ಜಾನುವಾರು ಸಾಕಣಿಕೆದಾರರು ಕಡ್ಡಾಯವಾಗಿ ಕಾಲು ಬಾಯಿ ರೋಗದ ಲಸಿಕೆ ಹಾಕಿಸುವಂತೆ ಡಾ ರೇವಣ್ಣ

ಚಳ್ಳಕೆರೆ:
ಚಳ್ಳಕೆರೆ ತಾಲೂಕಿನಲ್ಲಿ ಅಕ್ಟೋಬರ್ ಎರಡನೇ ವಾರದಿಂದ ಜಾನುವಾರುಗಳಿಗೆ ಕಾಲು ಬಾಯಿ ರೋಗದ ಅಭಿಯಾನ ನಡೆಯಲಿದೆ ಎಂದು ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಟಿ.ಎಸ್. ರೇವಣ್ಣ ಹೇಳಿದರು.
ಲಸಿಕಾ ಅಭಿಯಾನ ಅಂಗವಾಗಿ ಸೋಮವಾರ ಇಲಾಖೆಗೆ ರವಾನೆಯಾಗಿದ್ದ 57ಸಾವಿರ ಚುಚ್ಚುಮದ್ದು ಲಸಿಕೆ ಸುರಕ್ಷಿತವಾಗಿ ದಾಸ್ತಾನು ಮಾಡಿಕೊಂಡ ಬಳಿಕ ಮಾತನಾಡಿದರು.
ತಾಲೂಕಿನಲ್ಲಿ 57300ಜಾನುವಾರುಗಳಿವೆ. 5.30 ಲಕ್ಷ. ಕುರಿ, ಮೇಕೆಗಳಿವೆ. ಜಾನುವಾರುಗಳಿಗೆ ಮಾತ್ರ ಲಸಿಕೆ ಹಾಕಲಾಗುವುದು. ತಾಲೂಕಿನ ನಾಯಕನಹಟ್ಟಿ ಭಾಗದಲ್ಲಿ ಬಯಲುಪ್ರದೇಶ ಮತ್ತು ಬುಡಕಟ್ಟು ಜನಾಂಗ ಇರುವ ಸಂಸ್ಕೃತಿ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಹೆಚ್ಚು ಜಾನುವಾರುಗಳಿವೆ. ಸರ್ಕಾರದ ಸಂಸ್ಥೆಯಾಗಿರುವ ಅಜ್ಜಂಪುರ ಫಾರಂನಿAದ ವಿಶೇಷ ಅಮೃತಳಿ ಕರುಗಳನ್ನು ತಂದು ಸಾಕುವ ಪದ್ದತಿ ಇಲ್ಲಿನ ರೈತರಲ್ಲಿ ಕಾಣುತ್ತೇವೆ. ಫಾರಂನಲ್ಲಿ ಎರಡು ವರ್ಷದ ಕರುಗಳನ್ನು ಹರಾಜು ಪ್ರಕ್ರಿಯೆಯಲ್ಲಿ ರೈತರಿಗೆ ಮಾರಾಟ ಮಾಡಲಾಗುತ್ತದೆ. ಇಲ್ಲಿಂದ ತಂದ ರೈತರು ಸುಖವಾಗಿ ಬೆಳೆಸಿ ಲಕ್ಷಗಟ್ಟಲೆ ಬೆಲೆ ಬಾಳುವ ಹೋರಿಗಳನ್ನಾಗಿ ಬೆಳೆಸಿ ಮಾರಾಟ ಮಾಡಿಕೊಳ್ಳುತ್ತಾರೆ ಎಂದು ಹೇಳಿದರು.
ಜಾನುವಾರುಗಳ ಪೋಷಣೆಗೆ ಲಸಿಕೆ ಮತ್ತು ಜಾಗೃತಿ ಅಭಿಯಾನ ನಡೆಸಲಾಗುತ್ತದೆ. ನೀರಾವರಿ ಸೌಲಭ್ಯ ಇರುವ ರೈತರಿಗೆ ಜೋಳ ಮತ್ತು ಮೆಕ್ಕೆಜೋಳದ ಮೇವುಬೀಜದ ಪಾಕೆಟ್‌ಗಳನ್ನು ಕೊಟ್ಟು ಮೇವು ಬೆಳೆಸಿಕೊಳ್ಳಲು ಅವಕಾಶ ಮಾಡಲಾಗುತ್ತದೆ. ಈ ಮೇವು ಕಟಾವು ಮಾಡಿದಂತೆಲ್ಲಾ ಚಿಗುರಿ ಬೆಳೆದುಕೊಳ್ಳುತ್ತದೆ. ಜಾನುವಾರುಗಳು ಯಾವುದೇ ರೋಗ ಬಾಧೆಯಿಲ್ಲದೆ ಜಾಡಾಗಿ ಬೆಳೆಯುತ್ತವೆ. ಅನುಗ್ರಹ ಯೋಜನೆಯಡಿ ರೈತರಿಗೆ ಬಾಕಿಯಾಗಿ ಉಳಿದುಕೊಂಡಿದ್ದ 758 ಕುರಿ, ಮೇಕೆಗಳಿಗೆ ತಲಾ 5ಸಾವಿರದಂತೆ, 100ಜಾನುವಾರುಗಳಿಗೆ ತಲಾ 10 ಸಾವಿರದಂತೆ ಹಣ ಬಿಡುಗಡೆಯಾಗಿದೆ. 2024 ರ ಆಗಸ್ಟ್ ತಿಂಗಳಿನಿಂದ ಈತನಕ ಆಗಿರುವ ಜಾನುವಾರುಗಳ ಜೀವಹಾನಿ ಪ್ರಕರಣಗಳಿಗೆ ಮಾತ್ರ ಸರ್ಕಾರದಿಂದ ಬರಬೇಕಾಗಿರುವ ಹಣ ಬಾಕಿ ಉಳಿದುಕೊಂಡಿದೆ ಎಂದು ಮಾಹಿತಿ ನೀಡಿದರು.

About The Author
Discover more from JANADHWANI NEWS
Subscribe to get the latest posts sent to your email.