July 12, 2025
IMG-20250704-WA0162.jpg

ಚಳ್ಳಕೆರೆ : ಹಿಂದೂ ಮುಸ್ಲಿಂ ಶಾಂತಿ ಸಂಕೇತದ ಮೊಹರಂ ಹಬ್ಬವನ್ನು ಹಿಂದು ಮತ್ತು ಮುಸ್ಲಿಂ ಭಾಂದವರೆಲ್ಲಾರು ಒಟ್ಟಿಗೆ ಸೇರಿ ಆಚರಿಸುವಂತ ಹಬ್ಬವಾಗಿದೆ

ಅವರು ತಾಲೂಕಿನ ತಳಕು ಹೋಬಳಿಯ ಚನ್ನಗಾನಹಳ್ಳಿ ಗ್ರಾಮದಲ್ಲಿ ನಡೆದ ಮೊಹರಂ ಹಬ್ಬದ ಕೊನೆಯ ದಿನದಂದು ಆಚರಿಸುವ ಕೆಂಡಾ ಹಾಯುವುದು ವಿಶೇಷ ಸಂಧರ್ಭದಲ್ಲಿ ಭಾಗವಹಿಸಿ ಮಾತನಾಡಿದರು.

ಹಿಂದೂ ಮುಸ್ಲಿಂ
ಭಾವೈಕ್ಯತೆ ಸಾರುವ ಮೊಹರಂ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಾರೆ . ಹಿಂದೂ ಹಾಗೂ ಮುಸ್ಲಿಂ ಸಮುದಾಯಗಳ ನಡುವೆ ಭಾವೈಕ್ಯತೆ ಮೂಡಿಸುವಲ್ಲಿ ಮೊಹರಂ ಅಥವಾ ಪೀರಲು ಹಬ್ಬ ಪ್ರಮುಖ ಪಾತ್ರ ವಹಿಸುತ್ತದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗಗಳಲ್ಲಿ ಈ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತದೆ ಎನ್ನಲಾಗಿದೆ.

ಇನ್ನೂ ಗ್ರಾಮದ ಹಿರಿಯರಾದ ತಿಮ್ಮಾರೆಡ್ಡಿ ಮಾತನಾಡಿ, ಮೊಹರಂ ನಿಮಿತ್ತ ನಗರದ ನಾನಾ ಕಡೆಗಳಲ್ಲಿ ಮುಸ್ಲಿಂ ಸಮುದಾಯದವರು ಪೀರಲು ದೇವರ ಮೆರವಣಿಗೆ ನಡೆಸುವ ಮೂಲಕ
ಹುಸೇನ್ ಮತ್ತು ಸಹೋದರರ ಹೆಸರಿನಲ್ಲಿ ಆಚರಿಸುವ ಮೊಹರಂ ಹಬ್ಬವನ್ನು ಜಾತಿ, ಧರ್ಮ ಭೇದವಿಲ್ಲದೆ ಬಹುತೇಕ ಕಡೆಗಳಲ್ಲಿ ಹಿಂದೂ-ಮುಸ್ಲಿಮರು ಒಟ್ಟಾಗಿ ಆಚರಿಸುವುದು ವಿಶೇಷ. ಕೆಂಡ ಹಾಯುವುದು ಪ್ರಮುಖ ಆಚರಣೆ ಮಾಡುತ್ತಾರೆ ಎಂದರು.

ಇನ್ನೂ ಗ್ರಾಮದ ಗೊಂಚಿಕಾರ್ ಪ್ರಕಾಶ್ ರೆಡ್ಡಿ ಮಾತನಾಡಿ,
ಹತ್ತು ದಿನಗಳ ಕಾಲ ಆಚರಿಸುವ ಪೀರಲು ಹಬ್ಬದಲ್ಲಿ ಪೆಟ್ಟಿಗೆಯಲ್ಲಿನ ದೇವರನ್ನು ಹೊರತೆಗೆದು ಪ್ರತಿಷ್ಠಾಪನೆ ಮಾಡಿ ನಿತ್ಯ ಒಂದೊಂದು ಪೂಜೆ ನೆರವೇರಿಸುವುದು ಇಲ್ಲಿನ ವಾಡಿಕೆ. ಇನ್ನೂ ಕೊನೆಯ ದಿನದ ಮೊಹರಂ ಹಬ್ಬವನ್ನು ಬಹಳಷ್ಟು ವಿಜೃಂಬಣೆ ಎರಡು ಸಮುದಾಯದವರು ಸೇರಿ ಬಹಳ ಅದ್ದೂರಿಯಾಗಿ ಆಚರಿಸುತ್ತಾರೆ ಎಂದರು.

ಈ ಸಂದರ್ಭದಲ್ಲಿ ಗ್ರಾಪಂ. ಉಪಾಧ್ಯಕ್ಷೆ ಮಂಜುಳಾ ತಿಪ್ಪೇಸ್ವಾಮಿ, ಸದಸ್ಯರಾದ ಅಶ್ವಿನಿ ರುದ್ರಪ್ಪ, ಸೇವ್ಯಾನಾಯ್ಕ್,
ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ತಿಪ್ಪೇಸ್ವಾಮಿ, ಪ್ರಕಾಶ್ ರೆಡ್ಡಿ, ಗೌಡರ ಚೆನ್ನಪ್ಪ, ಪೂಜಾರಿ ಭಿಮ್ಣಣ್ಣ, ತಳವಾರ ತಿಮ್ಮೆಶ್, ದಳಪತಿ ತಿಮ್ಮಾರೆಡ್ಡಿ, ರಾಮಾಂಜನೇಯರೆಡ್ಡಿ, ಧನಂಜಯ್, ಶಿಕ್ಷಕರಾದ ವೆಂಕಟೇಶ್, ರುದ್ರಪ್ಪ, ಓಬಣ್ಣ, ಮಲ್ಲೇಶ್, ವೆಂಕಟರೆಡ್ಡಿ, ವಿಶ್ವನಾಥ್, ಮಲ್ಲೇಶ್, ಮಾರಣ್ಣ, ಮೈಕ್ ಸೆಟ್ ತಿಪ್ಪೇಸ್ವಾಮಿ, ರಾಮಣ್ಣ, ಪಾಪಣ್ಣ, ದಾದಪೀರ್, ಆಂಜನೇಯ, ಟಿಪ್ಪುಸುಲ್ತಾನ್, ಹುಸೇನ್ ಸಾಬ್, ದಾದ ಪೀರ್, ಇತರರು ಭಾಗಿಯಾಗಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading