September 14, 2025
IMG20250504104657_01.jpg

ಚಳ್ಳಕೆರೆ ಮೇ 4.

ಭಗೀರಥ ಮಹರ್ಷಿಗಳು ತಮ್ಮ ಕಠೊರ ತಪಸ್ಸಿನ ಮೂಲಕ ಬ್ರಹ್ಮದೇವ ಹಾಗೂ ಪರಮಾತ್ಮನನ್ನು ಮೆಚ್ಚಿಸಿ ಗಂಗಾಮಾತೆಯನ್ನು ಧರೆಗೆ ಕರೆತಂದರು. ಅವರಂತೆಯೇ ಪ್ರಾಮಾಣಿಕ ಪ್ರಯತ್ನ ಮಾಡಿದಾಗ ಏನಾದರೂ ಸಾಧಿಸಲು ಸಾಧ್ಯವಾಗುತ್ತದೆ ಎಂದು ತಾಪಂ ಇಒ ಶಶಿಧರ್ ಹೇಳಿದರು.
ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಉಪ್ಪಾರ ಸಮುದಾಯದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಮಹರ್ಷಿ ಶ್ರೀ ಭಗೀರಥ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜೀವನದಲ್ಲಿ ಅಸಾಧ್ಯವಾದದ್ದು ಯಾವುದೂ ಇಲ್ಲ. ಆದ್ದರಿಂದ ನಮ್ಮ ನಿತ್ಯ ಜೀವನದಲ್ಲಿ ಮೊದಲು ಪ್ರಯತ್ನ ಪಡಬೇಕು. ನಂತರ ಯಶಸ್ಸು ತಾನಾಗಿಯೇ ಒಲಿದುಬರುತ್ತದೆ. ಪ್ರಸ್ತುತ ಸಮಾಜದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಇದೆ. ಶಿಕ್ಷಣ ಇಲ್ಲದ ಕುಟುಂಬ ಅಂಧಕಾರದಲ್ಲಿರುತ್ತದೆ. ಹಾಗಾಗಿ, ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಶಿಕ್ಷಣದಿಂದ ಮಾತ್ರ ಆರ್ಥಿಕ, ಸಾಮಾಜಿಕವಾಗಿ ಪ್ರಗತಿ ಸಾಧಿಸಬಹುದು ಎಂದು ತಿಳಿಸಿದರು.
ಶಿಕ್ಷಕ ಎಸ್.ಟ.ತಿಪ್ಪೇಸ್ವಾಮಿ ವಿಶೇಷ ಉಪನ್ಯಾಸ ನೀಡುತ್ತಾ ಗಂಗೆ ಗೌರಿ ಮಹಾರಾಜನ ಪುತ್ರನಾದ ಭಗೀರಥ ಮಹರ್ಷಿಗಳು ತನ್ನ 60 ಜನ ತಾತಂದಿರ ಮೋಕ್ಷಕ್ಕಾಗಿ ಪಂಚಾಗ್ನಿ ತಪಸ್ಸು ಮಾಡಿ ಬ್ರಹ್ಮದೇವನನ್ನು ಒಲಿಸಿಕೊಳ್ಳುತ್ತಾರೆ. ನಂತರ ಬ್ರಹ್ಮದೇವನ ಸಲಹೆಯಂತೆ ಮತ್ತೆ ಕಠೊರ ತಪಸ್ಸನ್ನು ಆಚರಿಸುವ ಮೂಲಕ ಪರಶಿವನನ್ನು ಮೆಚ್ಚಿಸಿ ಗಂಗಾಮಾತೆಯನ್ನು ಧರೆಗೆ ಕರೆತರುತ್ತಾರೆ. ಹೀಗಾಗಿ, ಯಾವುದೇ ಕೆಲಸ ಮಾಡುವಾಗ ಅಥವಾ ಮಾಡಿದಾಗ ಭಗೀರಥನಂತೆ ಪಯತ್ನ ಮಾಡು, ನೀನು ಮಾಡಿದ್ದು ಭಗೀರಥ ಪ್ರಯತ್ನ ಎಂಬುದಾಗಿ ಹಿರಿಯರು ಪ್ರೋತ್ಸಾಹಿಸುತ್ತಾರೆ. ಭಗೀರಥ ಮಹರ್ಷಿಗಳ ಕುಲವಂಶಸ್ಥರನ್ನು ಕರ್ನಾಟಕದಲ್ಲಿ ಉಪ್ಪಾರ, ಉತ್ತರ ಭಾರತದಲ್ಲಿ ಲೋನಾರ, ಆಂಧ್ರಪ್ರದೇಶದಲ್ಲಿ ಸಗರ, ಸಾಗರ ಮುಂತಾದ ಹೆಸರುಗಳಿಂದ ಕರೆಯುತ್ತಾರೆ ಎಂದು ಹೇಳಿದರು.
ನಗರಸಭೆ ಅಧ್ಯಕ್ಷೆ ಮಂಜುಳಾ.ಉಪಾಧ್ಯಕ್ಷೆ ಕವಿತಾಬೋರಯ್ಯ.ಮಾತನಾಡಿದರು.
ಜಯಂತಿ ಕಾರ್ಯಕ್ರಮದಲ್ಲಿ ಗೈರು ಹಾಜರಾದ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡುವಂತೆ ತಹಶೀಲ್ದಾರ್ ರೇಹಾನ್ ಪಾಷಾ ಶಿರಸ್ತೇದಾರ್ ಗೆ ತಾಕೀತು ಮಾಡಿದರು.
ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ.ಸದಸ್ಯರಾದ ಸುಮಭರಮಯ್ಯ.ರಾಘವೇಂದ್ರ.ಭದ್ರಿ.ನೇತಾಜಿಪ್ರಸನ್ನ.ಗ್ರಾಪಂ ಅಧ್ಯಕ್ಷೆ ಮಂಗಳ.ಸದಸ್ಯೆ ಅನಿತಾ.ಉಪ್ಪಾರ ಸಂಘದ ತಾಲೂಕು ಅಧ್ಯಕ್ಷ ಹನುಮಂತಪ್ಪ.ಗೌರವ ಅಧ್ಯಕ್ಷ ಯಲ್ಲಪ್ಪ.ರಂಗನಾಥ್.ಎಲ್ ಐ ಸಿ ರಂಗಸ್ವಾಮಿ.ಡಿಎಂಕೆ ರವಿ.ಮಾರುತಿ.ಮುಸ್ಟೂರಲಿಂಗಪ್ಪ.ಉಮೇಶ್.ಗೋವಿಂದಪ್ಪ.ಪೌರಾಯುಕ್ತ ಜಗ್ಗ ರೆಡ್ಡಿ. ಶಿರಸ್ತೇದಾರ್ ಸದಾಶಿವಪ್ಪ.ಹಾಗೂ ಸಮಾಜದ ಮುಖಂಡರು ಇತರರಿದ್ದರು.
ವಿವಿಧ ಸಾಧಕರಿಗೆ ಸಮ್ಮಾನಿಸಿ ಗೌರವಿಸಲಾಯಿತು.

 

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading