ಚಳ್ಳಕೆರೆ ತಾಲೂಕಿನ ಸಾಣೀಕೆರೆ ಗ್ರಾಮದ ವೇದ ಶಿಕ್ಷಣ ಪದವಿ ಪೂರ್ವ ಕಾಲೇಜಿನಲ್ಲಿ ಗಣಿತ ಉಪನ್ಯಾಸಕರಾಗಿ ಸೇವೆಯಲ್ಲಿದ್ದ ಕೆ.ಜೆ. ಶಿವು, ಮಂಗಳವಾರ ಕೌಟುಂಬಿಕ ಸಮಸ್ಯೆಯಿಂದ ಕಾಲೇಜು ತೊರೆದು ತನ್ನೂರಿಗೆ ಹೋಗುವ ಸಮಯದಲ್ಲಿ ನೂರಾರು ವಿದ್ಯಾರ್ಥಿಗಳು ಕಣ್ಣೀರು ಹಾಕುತ್ತಾ, ಮತ್ತೆ ನಮ್ಮ ಕಾಲೇಜಿಗೆ ಪಾಠ ಮಾಡಲು ಬರಬೇಕು ಎಂದು ಬೇಡಿಕೊಳ್ಳುತ್ತಿದ್ದ ವಿದ್ಯಾರ್ಥಿಗಳ ಪ್ರೀತಿ ಮನಮಿಡಿಯುವಂತಿತ್ತು. ಇತ್ತೀಚಿನ ದಿನಗಳಲ್ಲಿ ಗುರು ಶಿಷ್ಯರ ಸಂಬAಧ ವ್ಯತಿರಿಕ್ತವಾಗಿ ಬದಲಾಗುತ್ತಿರುವ ಸಮಾಜದಲ್ಲಿ ಉಪನ್ಯಾಸಕ ಕೆ.ಜೆ. ಶಿವು ವಿದ್ಯಾರ್ಥಿಗಳಿಗೆ ತೋರಿಸಿರುವ ಪ್ರೀತಿ, ಪರಿಣಾಮಕಾರಿ ಪಾಠ ಬೋಧನೆಯಿಂದ ವಿದ್ಯಾರ್ಥಿಗಳು ತಮ್ಮ ಗುರುವನ್ನು ಊರಿಗೆ ಬಿಟ್ಟುಕೊಡದ ರೀತಿ ಸಾಲಾಗಿ ಅಡ್ಡಗಟ್ಟಿಕೊಂಡು ಕಣ್ಣೀರು ಹಾಕಿದ ಪ್ರಸಂಗ ನಡೆಯಿತು.
ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದ ಉಪನ್ಯಾಸಕ ಶಿವು, ಇದ್ಯಾವುದೂ ಬದುಕಿನಲ್ಲಿ ಮುಖ್ಯ ಅನಿಸುವುದಿಲ್ಲ. ನಾನು ಹೇಳಿಕೊಟ್ಟಿರುವ ಪಾಠವನ್ನು ಮತ್ತು ಅಧ್ಯಯನ ಮಾಡಬೇಕಾಗಿರುವ ವಿಧಾನವನ್ನು ಅನುಸರಣೆ ಮಾಡಬೇಕು. ನಿಮ್ಮ ಶಿಕ್ಷಣ ಪ್ರಗತಿಯಲ್ಲಿ ನಮ್ಮ ಸಂಬAಧ ಅನುಸಂಧಾನವಾಗಬೇಕು. ಸ್ಪರ್ಧಾ ಸಮಾಜದಲ್ಲಿ ಸಾಧನೆ ಮಾಡುವ ಗುರಿ ಇರಿಸಿಕೊಳ್ಳಬೇಕು. ಬಯಲುಸೀಮೆಯ ವಿದ್ಯಾರ್ಥಿಗಳಲ್ಲಿ ಕಲಿಯುವ ಆಸಕ್ತಿ ಇದೆ. ಗುರುಗಳು ಹೇಳಿದ ರೀತಿ ನಡೆದುಕೊಳ್ಳುವ ಗುಣ ಇದೆ. ಇಲ್ಲಿನ ಮಕ್ಕಳ ಜತೆ ಇನ್ನಷ್ಟು ವರ್ಷಗಳ ಕಾಲ ಭೋಧನೆ ಮಾಡಿಕೊಂಡು ಇರುವ ಆಸೆ ಇತ್ತು. ಆದರೆ, ತಾಯಿಯ ಅನಾರೋಗ್ಯ ಸಮಸ್ಯೆಯಿಂದ ತನ್ನೂರಿಗೆ ಹೋಗುತ್ತಿದ್ದೇನೆ ಎಂದು ಮಮ್ಮಲ ಮನಸ್ಸಿನಿಂದ ಹೇಳಿಕೊಂಡರು.
ವಿದ್ಯಾಸಂಸ್ಥೆ ಅಧ್ಯಕ್ಷ ಡಿ.ಟಿ. ರವೀಂದ್ರ, ಕಾರ್ಯದರ್ಶಿ ಡಿ.ಆರ್. ಕಿರಣ್, ಪ್ರಧಾನ ವ್ಯವಸ್ಥಾಪಕ ಆರ್. ವಿಜಯ್, ಪ್ರಾಂಶುಪಾಲೆ ಪುಷ್ಪರಾಣಿ ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.