
ಹಿರಿಯೂರು:
ಗರ್ಭಕಂಠದ ಕ್ಯಾಸ್ಸರ್ ತಡೆಯುವಲ್ಲಿ ಲಸಿಕೆ ಅತ್ಯಂತ ಪರಿಣಾಮಕಾರಿಯಾಗಿದ್ದು, ಇದರ ಉಪಯೋಗವನ್ನು ಪ್ರತಿಯೊಬ್ಬ ಮಹಿಳೆಯರು ಪಡೆದುಕೊಳ್ಳಬೇಕು ಎಂಬುದಾಗಿ ನಗರದ ಖ್ಯಾತ ಸ್ತ್ರೀ ರೋಗ ತಜ್ಞರಾದ ಶ್ರೀಮತಿ ಡಾ.ಲತಾ ರಾಮಚಂದ್ರಪ್ಪಅವರು ಹೇಳಿದರು.
ನಗರದ ಸಂಜೀವಿನಿ ಆಸ್ಪತ್ರೆ ಸಭಾಂಗಣದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಗರ್ಭಕಂಠ ಕ್ಯಾನ್ಸರ್ ವಿರುದ್ಧದ ಜಾಗತಿಕ ಅಭಿಯಾನದ ಅನುಷ್ಠಾನಕ್ಕಾಗಿ ಅಖಿಲ ಭಾರತೀಯ ಸ್ತ್ರೀ ರೋಗ ತಜ್ಞರ ಸಂಘ ಚಿತ್ರದುರ್ಗ ಶಾಖೆ ಹಾಗೂ ಭಾರತೀಯ ವೈದ್ಯಕೀಯ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಗರ್ಭಕಂಠದ ಕ್ಯಾನ್ಸರ್ ವಿರುದ್ಧ ಲಸಿಕೆ ನೀಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಾಲ್ಲೂಕು ಆರೋಗ್ಯಾಧಿಕಾರಿಯಾದ ಡಾ.ವೆಂಕಟೇಶ್ ರವರು ಮಾತನಾಡಿ ಈ ಲಸಿಕೆಯನ್ನು ಪ್ರಮುಖವಾಗಿ 9 ವರ್ಷದಿಂದ 26 ವರ್ಷದ ವಯೋಮಾನದ ಮಹಿಳೆಯರಿಗೆ ಅತ್ಯಂತ ಪರಿಣಾಮಕಾರಿಯಾಗಿದ್ದು ಅಗತ್ಯವಿದ್ದಲ್ಲಿ 45 ವರ್ಷದ ಮಹಿಳೆಯರಿಗೂ ಕೂಡ ಈ ಲಸಿಕೆಯನ್ನು ನೀಡಬಹುದಾಗಿದೆ ಎಂಬುದಾಗಿ ಅವರು ಹೇಳಿದರು.
ನಿವೃತ್ತ ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ಮಕ್ಕಳ ತಜ್ಞರಾದ ಡಾ. ಮಹಲಿಂಗಪ್ಪ ರವರು ಮಾತನಾಡಿ ಈ ಲಸಿಕೆಯನ್ನು ನಗರದ ಕಿರಣ್ ನರ್ಸಿಂಗ್ ಹೋಂ, ಬಸವರಾಜ ನರ್ಸಿಂಗ್ ಹೋಂ, ಗುರು ಆಸ್ಪತ್ರೆ, ಸಂಜೀವಿನಿ ಆಸ್ಪತ್ರೆ, ಗಣೇಶ ಮಕ್ಕಳ ಆಸ್ಪತ್ರೆ ಹಾಗೂ ಬಾಲಾಜಿ ಆಸ್ಪತ್ರೆಗಳಲ್ಲಿ ಹೆಸರು ನೊಂದಾಯಿಸುವ ಮೂಲಕ ಪಡೆದುಕೊಳ್ಳಬಹುದಾಗಿದೆ ಎಂಬುದಾಗಿ ಅವರು ಹೇಳಿದರು.
ಈ ಕಾರ್ಯಕ್ರಮದಲ್ಲಿ ನಿವೃತ್ತ ಜಿಲ್ಲಾ ಆರೋಗ್ಯಾಧಿಕಾರಿಗಳಾದ ಡಾ. ಶಿವಣ್ಣರೆಡ್ಡಿ, ಮಕ್ಕಳ ತಜ್ಞರಾದ ಡಾ.ಮಹಲಿಂಗಪ್ಪ, ಡಾ.ರಾಮಚಂದ್ರಪ್ಪ, ತಾಲ್ಲೂಕು ವೈದ್ಯಾಧಿಕಾರಿ ಡಾ.ವೆಂಕಟೇಶ್, , ವರ್ಷಿಣಿ ಕ್ಲೀನಿಕ್ ಡಾಕ್ಟರ್ ವೆಂಕಟೇಶ್, ಡಾ.ಲತಾರಾಮಚಂದ್ರಪ್ಪ, ಡಾ.ಸೌಮ್ಯ, ಡಾ.ರವಿನಾಯ್ಕ್, ಡಾ.ಚಂದ್ರಕಲಾ ಸೇರಿದಂತೆಅನೇಕ ತಜ್ಞ ವೈದ್ಯರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.