ಚೂಚನೆ ನೀಡಿದ್ದು ಈ ಬಾರಿ ಶೇ ನೂರಷ್ಟು ಫಲಿತಾಂಶ ಬರುವಂತೆ ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ನೀಡುವ ಜತೆಗೆ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸುವ ಮೂಲಕ ಫಲಿತಾಂಶ ಗುರಿ ಮುಟ್ಟಬೇಕು ಫಲಿತಾಂಶ ಕಡಿಮೆ ಬಂದರ ಅತಂಹ ಶಾಲೆಗಳ ವಿರುದ್ದ ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ಶಿಕ್ಷಕರಿಗೆ ಸೂಚನೆ ನೀಡಿದರು.
ಶಾಲೆಯ ಬಿಸಿಯೂಟ ಕೋಣೆ ಸ್ವಚ್ಚತೆ ರುಚಿ ಶುಚಿಯಾದ ಅಡುಗೆ ತಯಾರಿ ಮಕ್ಕಳಿಗೆ ಊಟ ಬಡಿಸುವ ಮುನ್ನ ಶಿಕ್ಷಕರು ಹಾಗೂ ಅಡುಗೆ ತಯಾರಿಕರು ಊಟ ಸೇವಿಸಿ ಮಕ್ಕಳಿಗೆ ಬಡಿಸಬೇಕು ಎಂದು ತಿಳಿಸಿದರು.
ವಿದ್ಯಾರ್ಥೊಗಳು ಶಿಕ್ಷಕರು ಹೇಳಿದ ಪಾಠವನ್ನು ಅರ್ಥ ಮಾಡಿಕೊಂಡು ಉತ್ತಮ ಫಲಿತಾಂಶ ತರಬೇಕು ಅರ್ಥವಾಗದಿದ್ದರೆ ಶಿಕ್ಷಕರಿಗೆ ಕೇಳಿ ಅರ್ಥಮಾಡಿಕೊಳ್ಳಬೇಕು ಎಂದರು.
ಮುಖ್ಯಶಿಕ್ಷಕ ಎ.ವೀರಣ್ಣ ಮಾತನಾಡಿ ಶಿಕಗಷಣದಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಬುದ್ದಿವಂತ ಮಕ್ಕಳ ಜತೆ ಗ್ರೂಪ್ ಮಾಡಿ ಸಂಜೆ 5 ಗಂಟೆ ನಂತರ ಗ್ರೂಪ್ ಕಲಿಕೆ ಶಿಕ್ಷ ನೀಡಲಾಗುತ್ತಿದೆ ನಿಗಧಿತ ಅವಧಿಯೊಳಗೆ ಪಠ್ಯವನ್ಬು ಮುಗಿಸಿ ವಿಶೇಷ ತರಗತಿಗಳನ್ನು ಮಾಡಲಾಗುವುದು ಎಂದು ತಿಳಿಸಿದರು.
ಗಣಿತ ಶಿಕ್ಷಕ ರಾಜಣ್ಣ. ಅಕ್ಷರದಾಸೋಹ ಸಹಾಯಕ ನಿರ್ದೇಶಕ ಮಂಜುನಾಥ್ ಹಾಗೂ ಸಹಶಿಕ್ಚಕರು ಉಪಸ್ಥಿತರಿದ್ದರು.











About The Author
Discover more from JANADHWANI NEWS
Subscribe to get the latest posts sent to your email.