ಚಿತ್ರದುರ್ಗ .ಜುಲೈ.04:
ಕಣ್ಣು ಅತ್ಯಂತ ಅಮೂಲ್ಯ ಅಂಗವಾಗಿದೆ. ಎಲ್ಲರೂ ಕಣ್ಣಿನ ಆರೈಕೆ ಬಗ್ಗೆ ಗಮನಹರಿಸಬೇಕು ಎಂದು ತಾಲ್ಲೂಕು ವೈದ್ಯಾಧಿಕಾರಿ ಗಿರೀಶ್ ಸಲಹೆ ನೀಡಿದರು.
ಚಿತ್ರದುರ್ಗ ತಾಲೂಕಿನ ಸಿರಿಗೆರೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ಆಶಾಕಿರಣ ದೃಷ್ಟಿ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.
ಕಣ್ಣಿನ ಸೊಂಕು, ಮಿಟಮನ್ ಎ ಕೊರತೆ, ಕಣ್ಣಿ ಪೊರೆ ಸೇರಿದಂತೆ ದೃಷ್ಟಿದೋಷ ಉಳ್ಳವರಿಗೆ ಆಶಾಕಿರಣ ದೃಷ್ಟಿ ಕೇಂದ್ರದಲ್ಲಿ ಪರೀಕ್ಷೆ ಮಾಡಲಾಗುವುದು. ಅರ್ಹರಿಗೆ ಉಚಿತ ಕನ್ನಡಕ ವಿತರಣೆ ಹಾಗೂ ಆಶಾ ಕಿರಣ ಕಾರ್ಯಕ್ರಮದಡಿ ಕಣ್ಣಿನ ಶಸ್ತçಚಿಕಿತ್ಸೆ ಸಹ ಮಾಡಲಾಗುವುದು. ಎಲ್ಲಾ ಜಿಲ್ಲಾ ಹಾಗೂ ಆಸ್ಪತ್ರೆ, ತಾಲ್ಲೂಕು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಆಶಾಕಿರಣ ದೃಷ್ಟಿ ಕೇಂದ್ರ ತೆರೆಯಲಾಗಿದ್ದು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಮಾತನಾಡಿ, ಸರ್ಕಾರದಿಂದ ರಾಜ್ಯದಲ್ಲಿ 393 ಆಶಾಕಿರಣ ದೃಷ್ಟಿ ಕೇಂದ್ರ ಪ್ರಾರಂಭಿಸಲಾಗಿದೆ. ಆಶಾಕಿರಣ ಕಾರ್ಯಕ್ರಮದ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಪ್ರಶಂಸಿದೆ. ಈ ಕುರಿತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸಂತಸ ವ್ಯಕ್ತಪಡಿಸಿದ್ದಾರೆ ಎಂದರು.
ಸಿರಿಗೆರೆ ಗ್ರಾ.ಪಂ.ಅಧ್ಯಕ್ಷೆ ರೂಪ ಪ್ರದೀಪ್ ಮಾತನಾಡಿ, ಸರ್ಕಾರ ಕಣ್ಣಿನ ಆರೈಕೆ ಹಿತದೃಷ್ಟಿಯಿಂದ ಆಶಾಕಿರಣದಂತ ಬೃಹತ್ ಕಾರ್ಯಕ್ರಮ ಪ್ರಾರಂಭಿಸಿರುವುದು ಮೆಚ್ಚುಗೆಯ ವಿಷಯವಾಗಿದೆ ಎಂದರು.
ದೃಷ್ಟಿದೋಷ ಮುಕ್ತ ಕರ್ನಾಟಕ ನಿರ್ಮಾಣ ಮಾಡಲು ಅರ್ಹ ಫಲಾನುಭವಿಗಳು ಪರೀಕ್ಷೆಗೊಳಪಟ್ಟು ಯೋಜನೆಯ ಯಶಸ್ವಿಗೆ ಕೈಜೋಡಿಸಬೇಕೆಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಜಾನಕಿ ಕೋರಿದರು.
ಈ ವೇಳೆ ಹೆರಿಗೆ ಮತ್ತು ಸ್ತಿçÃರೋಗ ತಜ್ಞೆ ಡಾ.ಪವಿತ್ರ, ಆಯುಷ್ ವೈದ್ಯಾಧಿಕಾರಿ ಡಾ.ಶಿಲ್ಪ, ದಂತ ವೈದ್ಯಾಧಿಕಾರಿ ಡಾ.ಬಿಂದಿಯಾ, ಹಿರಿಯ ಫಾರ್ಮಸಿ ಅಧಿಕಾರಿ ಮೋಹನ್ ಕುಮಾರ್, ಪ್ರಥಮ ದರ್ಜೆ ಸಹಾಯಕಿ ಮಂಜುಳಾ, ನೇತ್ರಾಧಿಕಾರಿ ಬರ್ಕತ್ ಅಲಿ, ಎಕ್ಸರೇ ಟೆಕ್ನಿಷಿಯನ್ ಪ್ರದೀಪ್ ಕುಮಾರ್, ಆರೋಗ್ಯ ನಿರೀಕ್ಷಣಾಧಿಕಾರಿ ಪ್ರವೀಣಕುಮಾರ್, ಸುನಿಲ್‌ಕುಮಾರ್ ಶುಶ್ರೂಷಾಧಿಕಾರಿಗಳಾದ ನಾಗವೇಣಿ, ಜ್ಯೋತಿ, ರೇಣುಕಾ, ಶ್ಯಾಮಲ, ಆಪ್ತ ಸಮಾಲೋಚಕಿ ಕಾವ್ಯ, ಆಶಾ ಕಾರ್ಯಕರ್ತೆರಾದ ಉಮಾದೇವಿ, ವನಜಾಕ್ಷಮ್ಮ, ಆಶಾ ಕಿರಣ ಫಲಾನುಭವಿಗಳು ಸಾರ್ವಜನಿಕರು ಹಾಜರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.