ವರದಿ: ಕೆ.ಟಿ.ಮೋಹನ್ ಕುಮಾರ್
ಮೈಸೂರು ಜಿಲ್ಲೆಯ ಸಾಲಿಗ್ರಾಮ ತಾಲೂಕಿನ ಚನ್ನoಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಸಿ.ವೈ.ಅಭಿಲಾಷ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈ ಹಿಂದೆ ಸಂಘದ ಅಧ್ಯಕ್ಷರಾಗಿದ್ದ ವೈ.ಎಸ್.ನಟರಾಜ್ ಅವರು ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಸಿ.ವೈ.ಅಭಿಲಾಷ್ ಅವರನ್ನು ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಸಿ.ವೈ.ಅಭಿಲಾಷ್ ಅವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾ ಅಧಿಕಾರಿ ಸಿಡಿಓ ರವಿ ಅವರು ಅಧಿಕೃತವಾಗಿ ಘೋಷಣೆ ಮಾಡಿದರು.
ಚುನಾವಣಾ ಪ್ರಕ್ರಿಯೆಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ
ಶಂಕರನಾಯಕ, ನಿರ್ದೇಶಕರುಗಳಾದ ಉಷಾ, ಕುಮಾರ, ಚಲುವಯ್ಯ, ತಮ್ಮೇಗೌಡ, ಪುಟ್ಟೇಗೌಡ, ಸಿ.ಕೆ.ಮಲ್ಲಿಕಾರ್ಜುನ, ಸೈಯದ್ ಇಸ್ರದ್, ಜಿಲ್ಲಾ ಬ್ಯಾಂಕಿನ ಪ್ರತಿನಿಧಿ ಎನ್.ದಿನೇಶ್, ಸಂಘದ ಸಿಇಒ ಆರ್.ಮಂಜು, ಸಹಾಯಕಿ ಧನಲಕ್ಷ್ಮಿ ಪಾಲ್ಗೊಂಡಿದ್ದರು.
ಚುನಾವಣಾ ಫಲಿತಾಂಶ ಪ್ರಕಟಗೊಂಡ ನಂತರ ನೂತನ ಅಧ್ಯಕ್ಷರನ್ನು ಸಂಘದ ಆಡಳಿತ ಮಂಡಳಿಯವರು, ಸಿಬ್ಬಂದಿ ವರ್ಗದವರು ಹಾಗೂ ವಿವಿಧ ಮುಖಂಡರುಗಳು ಸನ್ಮಾನಿಸಿದರು.
ನೂತನ ಅಧ್ಯಕ್ಷರಾದ
ಸಿ.ವೈ.ಅಭಿಲಾಷ್ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿ ಎಲ್ಲರ ಸಹಕಾರದೊಂದಿಗೆ ಇಂದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ಇದಕ್ಕೆ ಸಹಕರಿಸಿದ ಸರ್ವರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.
ಮುಂದಿನ ದಿನಗಳಲ್ಲಿ ಆಡಳಿತ ಮಂಡಳಿಯ ಎಲ್ಲರ ಸಹಕಾರವನ್ನು ಪಡೆದು ರೈತರುಗಳಿಗೆ ಅನುಕೂಲವಾಗುವಂತಹ ಕಾರ್ಯಕ್ರಮಗಳನ್ನು ರೂಪಿಸಿ ಅವುಗಳನ್ನು ಅನುಷ್ಠಾನ ಮಾಡುವ ಮೂಲಕ ರೈತರುಗಳ ಅಭಿವೃದ್ಧಿಗೆ ಶ್ರಮಿಸಲಾಗುವುದು ಜೊತೆಗೆ ಸಂಘವನ್ನು ಮಾದರಿ ಸಂಘವನ್ನಾಗಿ ಮಾಡಲು ಪ್ರಾಮಾಣಿಕವಾಗಿ ಶ್ರಮಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ
ಎಚ್.ಟಿ.ರಾಜೇಶ್, ಮುಖಂಡರುಗಳಾದ ಜವರೇಗೌಡ, ಪುಟ್ಟರಾಜು, ಲೋಕೇಶ್, ಚಂದ್ರೇಗೌಡ, ಲೋಕೇಶ್, ಅಪ್ಪಾಜಿಗೌಡ, ನಾರಾಯಣಗೌಡ, ಬಾಪು, ನಾಗಣ್ಣ, ಅರವಿಂದ, ಮೋಹನ್ ಮಾಸ್ಟರ್, ರಘು, ಕಾಂತರಾಜು, ಪ್ರಮೋದ್, ಪ್ರಕಾಶ್, ದಿನೇಶ್, ಕೋಟೆಶಂಕರ್ ಸೇರಿದಂತೆ ಹಲವರು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.