March 17, 2026
IMG-20250904-WA0273.jpg

ಚಳ್ಳಕೆರೆ:ನಗರದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ನಿಂತು ಗ್ರಹಣ ಬಡಿದಂತಾಗಿದ್ದು ತಿಂಗಳು ಕಳೆದರೂ ನಗರಸಭೆ ಸಿಬ್ಬಂದಿ ದುರಸ್ತಿ ಗೊಳಿಸದೆ ಕಾಲಾಹರಣ ಮಾಡುತ್ತಿರುವುದರಿಂದ ಆಸ್ಪತ್ರೆಗೆ ಬರುವ ರೋಗಿಗಳು ಕುಡಿಯುವ ನೀರಿಗಾಗಿ ದಿನನಿತ್ಯ ಹೋಟೆಲ್ ಹಾಗೂ ಬೇಕರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ನಗರದಲ್ಲಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಹಾಗೂ ತಾಯಿ ಮತ್ತು ಮಕ್ಕಳ ಆಸ್ಪತ್ರೆಗಳು ಇರುವುದರಿಂದ ದಿನನಿತ್ಯ ನೂರಾರು ರೋಗಿಗಳು ಆಸ್ಪತ್ರೆಗೆ ಬಂದು ಹೋಗುತ್ತಿದ್ದು ಕುಡಿಯುವ ನೀರಿಗಾಗಿ ಪರಿತಪಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಆಸ್ಪತ್ರೆಯ ಆವರಣದಲ್ಲಿ ರೋಗಿಗಳ ಅನುಕೂಲಕ್ಕಾಗಿ ನಗರಸಭೆ ವತಿಯಿಂದ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಿದ್ದು ಕೇವಲ ಹೆಸರಿಗೆ ನಿರ್ಮಾಣ ಮಾಡಿದ್ದಾರೆ ಎಂಬಂತಾಗಿದೆ. ಆಸ್ಪತ್ರೆಗೆ ಚಿಕಿತ್ಸೆಗೆ ಬರುವ ಒಳ ಹಾಗು ಹೊರರೋಗಿಗಳು ಕುಡಿಯುವ ನೀರು ಬೇಕಾದಲ್ಲಿ ಆಸ್ಪತ್ರೆ ಮುಂಬಾಗದ ಫುಟ್ಪಾತ್ ಹೋಟೆಲ್ ಹಾಗೂ ಬೇಕರಿಗಳಲ್ಲಿ ದೊರೆಯುವ ಬಾಟಲ್ ನೀರಿಗೆ ಹಣತೆತ್ತು ತರಬೇಕಾದ ಪರಿಸ್ಥಿತಿ ಇರುವುದರಿಂದ ರೋಗಿಗಳ ಸಂಬಂಧಿಕರು ದಿನನಿತ್ಯ 100ರಿಂದ 200 ರೂ ಗಳವರೆಗೆ ಕೇವಲ ನೀರಿಗಾಗಿ ಭರಿಸುವ ಸ್ಥಿತಿ ಬಂದೊದಗಿದೆ

ಇನ್ನು ರಾತ್ರಿ ವೇಳೆ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳಿಗೆ ಕುಡಿಯುವ ನೀರಿನ ಸೌಲಭ್ಯ ಇಲ್ಲದೆ ಇರುವುದರಿಂದ ಹೋಟೆಲ್ ಗಳು ಬಂದ್ ಆಗಿದ್ದಾಗ ರೋಗಿಗಳು ಮಾತ್ರೆ ನುಂಗಲು ಹಾಗೂ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ

ಇನ್ನು ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಹೆರಿಗೆಗಾಗಿ ದಾಖಲಾಗುವ ರೋಗಿಗಳಿಗೆ ಹೆರಿಗೆಯ ಬಳಿಕ ಕುಡಿಯಲು ಹಾಗೂ ಬಳಸಲು ಬಿಸಿ ನೀರಿನ ಅಗತ್ಯತೆ ಇದೆ ಬಾಣಂತಿಯರಿಗೆ ಬಿಸಿ ನೀರಿಗಾಗಿ ಯಾವುದೇ ವ್ಯವಸ್ಥೆ ಆಸ್ಪತ್ರೆಯಲ್ಲಿ ಇಲ್ಲದಿರುವುದರಿಂದ ಬಿಸಿನೀರಿಗೂ ಹೋಟೆಲ್ ಗಳನ್ನು ಆಶ್ರಯಿಸಬೇಕಾಗಿದ್ದು ಹೋಟೆಲ್ ಗಳಲ್ಲಿ ಗಂಜಿ ಹಾಗೂ ಬಿಸಿನೀರಿಗಾಗಿ ರೋಗಿಗಳು ದುಪ್ಪಟ್ಟು ಹಣ ನೀಡಬೇಕಾಗಿದೆ.

ಆಸ್ಪತ್ರೆ ಆವರಣದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಪದೇ ಪದೇ ಕೆಟ್ಟು ಹೋಗುತ್ತಿದ್ದು ಸರಿಯಾದ ನಿರ್ವಹಣೆ ಮಾಡದೆ ಇರುವುದರಿಂದ ರೋಗಿಗಳಿಗೆ ಅನಾನುಕೂಲ ಉಂಟಾಗುತ್ತಿದ್ದು ದಿನನಿತ್ಯ ರೋಗಿಗಳು ಕುಡಿಯುವ ನೀರು ಸಿಗದೇ ನಗರಸಭೆ ಸಿಬ್ಬಂದಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ ಸಂಬಂಧ ಪಟ್ಟ ಅಧಿಕಾರಿಗಳು ಈಗಲಾದರೂ ಎಚ್ಚೆತ್ತುಕೊಂಡು ಶುದ್ಧ ಕುಡಿಯುವ ನೀರಿನ ಘಟಕವನ್ನು ದುರಸ್ತಿಪಡಿಸಿ ರೋಗಿಗಳ ಸಮಸ್ಯೆಗೆ ಪರಿಹಾರ ನೀಡುವವರೇ ಕಾದುನೋಡಬೇಕಿದೆ.

ಕಳೆದ ಮೂರು ದಿನಗಳಿಂದ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದೇವೆ ಆದರೆ ದಿನನಿತ್ಯ ಕುಡಿಯುವ ನೀರಿಗಾಗಿ ಖಾಲಿ ಬಾಟಲಿಗಳನ್ನು ಹಿಡಿದು ಹೋಟೆಲ್ಗಳನ್ನು ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಶುದ್ಧ ಕುಡಿಯುವ ನೀರಿನ ಘಟಕ ನೆಪ ಮಾತ್ರಕ್ಕೆ ಇದ್ದು ಇಲ್ಲಿ ಯಾವುದೇ ಸಿಬ್ಬಂದಿ ಕಾರ್ಯನಿರ್ವಹಿಸುತಿಲ್ಲ ನೀರು ಬರುವ ಸಂದರ್ಭದಲ್ಲಿ ಐದು ರೂ ಕಾಯನ್ ಪಡೆಯಲು ಸಹ ಬೇರೆಯವರನ್ನು ಆಶ್ರಯಿಸುವಂಥಾಗಿದೆ ಕೂಡಲೇ ಸಮಸ್ಯೆ ಬಗೆಹರಿಸಿದರೆ ಮಾತ್ರ ರೋಗಿಗಳಿಗೆ ಅನುಕೂಲವಾಗುತ್ತದೆ.

ನವೀನ್ ಒಳ ರೋಗಿ

ಓಬಳಾಪುರ

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading