September 14, 2025
IMG-20250504-WA0071.jpg

” ಚಳ್ಳಕೆರೆ-ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರು ದೇವರ ಎತ್ತುಗಳ ಸೇವೆಯ ಮೂಲಕ ಬಸವ ಜಯಂತಿಯನ್ನು ಆಚರಿಸುತ್ತಿರುವ ಬಹಳ ಅರ್ಥಪೂರ್ಣವಾಗಿದೆ ಎಂದು ದೇವರ ಎತ್ತುಗಳ ಮೇಲ್ವಿಚಾರಕ ಮಹೇಶ್ ತಿಳಿಸಿದರು. ತಾಲೂಕಿನ ನಾಯಕನಹಟ್ಟಿ ಹೋಬಳಿಯ ನೆಲಗೇತನಹಟ್ಟಿ ಸಮೀಪದ ಚೆನ್ನಕೇಶವಸ್ವಾಮಿಯ ದೇವರ ಎತ್ತುಗಳಿಗೆ ಜಗಜ್ಯೋತಿ ಬಸವೇಶ್ವರರ 892ನೇ ಜಯಂತ್ಯುತ್ಸವದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಹಮ್ಮಿಕೊಂಡಿದ್ದ “ಗೋಪೂಜೆ ಮತ್ತು ಒಂದು ಲೋಡ್ ರಾಗಿ ಹುಲ್ಲಿನ ವಿತರಣಾ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಮಹಾತ್ಮರ ಜಯಂತಿಗಳ ಹೆಸರಿನಲ್ಲಿ ಲಕ್ಷಗಟ್ಟಲೆ ಹಣ ದುಂದುವೆಚ್ಚ ಮಾಡುವ ಬದಲು ಈ ರೀತಿ ದೇವರ ಎತ್ತುಗಳಿಗೆ ಬೇಕಾದ ಹುಲ್ಲು,ನೀರು ಮತ್ತು ನೆರಳಿನ ವ್ಯವಸ್ಥೆ ಮಾಡುವ ಮೂಲಕ ಆಚರಿಸಬೇಕಿದ್ದು ಇದಕ್ಕೆ ಮಾದರಿಯಾಗಿ ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರು ಗೋಸೇವೆಗೆ ಮುಂದಾಗಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.ಇಂತಹ ದೇವರ ಎತ್ತುಗಳನ್ನು ಉಳಿಸಿ-ಸಂರಕ್ಷಿಸುವ ಅಗತ್ಯವಿದೆ ಎಂದು ಹೇಳಿದರು. ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಮುಖ್ಯಸ್ಥೆ ಶ್ರೀಮತಿ ಜಿ.ಯಶೋಧಾ ಪ್ರಕಾಶ್ ಮಾತನಾಡಿ ಭಾರತೀಯ ಸನಾತನ ಸಂಸ್ಕೃತಿಯಲ್ಲಿ ಗೋವು ಜನಜೀವನದ ಮೇಲೆ ಆಳವಾದ ಪ್ರಭಾವ ಬೀರಿದ್ದು ಪ್ರತಿಯೊಂದು ಶುಭ ಕಾರ್ಯಗಳಲ್ಲಿ ಗೋವನ್ನು ಪೂಜಿಸುವ ಸಂಸ್ಕೃತಿಯನ್ನು ಕಾಣುತ್ತೇವೆ.ದೇವರ ಎತ್ತುಗಳಿಗೆ ಗೋಪೂಜೆ ಮತ್ತು ಹುಲ್ಲು ವಿತರಣೆಯ ಮೂಲಕ ಬಸವ ಜಯಂತಿಯನ್ನು ಮಾಡುತ್ತಿರುವುದು ಮಾದರಿ ಕಾರ್ಯವಾಗಿದೆ ಎಂದು ಹೇಳಿದರು. ಶ್ರೀಶಾರದಾಶ್ರಮದ ಸ್ವಯಂಸೇವಕ ಯತೀಶ್ ಎಂ ಸಿದ್ದಾಪುರ-ಗೋಪೂಜೆ ಮತ್ತು ರಾಗಿ ಹುಲ್ಲಿನ ವಿತರಣಾ ಕಾರ್ಯಕ್ರಮದ ಮೂಲಕ ಬಸವ ಜಯಂತಿ ಆಚರಣೆಯ ಹಿನ್ನೆಲೆ ಮತ್ತು ಮಹತ್ವದ ಬಗ್ಗೆ ವಿವರಿಸಿದರು.ಈ ಸಂದರ್ಭದಲ್ಲಿ ದೇವರ ಎತ್ತುಗಳಿಗೆ ಬಾಳೆಹಣ್ಣು,ಇಂಡಿ ಮತ್ತು ಒಂದು ಲೋಡ್ ರಾಗಿ ಹುಲ್ಲನ್ನು ವಿತರಿಸಿ ಕಿಲಾರಿ ಮತ್ತು ಗೋಪಾಲಕರನ್ನು ಶ್ರೀಶಾರದಾಶ್ರಮದ ವತಿಯಿಂದ ಸನ್ಮಾನಿಸಲಾಯಿತು.ಈ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ,ಎಂ.ಗೀತಾ ನಾಗರಾಜ್, ಜಯಮ್ಮ, ನರಸಿಂಹಮೂರ್ತಿ, ಗೀತಾ ಸುಂದರೇಶ್, ಶಿಕ್ಷಕ ಬೋರಯ್ಯ,ಕಿಲಾರಿ ಶಿವಕುಮಾರ್, ಶಿವಮೂರ್ತಿ , ಪಾಪಯ್ಯ ,ಪುರಂದರ, ಕುಮಾರ್,ಶಿವು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading