
ನಾಯಕನಹಟ್ಟಿ: ಅಕ್ಟೋಬರ್ ೫ರಂದು ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದ ಸಭೆಯಲ್ಲಿ ಆಸ್ಪತ್ರೆಯಲ್ಲಿನ ಸಮಸ್ಯೆಗಳ ಕುರಿತು ತಾಲ್ಲೂಕು ವೈದ್ಯಾಧಿಕಾರಿಗಳನ್ನು ಪ.ಪಂ ಅಧ್ಯಕ್ಷೆ ತರಾಟೆಗೆ ತೆಗೆದುಕೊಂಡರು.

ನAತರ ಮಾತನಾಡಿದ ಅವರು ಸಮುದಾದಯ ಆರೋಗ್ಯ ಕೇಂದ್ರಕ್ಕೆ ೮ ಗ್ರಾಮ ಪಂಚಾಯಿತಿ ಹಾಗೂ ೧ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಬರುತ್ತಿದ್ದು, ಹೃದಯ ಭಾಗದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಪ್ರತಿದಿನ ಸಾವಿರಾರು ರೋಗಿಗಳು ಬರುತ್ತಾರೆ. ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ನೀಡದೆ ಇರುವುದು ನೋವಿನ ಸಂಗತಿ. ವೈದ್ಯರು ರಾತ್ರಿಪಾಳೆದಲ್ಲಿ ಕಾರ್ಯನಿರ್ವಹಿಸದೆ ಸಬೂಬು ಹೇಳುತ್ತಾರೆ. ಇನ್ನೂ ಅಧಿಕಾರಿಗಳನ್ನು ವಿಚಾರಿಸಿದರೆ ತುರ್ತು ಚಿಕಿತ್ಸೆ ಇದ್ದರೆ ಮಾತ್ರ ವೈದ್ಯರು ಎಂಬ ಉಡಾಫೆ ಉತ್ತರವನ್ನು ನೀಡಿದಕ್ಕೆ ಆಕ್ರೋಶಗೊಂಡರು.





ರಾತ್ರಿ ಕರ್ತವ್ಯದಲ್ಲಿ ವೈದ್ಯರು ಆಸ್ಪತ್ರೆಯಲ್ಲಿ ಇರಬೇಕು, ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಿ ಅವರ ಆರೋಗ್ಯವನ್ನು ವಿಚಾರಿಸಬೇಕು. ಇತ್ತೀಚಿನ ದಿನಗಳಲ್ಲಿ ಸಾಂಕ್ರಮಿಕ ರೋಗಗಳಾದ ಡೆಂಗ್ಯೂ, ಮಲೇರಿಯ ರೋಗಗಳು ಜಾಸ್ತಿಯಾಗುತ್ತಿದ್ದು, ಆಸ್ಪತ್ರೆ ಸುತ್ತಮುತ್ತ ಸ್ವಚ್ಚತೆಯನ್ನು ಕಾಪಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.
ಸರ್ಕಾರಿ ಆಸ್ಪತ್ರೆಗಳಿಗೆ ಹೆಚ್ಚಾಗಿ ಕಡು ಬಡವರು ಚಿಕಿತ್ಸೆಗೆ ಬರುತ್ತಾರೆ. ರಾತ್ರಿಪಾಳೆಯಲ್ಲಿ ಕಡ್ಡಾಯವಾಗಿ ವೈದ್ಯಾಧಿಕಾರಿಗಳು ಆಸ್ಪತ್ರೆಯಲ್ಲಿ ಇರಬೇಕು. ಆಸ್ಪತ್ರೆಯ ಎಲ್ಲಾ ಕೋಣೆಗಳಿಗೆ ಸಿಸಿ ಕ್ಯಾಮರ ಅಳವಡಿಸಬೇಕು. ಸಮಯಕ್ಕೆ ಸರಿಯಾಗಿ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗಬೇಕೆಂದು ತಿಳಿಸಿದರು.
ಆಸ್ಪತ್ರೆಯ ಸಿಬ್ಬಂದಿಗಳಿAದ ಪಟ್ಟಣ ಪಂಚಾಯಿತಿ ಅಧ್ಯಕ್ಷರಿಗೆ ಹಾಗೂ ಉಪಾಧ್ಯಕ್ಷರಿಗೆ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆ ಜಿಲ್ಲಾಧ್ಯಕ್ಷರಿಗೆ ಹಾಗೂ ಉಪಾಧ್ಯಕ್ಷರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಉಪಸ್ಥಿತರಾದ ಪ.ಪಂ ಉಪಾಧ್ಯಕ್ಷೆ ಸರ್ವಮಂಗಳ ಉಮಾಪತಿ, ತಾಲ್ಲೂಕು ವೈದ್ಯಾಧಿಕಾರಿ ಡಾ||ಕಾಶಿ, ಡಾ||ವಿಕಾಸ್, ಡಾ||ಓಬಣ್ಣ, ಸೂಪರ್ಡೇಂಟ್ ಮಲ್ಲಿಕಾರ್ಜುನ, ಚಳ್ಳಕೆರೆ ಆರೋಗ್ಯ ನಿರೀಕ್ಷ ಕುದಾಪುರ ತಿಪ್ಪೇಸ್ವಾಮಿ, ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆ ಜಿಲ್ಲಾಧ್ಯಕ್ಷರಾದ ರವಿಕುಮಾರ್ ನಾಯ್ಕ, ಉಪಾಧ್ಯಕ್ಷ ಸತೀಶ್, ಹೋಬಳಿ ಅಧ್ಯಕ್ಷ ಮುತ್ತಯ್ಯ, ಉಪಾಧ್ಯಕ್ಷ ರಾಘವೇಂದ್ರ, ನಗರ ಘಟಕದ ಅಧ್ಯಕ್ಷ ಓ.ತಿಪ್ಪೇಸ್ವಾಮಿ, ಜೋಗಿಹಟ್ಟಿ ಮಂಜು, ಬಿಳೆಕಲ್ ಮಂಜು, ನವೀನ್ ಮದಕರಿ, ಆರೋಗ್ಯ ನಿರೀಕ್ಷ ಶೇಷಾದ್ರಿ, ಆಸ್ಪತ್ರೆಯ ಶುಶ್ರೂಷಕಿಯರು, ಅಂಬ್ಯುಲೇನ್ಸ್ ಚಾಲಕರು, ಸಿಬ್ಬಂದಿ ವರ್ಗದವರು ಹಾಜರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.