ಚಳ್ಳಕೆರೆ ಮಾ4
ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಯ ನಿರ್ಲಕ್ಷ್ಯ ಬಹುತೇಕ ಸಂದರ್ಭಗಳಲ್ಲಿ ಸರ್ಕಾರಿ ಆಸ್ತಿಗಳ ದುರುಪಯೋಗಕ್ಕೆ ಕಾರಣವಾಗಿದೆ.
ಹೌದು ಇದು ಚಳ್ಳಕೆರೆ ನಗರದ ಸಂತೇ ಮೈದಾನದಲ್ಲಿರುವ ಫಸಲಿಗೆ ಬಂದ ಹುಣಿಸೆ ಮರಗಳನ್ನು ಬಹಿರಂಗ ಹಾರಜು ಮಾಡಿ ಸರಕಾರ ಖಾಜಾನೆ ತುಂಬಿಸಬೇಕು ಅದು ಬಿಟ್ಟು ನಗರದ ಹೃದಯ ಭಾಗ .ಜನನಿದಟ್ಟಣೆ ಪದೇಶದ
ಈ ಜಾಗದಲ್ಲಿ ನಗರಸಭೆ ಅಧಿಕಾರಿಗಳು ಸಿಬ್ಬಂದಿಗಳು ಓಡಾಡುವ ಪ್ರದೇಶದಲ್ಲಿರುವ ಹುಣಿಸೆ ಮರಗಳಲ್ಲಿ ಹಾಡು ಹಗಲೇ ಬೇರೆಯವರು ಮರ ಹತ್ತಿ ಹುಣಿಸೆ ಹಣ್ಣು ಬಡಿದುಕೊಂಡು ಹೋಗುವ ದೃಶ್ಯ ನೋಡಿದ ನಗರಸಭೆ ನಾಮನಿರ್ದೇಶನ ಸದಸ್ಯ ನೇತಾಜಿ ಪ್ರಸನ್ನ ನಗರಸಭೆ ಅಧಿಕಾರಿಗಳ ಗಮನಸೆಳೆದರೂ ಹುಣಿಸೆ ಮರ ಬಡಿದು ಹಣ್ಣು ಹೊತ್ತಯ್ದವರ ಮೇಲೆ ಯಾವುದೇ ಕ್ರಮ ಜರುಗಿಸಿಲ್ಲ ಇರುವ ಹುಣಿಸೆ ಹಣ್ಣಿನ ಮರಗಳ ಹರಾಜು ಮಾಡಲು ಮುಂದಾಗದೆ ಇರುವುದು ಬೇರೆಯವರಿಗೆ ವರದಾನವಾಗಿದ್ದು ದುಬಾರಿ ಬೆಲೆಯ ಹುಣಿಸೆ ಹಣ್ಣಿನ ಅಧಾಯ ನಗರದಭೆ ಕಚೇರಿಯ ಖಜಾನೆ ಸೇರುವ ಬದಲು ಕಳ್ಳಕಾಕರ ಜೇಬು ಸೇರುತ್ತಿದೆ.
ಈಗಲಾದರೂ ಸಂಬಂಧ ಪಟ್ಟ ಅಧಿಕಾರಿಗಳು ನಗರಸಭೆಗೆ ಸೇರಿದ ಸಂತೇ ಮೈದಾನದಲ್ಲಿರುವ ಹುಣಿಸೆ ಮರಗಳ ಬಗ್ಗೆ ಗಮನಹರಿಸುವರೇ ಕಾದು ನೋಡ ಬೇಕಿದೆ.




About The Author
Discover more from JANADHWANI NEWS
Subscribe to get the latest posts sent to your email.