March 4, 2026
FB_IMG_1772640038351.jpg

ಹಿರಿಯೂರು:

ಇತ್ತೀಚಿನ ದಿನಗಳಲ್ಲಿ ಮಹಿಳೆಯರಿಗೆ ಗರ್ಭಕೋಶ ಕಂಠದ ಕ್ಯಾನ್ಸರ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಈ ಗರ್ಭಕೋಶ ಕಂಠದ ಕ್ಯಾನ್ಸರ್ ಗೆ ಅತ್ಯಂತ ಪರಿಣಾಮಕಾರಿಯಾದ ಹೆಚ್.ಪಿ.ವಿ.ಲಸಿಕೆ ಲಭ್ಯವಿದ್ದು, ಅದನ್ನು 9ವರ್ಷದಿಂದ 26 ವರ್ಷದ ಹೆಣ್ಣುಮಕ್ಕಳು ತಪ್ಪದೇ ಪಡೆದುಕೊಳ್ಳಬೇಕು ಎಂಬುದಾಗಿ ಚಿತ್ರದುರ್ಗ ಜಿಲ್ಲಾ ಸ್ತ್ರೀರೋಗತಜ್ಞರ ಸಂಘದ ಅಧ್ಯಕ್ಷರಾದ ಶ್ರೀಮತಿ ಡಾ. ಎಂ.ಜಿ.ಲತಾ ಸೂಚಿಸಿದರು.

ನಗರದ ರೋಟರಿ ಸಭಾಭವನದಲ್ಲಿ ರೆಡ್ ಕ್ರಾಸ್, ರೋಟರಿ, ಸರ್ವೋದಯ ಥಯೋಸಾಫಿಕಲ್ ಸೊಸೈಟಿ ಮತ್ತು ಹೆಲ್ಪ್ ಸಂಸ್ಥೆ ಹಿರಿಯೂರು, ಚಿತ್ರದುರ್ಗ ಬಸವೇಶ್ವರ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಹಾಗೂ ಎಸ್.ಜೆ.ಎಂ. ಗರ್ಲ್ ಕಾಲೇಜು ಮತ್ತು ಆಸ್ಪತ್ರೆ ಸಹಯೋಗದಲ್ಲಿ ನಡೆಸಲಾದ ಕ್ಯಾನ್ಸರ್ ಜಾಗೃತಿ ಉಪನ್ಯಾಸ ಬೃಹತ್ ಸಮಗ್ರ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈ ರೋಗವನ್ನು ಪತ್ತೆ ಹಚ್ಚುವಲ್ಲಿ ಅವಶ್ಯಕತೆಯಿದ್ದಲ್ಲಿ, ಎಫ್.ಎನ್.ಎ.ಸಿ.ಸ್ಕ್ಯಾನಿಂಗ್ ಹಾಗೂ ಮ್ಯಾಮೋಗ್ರಫಿ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು ಎಂದರಲ್ಲದೆ, ಈ ಕ್ಯಾನ್ಸರ್ ರೋಗವನ್ನು ಆರಂಭಿಕ ಹಂತದಲ್ಲಿ ಪತ್ತೆ ಹಚ್ಚುವ ಮೂಲಕ ಸುಲಭವಾಗಿ ಗುಣಪಡಿಸಬಹುದಾಗಿದೆ ಎಂಬುದಾಗಿ ಅವರು ಹೇಳಿದರು.
ಕೇಂದ್ರ ಸರ್ಕಾರದಿಂದ ಉಚಿತವಾಗಿ 14 ವರ್ಷದ ಮಕ್ಕಳಿಗೆ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆನೀಡಲಾಗಿದ್ದು, ಅದರ ಸದುಪಯೋಗ ಪಡೆದುಕೊಂಡು ಈ ಕ್ಯಾನ್ಸರ್ ನಿರ್ಮೂಲನೆಗೆ ಸರ್ಕಾರ ಹಾಗೂ ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಬೇಕು, ಎಂಬುದಾಗಿ ಅವರು ಮನವಿ ಮಾಡಿದರು.ಹೆಣ್ಣು ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತಿರುವ ಸ್ತನ ಕ್ಯಾನ್ಸರ್ ಬಗ್ಗೆ ತಿಳಿಸಿ ನಿಯಮಿತವಾಗಿ ಸ್ತನ ಸ್ವಪರೀಕ್ಷೆ ಮಾಡಿಕೊಳ್ಳುವ ಬಗ್ಗೆ ವಿವರಿಸಿದರು.
ಕ್ಯಾನ್ಸರ್ ರೋಗವು ಅಲ್ಕೋಹಾಲ್ , ಸ್ಮೋಕಿಂಗ್, ಡ್ರಗ್ಸ್ ಗಳಂತಹ ಮಾದಕವಸ್ತುಗಳ ಹಾಗೂ ರಸಾಯನಿಕ ಪದಾರ್ಥಗಳ ಸೇವನೆಯಿಂದ ಹರಡುತ್ತದೆ. ಕ್ಯಾನ್ಸರ್ ರೋಗವು ಮಾನವನ ತೆಲೆಯಿಂದ ಪಾದದವರೆಗೆ ಬರುತ್ತದೆ. ಎದೆಯ ಭಾಗದಿಂದ ಆರಂಭವಾಗಿ ದೇಹದ ವಿವಿಧ ಭಾಗಗಳಿಗೆ ಹರಡತ್ತದೆ ಎಂಬುದಾಗಿ ಅವರು ಹೇಳಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ರೆಡ್ ಕ್ರಾಸ್ ಚೇರ್ಮನ್, ರೋಟರಿ ಮಾಜಿ ಅಧ್ಯಕ್ಷರಾದ ಗಾಯಿತ್ರಿ ಶಿವರಾಂ, ಬಸವೇಶ್ವರ ಆಸ್ಪತ್ರೆಯ ನುರಿತ ವೈದ್ಯರುಗಳಾದ ಡಾ.ಜಯಚಂದ್ರ, ಡಾ.ಧನುಷ್, ಡಾ.ಚೇತನ, ಡಾ.ಅಕ್ಷತ, ಡಾ.ರುಚಿತಾ, ಡಾ.ಪ್ರಶಾಂತ್, ಡಾ.ಪ್ರಕೃತಿ, ಡಾ.ಸುಹಾಸ್, ಡಾ.ನಿತಿನ್, ಹೆಲ್ಪ್ ಸಂಸ್ಥೆಯ ಆರ್.ವೈ. ಸ್ವಾಮಿ, ಕೋ-ಆರ್ಡಿನೇಟರ್ ಗಳಾದ ರವಿಕುಮಾರ್ ಮತ್ತು ಅಭಿಷೇಕ್ ಮತ್ತು ಸಿಬ್ಬಂದಿ, ರೆಡ್ ಕ್ರಾಸ್ ಚೇರ್ಮನ್ ಹೆಚ್. ಎಸ್. ಸುಂದರಾಜ್, ಯೂತ್ ರೆಡ್ ಕ್ರಾಸ್ ನ ಶಶಿಕಲಾರವಿಶಂಕರ್, ವೈಸ್ ಛೇರ್ಮನ್ ಬಿ.ಕೆ. ನಾಗಣ್ಣ, ಎಂ.ಎಸ್.ರಾಘವೇಂದ್ರ, ಎಸ್.ಜೋಗಪ್ಪ, ಸಣ್ಣಭೀಮಣ್ಣ, ಕೆ.ಎಸ್.ಮಹಾಬಲೇಶ್ವರಶೆಟ್ಟಿ, ದೇವರಾಜ್ ಮೂರ್ತಿ, ಪಿ.ಆರ್. ಸತೀಶ್ ಬಾಬು, ಪರಮೇಶ್ವರ್ ಭಟ್, ರೋಟರಿಗಳಾದ ಎಲ್. ಆನಂದಶೆಟ್ಟಿ, ಟಿ. ಮಲ್ಲೇಶಪ್ಪ, ರಂಗನಾಥಪ್ಪ, ಶಿವಲಿಂಗಮೂರ್ತಿ, ಮಹಿಳಾ ರೆಡ್ ಕ್ರಾಸ್ ಅಧ್ಯಕ್ಷರಾದ ಗೀತಾರಾಧಕೃಷ್ಣ, ಉಪಾಧ್ಯಕ್ಷರಾದ ನಾಗಸುಂದರಮ್ಮಸುಬ್ಬಣ್ಣಶೆಟ್ಟಿ, ಚಂದ್ರವದನಾಸತ್ಯಮೂರ್ತಿ, ಶೋಭನಾಗರಾಜ್, ಪದ್ಮಜಾಎಂ.ಶೆಟ್ಟಿ, ಪಾರ್ವತಮ್ಮ, ಮತ್ತು ತೋಟಗಾರಿಕೆ ಮಹಾವಿದ್ಯಾಲಯ ಯೂತ್ ರೆಡ್ ಕ್ರಾಸ್ ವಿದ್ಯಾರ್ಥಿಗಳು ಮತ್ತು ಫ್ರೊಫೆಸರ್ ಗುರುದೇವಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading