.ವರದಿ,ಕೆ.ಟಿ. ಓಬಳೇಶ್ ನಲಗೇತನಹಟ್ಟಿ.
ನಾಯಕನಹಟ್ಟಿ: ಐತಿಹಾಸಿಕ ಗುರು- ತಿಪ್ಪೇರುದ್ರಸ್ವಾಮಿ ದೇವಾಲಯದಲ್ಲಿ
ವಾರ್ಷಿಕ ಜಾತ್ರೆ ಪ್ರಯುಕ್ತ ಹುಂಡಿ ಹಣದ ಎಣಿಕೆ ಕಾರ್ಯವನ್ನು ಮಂಗಳವಾರ ದೇವಾಲಯದ ಆವರಣದಲ್ಲಿ ಬ್ಯಾಂಕ್ ಕಂದಾಯ ಇಲಾಖೆಗಳ ಧಿಕಾರಿಗಳ ಸಹಯೋಗದಲ್ಲಿ ನಡೆಸಲಾಯಿತು.
ವಾರ್ಷಿಕ ಜಾತ್ರೆ ಹಾಗೂ ಮರಿಪರಿಷೆಯ ನಂತರ ಹುಂಡಿ ಹಣದ ಎಣಿಕೆ ಕಾರ್ಯ ಮಾಡಲಾಗುತ್ತದೆ.






ಮೊದಲು ಹೊರಮಠ
ದೇವಾಲಯದಲ್ಲಿ ಮುಜರಾಯಿ ಹಾಗೂ ಕಂದಾಯ ಇಲಾಖೆಯ ತಹಶೀಲ್ದಾರ್ ಹಾಗೂ ದೇವಾಲಯ ಕಾರ್ಯ ನಿರ್ವಹಣಾಧಿಕಾರಿ ನೇತೃತ್ವದಲ್ಲಿ ಬೆಳಿಗ್ಗೆ 10 ಗಂಟೆಗೆ ಶುರುವಾದ ಎಣಿಕೆ ಕಾರ್ಯ ಮಧ್ಯಾಹ್ನ 12 ಗಂಟೆಗೆ ಮುಕ್ತಾಯವಾಯಿತು.ನಂತರ ಒಳಮಠದಲ್ಲಿ ಆರಂಭವಾದ ಎಣಿಕೆ ಕಾರ್ಯ ಸಂಜೆ 5 ಗಂಟೆಗೆ ಮುಕ್ತಾಯವಾಯಿತು.
ಹೊರಮಠದಲ್ಲಿ 8,33,510, ಒಳಮಠದಲ್ಲಿ 26,71,990 ಹಾಗೂ ದಾಸೋಹದಲ್ಲಿ 8,93,990 ಸಂಗ್ರಹವಾಗಿದೆ. ಒಟ್ಟಾರೆಯಾಗಿ ಈ ವರ್ಷದ ಜಾತ್ರೆಗೆ ಮೊದಲು 43,99,490 ಹಣ ಸಂಗ್ರಹವಾಗಿದೆ. ಸಂಗ್ರಹವಾದ ಹಣವನ್ನು
ದೇವಾಲಯದ ಕೆನರಾ ಬ್ಯಾಂಕ್ ಖಾತೆಗೆ ಜಮಾ ಮಾಡಲಾಯಿತು. ಇನ್ನಿತರೆ ಬೆಳ್ಳಿ ವಸ್ತುಗಳನ್ನು ಕಂದಾಯ ಇಲಾಖೆಗೆ ಒಪ್ಪಿಸಲಾಯಿತು. ಎಂದು ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕಾರ್ಯ ನಿರ್ವಹಣಾಧಿಕಾರಿ ಎಚ್.ಗಂಗಾಧರಪ್ಪ, ಮುಜುರಾಯಿ ಅಧಿಕಾರಿ ಸದಾಶಿವಪ್ಪ, ಉಪತಹ- ಶೀಲ್ದಾರ್ ಬಿ.ಶಕುಂತಲಾ, ಕಂದಾಯ ನಿರೀಕ್ಷಕ ಚೇತನ್‌ಕುಮಾರ್, ಕಂದಾಯ ಇಲಾಖೆ ಸಿಬ್ಬಂದಿ ಜಗದೀಶ್, ರವಿ ,ಶಂಕರ್, ಪುಷ್ಪಲತಾ, ಗ್ರಾಮ ಸಹಾಯಕರಾದ ಚನ್ನಬಸಪ್ಪ, ತಿಪ್ಪೇಸ್ವಾಮಿ, ಹರೀಶ್ ,ಕುಮಾರ್, ನಾಗರಾಜ್, ಕುದಾಪುರ ಓಬಣ್ಣ ,ಕೆನರಾಬ್ಯಾಂಕ್ ವ್ಯವಸ್ಥಾಪಕ ರತನ್ ಕುಮಾರ್ , ಸಿಬ್ಬಂದಿ ವಿರೂಪಾಕ್ಷಪ್ಪ, ಲತಾ, ಎಂ. ಬಿ. ಮಹಾಸ್ವಾಮಿ, ವೆಂಕಟೇಶ್, ಬಿ.ಓಬಳೇಶ್, ಕೆ. ಬಿ. ಪುರಂದರ್, ದೇವಾಲಯ ಸಿಬ್ಬಂದಿ ಎಸ್.ಸತೀಶ್, ಮನು, ಪ್ರಕಾಶ್,ಶಿವಣ್ಣ, ಶಂಕರ್, ಶಿವರಾಜ್,, ಮಂಜುನಾಥ, ರುದ್ರೇಶ್, ಗುರುಸ್ವಾಮಿ, ಮಹಾದೇವ ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.