.
ನಾಯಕನಹಟ್ಟಿ: ಪಟ್ಟಣದ ಸಮೀಪದಲ್ಲಿರುವ ಚಿಕ್ಕಕೆರೆ ನೀರು ನಾಲೆಗಳ ಮೂಲಕ ವ್ಯರ್ಥವಾಗಿ ಹೋಗುತ್ತಿರುವುದರಿಂದ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ ವಾಸುದೇವ ಮೇಟಿ ಬಣದ ಹೋಬಳಿ ಅಧ್ಯಕ್ಷ ಡಾ. ನಾಗರಾಜ್ ಮೀಸೆ ಆಕ್ರೋಶ ವ್ಯಕ್ತಪಡಿಸಿದರು.
ನಂತರ ಮಾತನಾಡಿದ ಅವರು ಸುಮಾರು 25 ವರ್ಷಗಳಿಂದ ಕೆರೆ ಬರ್ತೀಯಾಗಿದ್ದಿಲ್ಲ. ಇತ್ತೀಚಿನ ದಿನಗಳಲ್ಲಿ ದೇವರ ಕೃಪೆಯಿಂದ ಉತ್ತಮ ಮಳೆಯಾಗಿ ಸುತ್ತಮುತ್ತಲ ಕೆರೆಗಳು ಭರ್ತಿಯಾಗಿದ್ದವು. ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೆ ಏನು ಪ್ರಯೋಜನವಾಗಿಲ್ಲ. ಮೊದಲು ಮಣ್ಣನ್ನು ಹಾಕಿ ನೀರು ನಿಲ್ಲಿಸುವ ಕೆಲಸ ಮಾಡಿದರು. ಆನಂತರ ಎಂ ಸ್ಯಾಂಡ್ ಹಾಕಿದರು ಆದರೂ ನಾಲೆಯಲ್ಲಿ ನೀರು ವ್ಯರ್ಥವಾಗಿ ಹೋಗುತ್ತಿದೆ. ಸರಿ ಸುಮಾರು 5 ರಿಂದ 6 ಅಡಿಗಳಷ್ಟು ನೀರು ಹರಿದು ಹೋಗಿದೆ. ನಾವುಗಳು ಕೆರೆ ಬರ್ತಿ ಮಾಡಲು ಸಾಧ್ಯವೇ? ಅಧಿಕಾರಿಗಳು ಕೆರೆ ಭರ್ತಿ ಮಾಡಲು ಸಾಧ್ಯವೇ? ಇರುವ ನೀರನ್ನು ಉಳಿಸಿಕೊಳ್ಳುವ ಕೆಲಸವಾಗಬೇಕಿದೆ. ಬೇಸಿಗೆ ಪ್ರಾರಂಭವಾಗಿರುವುದರಿಂದ ನಾವುಗಳು ಕುಡಿಯುವ ನೀರು, ದನ ಕರುಗಳಿಗೆ ಹಾಗೂ ರೈತರಿಗೆ ಅಭಾವವಾಗುತ್ತದೆ. ಆದ್ದರಿಂದ ತಾಲೂಕ ಆಡಳಿತ, ಜಿಲ್ಲಾಡಳಿತ, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಶೀಘ್ರವಾಗಿ ನೀರು ವ್ಯರ್ಥವಾಗದ ರೀತಿ ಕ್ರಮ ವಹಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಹೋಬಳಿ ಸಂಘಟನಾ ಕಾರ್ಯದರ್ಶಿ ಎಮ್ ಶಿವಮೂರ್ತಿ, ನಗರ ಘಟಕ ಉಪಾಧ್ಯಕ್ಷ ಸಿ ಎಸ್ ರಾಘವೇಂದ್ರ, ಹೋಬಳಿ ಕಾರ್ಯದರ್ಶಿ ಕೆ ಎಂ ಮಂಜುನಾಥ್ ಹಾಜರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.