
ಹಿರಿಯೂರು:
ಇನ್ನರ್ ವ್ಹೀಲ್ ಸಂಸ್ಥೆಯು ಒಂದು ದೊಡ್ಡ ಅಂತರಾಷ್ಟ್ರೀಯ ಸಂಸ್ಥೆಯಾಗಿದ್ದು, ಅನೇಕ ಸಮಾಜಮುಖಿ ಸೇವೆಗಳನ್ನು ಮಾಡುತ್ತಾ ಬಂದಿದೆ. ಮಹಿಳೆಯರಿಗೆ ಒಂದು ದೊಡ್ಡ ವೇದಿಕೆಯನ್ನು ಕಲ್ಪಿಸಿ ಕೊಟ್ಟಿದ್ದು, ಅವರಲ್ಲಿ ಉತ್ತಮ ಸ್ನೇಹ ಬಾಂಧವ್ಯ ಬೆಸೆದಿದೆ. ಯಾವುದೇ ಕೆಲಸವನ್ನು ಇಷ್ಟಪಟ್ಟು ಮಾಡಿದರೆ ಎಲ್ಲವೂ ಸುಲಭಸಾಧ್ಯವಾಗುತ್ತದೆ ಎಂಬುದಾಗಿ ಚಿತ್ರದುರ್ಗ ಪಾಸ್ಟ್ ಡಿಸ್ಟ್ರಿಕ್ ಚೇರ್ಮೆನ್.ಇನ್ನರ್ ವೀಲ್ ನ ಶ್ರೀಮತಿ ವೀಣಾಸ್ವಾಮಿ ಹೇಳಿದರು.
ನಗರದ ರೋಟರಿ ಸಭಾಭವನದಲ್ಲಿ ಗುರುವಾರದಂದು ನಡೆದ ಇನ್ನರ್ ವ್ಹೀಲ್ ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಕಾರ್ಯಕ್ರಮವನ್ನು ನೆರವೇರಿಸಿಅವರು ಮಾತನಾಡಿ, ನೂತನ ಪದಾಧಿಕಾರಿಗಳಿಗೆ ಶುಭಹಾರೈಸಿ, ಮುಂದಿನ ಕಾರ್ಯಕ್ರಮಗಳ ಯೋಜನೆ ಬಗ್ಗೆ ಮಾರ್ಗದರ್ಶನ ನೀಡಿದರು.
ಇನ್ನರ್ ವ್ಹೀಲ್ ಹಿರಿಯೂರ್ ನ 2025-26ನೇ ಸಾಲಿನ ನೂತನ ಅಧ್ಯಕ್ಷರಾಗಿ ಪದಗ್ರಹಣ ಸ್ವೀಕರಿಸಿ ಶ್ರೀಮತಿ ರೋಷಿಣಿ ಮಹೇಶ್ ರವರು ಮಾತನಾಡಿ ಈ ಅಧ್ಯಕ್ಷ ಪದವಿ ದೊರೆತಿರುವುದು ನನಗೆ ತುಂಬಾ ಸಂತೋಷದಾಯಕವಾಗಿದೆ.ಇದು ಕೇವಲ ಗೌರವ ಮಾತ್ರವಲ್ಲ. ಜವಾಬ್ದಾರಿಯನ್ನು ಕೊಟ್ಟಿದೆ.
ಅಲ್ಲದೆ ಇನ್ನರ್ ವ್ಹೀಲ್ ಹಿರಿಯೂರಿನ ಅಧ್ಯಕ್ಷರುಗಳು ಅನೇಕ ಉತ್ತಮ ಸಮಾಜಮುಖಿ ಕಾರ್ಯಗಳನ್ನು ಮಾಡಿ ಹಲವಾರು ಪ್ರಶಸ್ತಿಗಳನ್ನು ಪಡೆದಿರುತ್ತಾರೆ. ಆ ಸಾಲಿನಲ್ಲಿ ನಾನು ಕೂಡ ಸೇರಲು ಬಯಸುತ್ತೇನೆ, ಇನ್ನರ್ ವ್ಹೀಲ್ ಸಂಸ್ಥೆಯಿಂದ ನಡೆಯುವ ಜನಪರ ಕಾರ್ಯಕ್ರಮಗಳಿಗೆ ನಿಮ್ಮೆಲ್ಲರ ಸಹಕಾರ ಬೇಕು ಎಂಬುದಾಗಿ ಅವರು ಹೇಳಿದರು.
ಹಿಂದಿನ ಅಧ್ಯಕ್ಷರಾಗಿದ್ದ ಸುಚಿತ್ರ ಅಮರನಾಥ್ ಅವರು ಮಾತನಾಡಿ. ಇನ್ನರ್ ವ್ಹೀಲ್ ನಲ್ಲಿ ಕೆಲಸ ಮಾಡುವುದು ಒಂದು ಖುಷಿಯ ಸಂಗತಿಯಾಗಿದೆ. ಮಹಿಳೆಯು ಹೊರಗೆ ಬರಲು ಕುಟುಂಬದವರ ಪ್ರೋತ್ಸಾಹ ತುಂಬಾ ಅಗತ್ಯ. ನನಗೆ ನನ್ನ ಕುಟುಂಬದವರು ಎಲ್ಲಾ ಕಾರ್ಯಕ್ರಮಗಳಲ್ಲೂ ಪ್ರೋತ್ಸಾಹ ನೀಡಿ ಮುನ್ನಡೆಸಿದರು ಎಂಬುದಾಗಿ ಧನ್ಯವಾದಗಳು ತಿಳಿಸಿದರು.
ಇದೇ ಸಂದರ್ಭದಲ್ಲಿ..ಕಾರ್ಯದರ್ಶಿಯಾಗಿದ್ದ ಶ್ವೇತಾಜೈನ್ ರವರು, 2024-25ನೇ ಸಾಲಿನ ಯೋಜನಾ ವರದಿಯನ್ನು ಸಲ್ಲಿಸಿದರು. 2025-26ನೇ ಸಾಲಿನ ಕಾರ್ಯದರ್ಶಿಯಾಗಿ ಸರ್ವಮಂಗಳ ರವರು ಪದಗ್ರಹಣ ಸ್ವೀಕರಿಸಿದರು. ಐ.ಎಸ್.ಓ. ಆಗಿ ಪ್ರೇಮಾರವರು, ಖಜಾಂಚಿಯಾಗಿ ಸುವರ್ಣಪ್ರಶಾಂತವರು, ಎಡಿಟರ್ ಆಗಿ ಲತಾ ಅನಿಲ್ಅವರು ಪದಗ್ರಹಣ ಸ್ವೀಕರಿಸಿದರು.
ಇದೇ ಸಂದರ್ಭದಲ್ಲಿ ಡಾಕ್ಟರ್ಸ್ ಡೇ ಹಾಗೂ ಚಾರ್ಟೆಡ್ ಅಕೌಂಟ್ ಡೇ ಪ್ರಯುಕ್ತ ಹಿರಿಯೂರಿನ ಹೆಸರಾಂತ ವೈದ್ಯರಾದ ಡಾಕ್ಟರ್ ಮೋಹನ್ ಸರ್ ಹಾಗೂ ನಾಗಸಚಿನ್ ಮತ್ತು ಚಾರ್ಟೆಡ್ ಅಕೌಂಟೆಂಟ್ ಶ್ರೀಯುತ ಸ್ಕಂದರಮೇಶ್ ಇವರುಗಳನ್ನು ಇನ್ನರ್ವಿಲ್ ವತಿಯಿಂದ ಸನ್ಮಾನಿಸಲಾಯಿತು.
ಹಾಗೂ ದ್ವಿತೀಯ ಪಿಯುಸಿಯಲ್ಲಿ ಹೆಚ್ಚಿನ ಅಂಕ ಪಡೆದ ಕುಮಾರಿ ತಾರಿಣಿ ಹಾಗೂ ಕುಮಾರಿ ಅದಿತಿ ಇವರುಗಳನ್ನು ಇನ್ನರ್ವಿಲ್ ವತಿಯಿಂದ ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ನೂತನವಾಗಿ 12 ಜನ ಹೊಸ ಸದಸ್ಯರನ್ನು ಇನ್ನರ್ವೀಲ್ ಸಂಸ್ಥೆಗೆ ಸೇರಿಸಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಶ್ರೀಮತಿ ಶ್ರುತಿ ನಾಟ್ಯ ಸಂಸ್ಥೆಯ ಪುಟಾಣಿ ಮಕ್ಕಳು ಕಾರ್ಯಕ್ರಮದಲ್ಲಿ ಸ್ವಾಗತ ನೃತ್ಯ ಮಾಡುವ ಮೂಲಕ ಕಾರ್ಯಕ್ರಮವನ್ನು ಹೆಚ್ಚಿನ ರಂಗುಗೊಳಿಸಿದರು.
ಈ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ನ ನೂತನ ಅಧ್ಯಕ್ಷರಾದ ಶ್ರೀಯುತ ಅರುಣ್ ರವರು ಹಾಗೂ ಕಾರ್ಯದರ್ಶಿಯಾದ ವಿಕಾಸ್ ಜಯನ್ ರವರು ಹಾಗೂ ರೆಡ್ ಕ್ರಾಸ್ ಸಂಸ್ಥೆಯ ಚೇರ್ಮನ್ ಶ್ರೀಯುತ ಸುಂದರ ರಾಜ್ ಹಾಗೂ ರೋಟರಿ ಸಂಸ್ಥೆಯ ಅಸಿಸ್ಟೆಂಟ್ ಗವರ್ನರಾದ ಕಿರಣ್ ಕುಮಾರ್, ಇನ್ನರ್ವೀಲ್ ಸದಸ್ಯರುಗಳಾದ ಪದ್ಮಜಾ, ಸೌಮ್ಯ ಪ್ರಶಾಂತ್, ಹೇಮಲತಾ, ಮಮತಾ, ಶಾಮಲಾ, ಲತಾ, ಶ್ವೇತ ಜೈನ್, ರಚನಾ, ರಮ್ಯಾ, ಲಕ್ಷ್ಮಿ , ಗೀತಾ, ಮಂಗಳಗೌರಿ , ತ್ರಿವೇಣಿ, ರಾಜೇಶ್ವರಿ, ಸೌಜನ್ಯ, ಪಿಂಕಿ, ರೇಣುಕಾ ರೇಷ್ಮಾ, ರೂಪ, ಸ್ವರ್ಣ ಲತಾ, ಗೀತಾ ರಾಧಾಕೃಷ್ಣ, ಶ್ರೀಮತಿ ಶಶಿಕಲ ರವಿಶಂಕರ್, ಮೀನಾ ಬಾಲರಾಜ್, ಭಾಗ್ಯ, ತನುಜ, ಸೇರಿದಂತೆ ಅನೇಕರು ಉಪಸ್ಥಿತರಿದ್ದು, ಎಲ್ಲಾ ಪದಾಧಿಕಾರಿಗಳಿಗೂ ಶುಭ ಹಾರೈಸಿದರು.



About The Author
Discover more from JANADHWANI NEWS
Subscribe to get the latest posts sent to your email.