ಚಳ್ಳಕೆರೆ ಏ.4
ಬೀದಿ ದೀಪ. ಚರಂಡಿ ಸತವಚ್ಚತೆ. ಖಾಸಗಿ ಬಡಾವಣೆ ಉದ್ಯಾನ ವನ ಅಭಿವೃದ್ಧಿ ಸೇರಿದಂತೆ ಸದಸ್ಯರು ಸಮಸ್ಯೆ ಗಳ ಸುರಿಮಳೆ ಗೈದ ಪ್ರಸಂಗ ಜರುಗಿತು ಹೌದು ಇದು ಚಳ್ಳಕೆರೆ ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ ಮಂಜುಳಾ ಪ್ರಸನ್ನಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ತುರ್ತು ಸಭೆಯಲ್ಲಿ ಸದಸ್ಯರು ಅಧಿಕಾರಿಗಳ ವಿರುದ್ದ ಅಕ್ರೋಶ ಹೊರ ಹಾಕಿದರು.
ಸದಸ್ಯೆ ಸುಜಾತ ಮಾತನಾಡಿ ನಮ್ನ ವಾರ್ಡ್ ವಿಸ್ತಾರವಾಗಿದ್ದು ಹಂಚಿಕೆ ಮಾಡಿರುವ ಬೀದಿ ದೀಪಗಳು ಸಾಕಾಗುವುದಿಲ್ಲ ಹೆಚ್ಚಿಗೆ ನೀಡುವಂತೆ ಸಭೆ ಗಮನಸೆಳೆದರು ಇದಕ್ಕೆ ಸದಸ್ಯೆ ನಾಗವೇಣಿ ಧ್ವನಿಗೂಡಿಸಿ ನಮ್ಮ ವಾರ್ಡ್ ವಿಸ್ತಾರವಾಗಿದ್ದು ನಮಗೂ ಹೆಚ್ಚಿಗೆ ಬಲ್ಪ್ ನೀಡುವಂತೆ ಒತ್ತಾಯಿಸಿದರು.
ಸದಸ್ಯ ಜಯಣ್ಣ ಮಾತನಾಡಿ ಭೂತಯ್ಯ ಲೇಹೌಟ್ .ಬೆಂಗಳೂರುರಸ್ತೆ. ವಿಠಲನಗರಕ್ಕೆ ನಗರಭೆಯಿಂದ ಮೂಲ ಭೂತ ಸೌಲಭ್ಯಗಳನ್ನು ನೀಡುತ್ತಿದ್ದು ಆದಾಯ ಮಾತ್ರ ನನ್ನಿವಾಳ ಹಾಗೂ ನಗರಂಗೆರೆ ಗ್ರಾಮ ಪಂಚಾಯತಿ ಗಲಕಿಗೆ ಹೋಗುತ್ತಿದೆ ಕೂಡಲೆ ನಗರಸಭೆಗೆ ಸೇರಿಸಿಕೊಳ್ಳವಂತೆ ಅಧಿಕಾರಿಗಳ ಗಮನ ಸೆಳೆದರು
ನಾಮನಿರ್ದೇಶಕ ಸದಸ್ಯ ಅನ್ವರ್ ಸಾಬ್ ಮಾತನಾಡಿ ನಗರದ ಖಾಸಗಿ ಲೇಹೌಟ್ ಗಳಲ್ಲಿನ ಉದ್ಯಾನವನಗಳು ಹಾಗೂ ಸಿ.ಎ ಸೈಟ್ ಗಳು ಕಣ್ಮರೆಯಾಗುತ್ತಿದ್ದು ಅವುಗಳನ್ನು ಪತ್ತೆ ಮಾಡಿ ವಶಕ್ಕೆ ಪಡೆಯಬೇಕು ಉದ್ಯಾನವನಗಳ ಅಭಿವೃದ್ಧಿ ಪಡಿಸುವಂತೆ ಅಧಿಕಾರಿಗಳ ಗಮನ ಸೆಳೆ.
ಖಾಸಗಿ ನಿಲ್ದಾಣದ ಸುಂಕವಸೂಲಿ ಹಾರಾಜು ಬಗ್ಗೆ ಅಧಿಕಾರಿಗಳು ಗಮನ ಸೆಳೆದಾಗ ಸದಸ್ಯರಾದ ವಿಶ್ ಕುಮಾರ್ .ನಾಗವೇಣಿ ಮಾತನಾಡಿ ಕಳೆದ ಸಭೆಯಲ್ಲಿ ಸದಸ್ಯೆ ಸುಜಾತ ಖಾಸಗಿ ಬಸ್ ನಿಲ್ದಾಣಕ್ಕೆ ಬೆಳಕು.ನೆರಳು.ಕುಡಿಯುವ ನೀರು.ಮೂಲಭೂತವಸೌಲಭ್ಯಗಳನ್ನು ನೀಡಿ ಹರಾಜು ಹಾಕುವಂತೆ ಗಮನಸೆಳೆದರೂ ಸದಸ್ಯರ ಮಾತಿಗೆ ಕವಡೆ ಕಾಸು ಕಿಮ್ಮತ್ತು ನೀಡದೆ ಮತ್ತೆ ಹರಾಜು ಮಾಡಲು ಮುಂದಾಗಿದ್ದಾರೆ ಇದಕ್ಕೆ ನಮ್ಮ ಬೆಂಬಲವಿಲ್ಲ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಸುಂಕವಸೂಲಿ ಮಾಡುವಂತೆ ಅಧಿಕಾರಿಗಳ ಗಮನ ಸೆಳೆದು ಸಭೆಯಿಂದ ನಿರ್ಗಮಿಸಿದರು.
ಇಂಜಿನಿಯರ್ ಲೋಕೇಶ್ ಮಾತನಾಡಿ ಖಾಸಗಿ ಬಸ್ ನಿಲ್ದಾಣ ಅಭಿವೃದ್ಧಿಗೆ ಅನುದಾನ ಮೀಸಲಿಟ್ಟು ಕುಡಿಯುವ ನೀರು. ಕಾಂಪೌಂಡ್. ವಾಣಿಜ್ಯ ಮಳಿಗೆ ನೆರಳು ಮಾಡಲು4.5 ಕೋಟಿ ರೂ ಕ್ರಿಯಾಯೋಜನೆ ಟೆಂಡರ್ ಅನುಮೋದನೆಗೆ ಕಳಿಸಿದ್ದು ಬಂತ ತಕ್ಷಣ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಸದಸ್ಯರಿಗೆ ಮನವರಿಕೆ ಮಾಡಿದರು.
ಸಭೆಯಲ್ಲಿ150 ಶೌಚಾಲಯ ಫಲಾನುಭವಿಗಳ ಆಯ್ಕೆ.ಬೀದಿ ದೀಪ ನಿರ್ವಹಣೆ.ಬೆಂಗಳೂರು ರಸ್ತೆಯ ಮುಖ್ಯ ರಸ್ತೆಯಲ್ಲಿ ಚರಂಡಿ .ರಸ್ತೆ ಬಾಕಿ ಇರುವ ಕಾಮಗಾರಿಗಳ ಅನುಮೋದನೆ ಪಡೆಯಲಾಯಿತು.
ಅಧ್ಯಕ್ಷೆ ಮಂಜುಳಾ ಮಾತನಾಡಿ ಬೀದಿ ದೀಪಗಳ ಹಂಚಿಕೆ ವಿಚಾರವಾಗಿ ಸದಸ್ಯರ ಹೊಂದಾಣಿಕೆ ಮೇಲೆ ಎಲ್ಲಾ ವಾರ್ಡ್ ಗಳಿಗೂ ದೊರೆಯುವಂತೆ ಹಂಚಿಕೆ ಮಾಡಲು ಸದಸ್ಯರ ಸಹಕಾರ ಅಗತ್ಯ ಎಂದರು.
ಸಭೆಯಲ್ಲಿ ಉಪಾಧ್ಯಕ್ಷೆ ಸುಮಾಬರಮಣ್ಣ.ಪೌರಾಯುಕ್ತ ಜಗ್ಗರೆಡ್ಡಿ.ವ್ಯವಸ್ಥಾಪಕ ಲಿಂಗರಾಜ್ .ಇಂಜಿನಿರ್ ವಿನಯ್.ನರೇಂದ್ರಬಾಬು .ಸಭೆಗೆ ಮಾಹಿತಿ ನೀಡಿದರು.











About The Author
Discover more from JANADHWANI NEWS
Subscribe to get the latest posts sent to your email.