
ವರದಿ: ಕೆ.ಟಿ. ಓಬಳೇಶ್ ನಲಗೇತನಹಟ್ಟಿ.
ನಾಯಕನಹಟ್ಟಿ:: ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಸುಲಭವಾಗಿ ಇಂಗ್ಲಿಷ್ ಮಾತನಾಡುವಂತೆ ಕಲಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ .ಎಸ್.ಸುರೇಶ್ ಹೇಳಿದರು.


ಸೋಮವಾರ ಹೋಬಳಿಯ ತಿಮ್ಮಪ್ಪಯ್ಯನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಓಬಯ್ಯನಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2025 -26ನೇ ಸಾಲಿನ ಒಂದನೇ ತರಗತಿ ಆಂಗ್ಲ ಮಾಧ್ಯಮ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಗ್ರಾಮೀಣ ಪ್ರದೇಶ ಬಡಮಕ್ಕಳಿಗೆ ಸರ್ಕಾರಿ ಶಾಲೆ ಉಳಿವಿಗಾಗಿ ಸರ್ಕಾರ ಮಹತ್ವದ ಯೋಜನೆಯನ್ನು ಜಾರಿಗೆ ತಂದಿದೆ ಖಾಸಗಿ ಶಾಲೆಯ ಮಕ್ಕಳಂತೆ ಸರ್ಕಾರಿ ಶಾಲೆಯ ಮಕ್ಕಳು ಸಹ ಇಂಗ್ಲಿಷ್ ಕಲಿಯಲು ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ ಪ್ರತಿಯೊಬ್ಬರೂ ಯೋಜನೆಯ ಸದುಪಯೋಗ ಪಡೆದುಕೊಂಡು ಮಕ್ಕಳ ಉತ್ತಮ ಭವಿಷ್ಯ ರೂಪಿಸಲು ಪ್ರೇರಣೆಯಾಗಬೇಕು ಎಂದು ತಿಳಿಸಿದರು.
ತಿಮ್ಮಪ್ಪಯ್ಯನಹಳ್ಳಿ ಗ್ರಾಮ ಪಂಚಾಯತಿ ಹಾಲಿ ಸದಸ್ಯ ಮಾಜಿ ಅಧ್ಯಕ್ಷ ಬಂಡೆ ಕಪಿಲೆ ಓಬಣ್ಣ ಮಾತನಾಡಿದರು ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಇಂಗ್ಲಿಷ್ ಬಹಳ ಮುಖ್ಯ ಆದ್ದರಿಂದ ಗ್ರಾಮದ ಪೋಷಕರು ತಮ್ಮ ಮಕ್ಕಳಿಗೆ ಕನ್ನಡ ಭಾಷೆಯ ಜೊತೆಯಲ್ಲಿ ಇಂಗ್ಲಿಷ್ ಭಾಷೆಗೆ ಹೆಚ್ಚಿನ ಆದ್ಯತೆ ನೀಡುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ ಎಂ ಪರ್ವತಯ್ಯ,. ಗ್ರಾಮ ಪಂಚಾಯತಿ ಉಪಾಧ್ಯಕ್ಷ ಸೋಮಶೇಖರ್, ಗ್ರಾಮದ ಮುಖಂಡ ಡಿ ಎಚ್ ಪರಮೇಶ್ವರಪ್ಪ, ಕೆಇಬಿ ಹರೀಶ್ ಮಾತನಾಡಿದರು.
ಇದೇ ಸಂದರ್ಭದಲ್ಲಿ ತಿಮ್ಮಪ್ಪನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ಶೈಲಾ ಮಂಜಣ್ಣ, ಗ್ರಾಮ ಪಂಚಾಯತಿ ಸದಸ್ಯರಾದ ಗೀತಮ್ಮ ಸಿ ಕುಮಾರ್, ಲಕ್ಷ್ಮಿ ಮಹದೇವಣ್ಣ, ಎನ್ ಮಹದೇವಪುರ ಕ್ಲಸ್ಟರ್
ಸಿ ಆರ್ ಪಿ
ಸಿ. ಹನುಮಂತಪ್ಪ, ನಾಯಕನಹಟ್ಟಿ ಶಿಕ್ಷಣ ಸಂಯೋಜಕ ತಿಪ್ಪೇಸ್ವಾಮಿ, ರವಿಶಂಕರ್. ಸದಾಶಿವಯ್ಯ, ಕೆಎಂಎಸ್ ಪಿಪಿ ಸದಸ್ಯ ಮರಿಪಾಲಯ್ಯ, ಎಸ್ ಡಿ ಎಂ ಸಿ ಉಪಾಧ್ಯಕ್ಷ ಓಬಜ್ಜ,
ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ಎಸ್.ಆರ್. ಗಂಗಣ್ಣ, ಸಹ ಶಿಕ್ಷಕ ಎನ್.ಟಿ ಶಿವರಾಜ್, ಶಿಕ್ಷಕಿರಾದ ಟಿ. ಶೋಭರಾಣಿ, ಕೆ.ವಿ. ಪ್ರಿಯ, ಎಂ. ಮಂಜುಳಾ, ಪುಷ್ಪಬಾಯಿ ಪತ್ತಾರ. ಸೇರಿದಂತೆ ಸಮಸ್ತ ಓಬಯ್ಯನಹಟ್ಟಿ ಗ್ರಾಮಸ್ಥರು ಶಾಲೆಯ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.