
ಚಳ್ಳಕೆರೆ ಜು.4
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕಡಿಮೆ ಫಲಿತಾಂಶ ಬಂದಿರುವ ಅನುದಾನಿತ
ಪ್ರೌಢಶಾಲೆಗಳ ಶಿಕ್ಷಕರ ಮೇಲಿನ ಕ್ರಮದಆದೇಶವನ್ನು ಹಿಂಪಡೆಯುವಂತೆ ಆಗ್ರಹಿಸಿ
ಕರ್ನಾಟಕರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಕ್ಷೇತ್ರ ಶಿಕ್ಷಣಾಧೊಕಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.
ಅನುದಾನಕ್ಕೆ ಒಳಪಟ್ಟಿರುವ ಪ್ರೌಢಶಾಲೆಗಳ ಸಹ ಶಿಕ್ಷಕರ
ವಿಷಯವಾರು ಫಲಿತಾಂಶವನ್ನು ಪರಿಗಣಿಸಿ ಶೇ.60% ಕ್ಕಿಂತ ಕಡಿಮೆ ಫಲಿತಾಂಶ ಬಂದಿರುವ ಸಹ
ಶಿಕ್ಷಕರನ್ನು ಗುರುತಿಸಿ ಅಂತವರ ವಾರ್ಷಿಕ ವೇತನ ಬಡ್ತಿಯನ್ನು ತಡೆಯಿಡಿಯುವುದು ಹಾಗೂ ಅನುದಾನ
ಪಡೆಯುತ್ತಿರುವ ವಿಷಯ ಶಿಕ್ಷಕರು ನಿರಂತರ ಮೂರು ವರ್ಷಗಳಲ್ಲಿ ಶೇ.60%ಕ್ಕಿಂತ ಕಡಿಮೆ ಫಲಿತಾಂಶ
ನೀಡಿದ್ದಲ್ಲಿ ಅಂತಹ ವಿಷಯ ಶಿಕ್ಷಕರ ವೇತನಾನುದಾನವನ್ನು ತಡೆಯಿಡಿಯುವುದು. ಹೀಗೆ ಹಲವಾರು
ವಿಷಯಗಳ ಮೇಲೆ ಕ್ರಮಕೈಗೊಳ್ಳುವುದರ ಬಗ್ಗೆ ಸಂಬಂಧಿಸಿದ ಧಾರವಾಡ ಮತ್ತು ಕಲಬುರಗಿ
ಆಯುಕ್ತಾಲಯ ವ್ಯಾಪ್ತಿಗೆ ಬರುವ ಜಿಲ್ಲಾ ಉಪನಿರ್ದೇಶಕರುಗಳಿಗೆ ಮೇಲಿನಂತೆ ಕ್ರಮವಹಿಸಲು
ತಿಳಿಸಿರುವುದು ಸರಿಯಷ್ಟೆ. ಆದರೆ ಫಲಿತಾಂಶ ಕಡಿಮೆ ಬರುವುದಕ್ಕೆ ಕೇವಲ ಶಿಕ್ಷಕರುಗಳು
ಮಾತ್ರಕಾರಣವಾಗದೇ ಈ ಕೆಳಕಂಡಂತೆ ಹಲವಾರು ಅಂಶಗಳು ಕಾರಣವಾಗಿವೆ ವಿದ್ಯಾರ್ಥಿಗಳು ತಾವು ಬೆಳೆದು ಬಂದಿರುವ ಪರಿಸರ. ಪ್ರಾಥಮಿಕ ಹಂತದಲ್ಲಿ ಕಲಿತಿರುವಂತಹ ಶಿಕ್ಷಣ, ಏಳನೇ ತರಗತಿಯವರೆಗೆ ಯಾವುದೇ ರೀತಿಯ ಗುಣಾತ್ಮಕ, ನಿರ್ಣಯಾತ್ಮಕ ಮಾನದಂಡಗಳ
ಪರೀಕ್ಷೆಗಳು ಮೌಲ್ಯಮಾಪನ ಇಲ್ಲದೇ ಇರುವುದರಿಂದ ನೇರವಾಗಿ ಯಾವುದೇ
ಅಡೆತಡೆಗಳಿಲ್ಲದೆ ಕನಿಷ್ಠ FLN ಸಾಧಿಸದೇ ಉತ್ತೀರ್ಣರಾಗಿರುವ ಮಕ್ಕಳು ಎಂಟನೇ ತರಗತಿಗೆ
ಪ್ರವೇಶ ಪಡೆಯುತ್ತಿದ್ದಾರೆ. ಪೋಷಕರು ಹಾಗೂ ಆಡಳಿತ ಮಂಡಳಿಯ ಅಸಹಕಾರ,
ಪ್ರೌಢಶಾಲಾ ಸಹ ಶಿಕ್ಷಕರು ಬೆಳಿಗ್ಗೆ 9 ರಿಂದ 10 ರವರೆಗೆ ವಿಶೇಷ ತರಗತಿ ಸಂಜೆ ದತ್ತು
ಮಕ್ಕಳ ಯೋಜನೆ, ಗುಂಪು ಅಧ್ಯಯನ, ರಾತ್ರಿ ಅವಧಿಗಳಲ್ಲೂ ಹಾಗೂ ರಜಾ ಅವಧಿಗಳಲ್ಲೂ
ಅಭ್ಯಾಸ ಮಾಡಿಸುವುದು ಮತ್ತು ಇಲಾಖೆಯು ಕಾಲಕಾಲಕ್ಕೆ ನೀಡುವ ಮಾರ್ಗದರ್ಶನಗಳನ್ನು
ಚಾಚುತಪ್ಪದೆ ಪಾಲಿಸಿದರೂ ನಿರೀಕ್ಷಿತ ಫಲಿತಾಂಶವನ್ನು ಪಡೆಯದಿರುವುದು.
ವಿದ್ಯಾರ್ಥಿಗಳ ನಿರಂತರ ಗೈರು ಹಾಜರಿ,
ಅನುದಾನಿತ ಸಂಸ್ಥೆಗಳ ಮಾನ್ಯತೆ ನವೀಕರಣ ಹಾಗೂ ಇತರೆ ತಾಂತ್ರಿಕ ತೊಂದರೆಗಳು.
ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಮುಖವಾಗಿ ಖಾಲಿ ಇರುವ ಶಿಕ್ಷಕರುಗಳ ಹುದ್ದೆಗಳನ್ನು
ತುಂಬದೇ ಇರುವುದು.
ಬಹಳಷ್ಟು ಅನುದಾನಿತ ಪ್ರೌಢಶಾಲೆಗಳಲ್ಲಿ ಕೇವಲ ಒಬ್ಬರು ಅಥವಾ ಇಬ್ಬರು ವಿಷಯ
ಶಿಕ್ಷಕರು ಮಾತ್ರ ತರಗತಿಗಳಲ್ಲಿ ಪಾಠ ಬೋಧನೆ ಮಾಡುತ್ತಿರುವುದು.
ಅನುದಾನಿತ ಪ್ರೌಢಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿಗಳನ್ನು ತೆರೆಯಲು ಅವಕಾಶ
ಇಲ್ಲದೇ ಇರುವುದರಿಂದಾಗಿ ಸಾಕಷ್ಟು ಮಕ್ಕಳ
ದಾಖಲಾತಿ ಕಡಿಮೆ ಆಗುತ್ತಿರುವುದರಿಂದ ಸೇರಿದಂತೆ ಹಲವು ಸಮಸ್ಯೆಗಳಿಂದ ಫಲಿತಾಂಶ ಕುಂಠಿತವಾಗಿದ್ದು ಇದನ್ನೆ ಶಿಕ್ಷಕರಿಗೆ ಶಿಕ್ಷೆ ಕೊಡುವಂತ ಆದೇಶವನ್ನು ಹಿಂಪಡೆಯದಿದ್ದರೆ ಹೋರಾಟ ಮಾಡುವುದಾಗಿ ಸರಕಾರದ ನಮನಸೆಳೆಯಲು ಕ್ಷೇತ್ರಶಿಕ್ಷಣಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿ ಸಿದ್ದಾರೆ.
ಈ ಸಂದರ್ಭದಲ್ಲಿ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ರಾಜಣ್ಣ.ಈರಣ್ಣ.ನಾಗರಾಜ್.ಬಸವರಾಜ್.ರುದ್ರಮುನಿ.ವೀರೇಶ್.ಗೋವಿಂದರೆಡ್ಡಿ.ಅಶೋಕ್.ತಿಪ್ಪೇಸ್ವಾಮಿ ಇತರರಿದ್ದರು.








About The Author
Discover more from JANADHWANI NEWS
Subscribe to get the latest posts sent to your email.