
ಚಳ್ಳಕೆರೆ: ಬಯಲುಸೀಮೆಯ ಜನತೆಗೆ ಉತ್ತರ ಕರ್ನಾಟಕ ಶೈಲಿಯ ನಾಟಕದ ರಸದೌತಣವನ್ನು ಉಣ ಬಡಿಸಲು ಇಳಕಲ್ ತಾಲೂಕು ರಂಗಸಂಗಮ ಕಲೆ ಮತ್ತು ಸಾಸ್ಕೃತಿಕ ಸಂಘವು ಮಾಯ ಮದ ಮರ್ಧನ ಅಲ್ಲಮಪಭು ಎಂಬ ಐತಿಹಾಸಿಕ ನಾಟಕದ ಮೂಲಕ ಸಾಮಾಜಿಕ ಸಂದೇಶ ಸಾರಲು ಮುಂದಾಗಿದೆ ಎಂದು ಇಳಕಲ್ ತಾಲೂಕಿನ ರಂಗಸಂಗಮ ಕಲೆ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷೆ ರೇಷ್ಮಾ ಸಿ ಅಳವಂಡಿ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು 12ನೇ ಶತಮಾನದಲ್ಲಿ ಬಸವಣ್ಣ ನವರು ಅನುಭವ ಮಂಟಪ ಕಟ್ಟಿ ತಮ್ಮ ವಚನಗಳ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ಸಾರಿದ್ದರು ಅಲ್ಲಮ ಪ್ರಭುರವರ ಸಂದೇಶಗಳನ್ನು ಸಾರಲು ಐತಿಹಾಸಿಕ ನಾಟಕವನ್ನು ಚಳ್ಳಕೆರೆ ತಾಲೂಕಿನ ವೀರಶೈವ ಕಲ್ಯಾಣ ಮಂಟಪದಲ್ಲಿ ಇದರ
13 ರಂದು ಸಂಜೆ 6.30 ಗಂಟೆಗೆ ಹಮ್ಮಿಕೊಂಡಿದ್ದು ತಾಲೂಕಿನ ಎಲ್ಲಾ ಸಮಸ್ತ ನಾಗರಿಕರು ರೈತ ಬಾಂಧವರು ಹಾಗೂ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನೂರು ರೂಗಳ ಟಿಕೆಟ್ ಪಡೆದು ವೀಕ್ಷಿಸುವ ಮೂಲಕ ರಂಗಭೂಮಿ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.



ಅಖಿಲ ಭಾರತ ವೀರಶೈವ ಮಹಾಸಭಾ ಮಹಿಳಾ ಉಪಾಧ್ಯಕ್ಷೆ ಭಾಗ್ಯಮ್ಮ ನಾಟಕದ ಬಿತ್ತಿ ಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿ ಚಳ್ಳಕೆರೆ ತಾಲೂಕು ಬರಪೀಡಿತ ಪ್ರದೇಶ ಎಂಬ ಹಣೆಪಟ್ಟಿ ಹೊಂದಿದ್ದರು ಸಹ ಕಲೆ ಸಾಹಿತ್ಯ ಸಂಸ್ಕೃತಿಯಲ್ಲಿ ಎಂದಿಗೂ ಬರವನ್ನು ಎದುರಿಸಿಲ್ಲ ಇಲ್ಲಿ ತಳುಕಿನ ವೆಂಕಣ್ಣಯ್ಯ ತರಾಸು ಸೇರಿದಂತೆ ಹಲವು ದಿಗ್ಗಜ ಸಾಹಿತಿಗಳು ಹುಟ್ಟಿದ ನಾಡಾಗಿದ್ದು ಇಂದಿಗೂ ನಾಟಕ ಕಲೆ ಸಾಹಿತ್ಯಕ್ಕೆ ಹೆಚ್ಚಿನ ಪ್ರೋತ್ಸಾಹ ಜನತೆ ನೀಡುತ್ತಾ ಬಂದಿದ್ದಾರೆ ಇಂತಹ ಪೌರಾಣಿಕ ನಾಟಕಗಳು ತಾಲೂಕಿನಲ್ಲಿ ಹೆಚ್ಚಿನದಾಗಿ ನಡೆದು ಯಶಸ್ವಿಯಾಗಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ನೃತ್ಯನಿಕೇತನ ಸಂಗೀತ ಶಾಲೆಯ ಅಧ್ಯಕ್ಷ ವಿಷ್ಣುಮೂರ್ತಿ ರಾವ್ ಫರೀದ್ ಖಾನ್ ಸಂಜೀವಿನಿ ಲ್ಯಾಬ್ ನ ಎಂ ಎನ್ ಮೃತ್ಯುಂಜಯ, ಮಹಾದೇವಿ ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.