December 14, 2025
IMG-20250303-WA0221.jpg

ವರದಿ: ಕೆ.ಟಿ.ಮೋಹನ್ ಕುಮಾರ್

ಸಾಲಿಗ್ರಾಮ (ಮೈಸೂರು ಜಿಲ್ಲೆ): ದೇವತಾ ಕಾರ್ಯಕ್ರಮಗಳಲ್ಲಿ ಸರ್ವರೂ ಶ್ರದ್ಧಾಭಕ್ತಿಯಿಂದ ಪಾಲ್ಗೊಳ್ಳಬೇಕು ಎಂದು ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ ಹೇಳಿದರು.

ಅವರು ತಾಲೂಕಿನ ಬಳ್ಳೂರು ಗ್ರಾಮದಲ್ಲಿ ಶ್ರೀ ಕಲ್ಲೇಶ್ವರಸ್ವಾಮಿ ಹಾಗೂ ಶ್ರೀ ನಂದೀಶ್ವರ ದೇವರ ನೂತನ ಶೀಲಾಮೂರ್ತಿಗಳ ಅಷ್ಟಬಂಧ ಪ್ರತಿಷ್ಠಾಪನ ಮಹೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ಪ್ರತಿಯೊಬ್ಬರೂ ನೆಮ್ಮದಿ, ಶಾಂತಿ, ಪರಸ್ಪರ ಪ್ರೀತಿ ಹಾಗೂ ಸಹ ಬಾಳ್ವೆಯೊಂದಿಗೆ ಜೀವನ ನಡೆಸಲು ದೇವತಾ ಕಾರ್ಯಗಳು ಪ್ರಮುಖ ಕಾರಣವಾಗಿವೆ ಎಂದರು.

ಗ್ರಾಮೀಣ ಪ್ರದೇಶಗಳಲ್ಲಿ ದೇವಾಲಯಗಳನ್ನು ನಿರ್ಮಾಣ ಮಾಡುವ ಕಾರ್ಯಕ್ಕೆ ಸಂಪೂರ್ಣವಾಗಿ ತೊಡಗಿಸಿಕೊಂಡು ಉದಾರವಾಗಿ ಕೊಡುಗೆಯನ್ನು ನೀಡಿರುವ ಶ್ರೀ ಕಲ್ಲೇಶ್ವರ ದೇವಸ್ಥಾನದ ಕುಟುಂಬ ಪರಿವಾರದವರ ಕಾರ್ಯ ಇತರರಿಗೆ ಮಾದರಿಯಾಗಿದೆ ಎಂದರು.

ಗ್ರಾಮದಲ್ಲಿನ ಸಮಸ್ಯೆಗಳನ್ನು ಪರಿಹರಿಸಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಹಾಗೂ ಸಾರ್ವಜನಿಕರ ಸೇವೆಗೆ ಸದಾ ಶ್ರಮಿಸಲಾಗುವುದು ಎಂದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಅರೆ ಮಾದನಹಳ್ಳಿಯ ಶ್ರೀ ವಿಶ್ವಕರ್ಮ ಮಹಾಸಂಸ್ಥಾನ ಮಠದ ಅನಂತ ಶ್ರೀ ವಿಭೂಷಿತ ಶಿವ ಸುಜ್ಞಾನ ತೀರ್ಥ ಮಹಾಸ್ವಾಮಿಗಳವರು ಮಾತನಾಡಿ ದೇವಸ್ಥಾನಗಳನ್ನು ನಿರ್ಮಾಣ ಮಾಡುವುದು ಎಷ್ಟು ಮುಖ್ಯವೋ ಆ ದೇವಾಲಯದಲ್ಲಿ ನಿತ್ಯ ಪೂಜಾ ಕಾರ್ಯಗಳನ್ನು ನಡೆಸುವುದು ಅದಕ್ಕಿಂತ ಮುಖ್ಯ ಎಂದರು. ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಒಳ್ಳೆಯ ನಡವಳಿಕೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಎಲ್ಲರೊಂದಿಗೂ ಉತ್ತಮ ಬಾಂಧವ್ಯದೊಂದಿಗೆ ಬದುಕನ್ನು ನಡೆಸಬೇಕು ಆಗ ಸರ್ವರಲ್ಲೂ ನೆಮ್ಮದಿಯನ್ನು ಕಾಣಬಹುದಾಗಿದೆ ಎಂದರು. ಒಳ್ಳೆಯ ಕೆಲಸಗಳನ್ನು ಮಾಡುವವರಿಗೆ ದೈವಬಲವು ಸದಾ ಇರುತ್ತದೆ. ಗ್ರಾಮಗಳಲ್ಲಿ ದೇವತಾ ಕಾರ್ಯಗಳನ್ನು ಮಾಡುವ ಮೂಲಕ ಎಲ್ಲರೂ ಪ್ರೀತಿ ಮತ್ತು ನೆಮ್ಮದಿಯಿಂದ ಜೀವನವನ್ನು ನಡೆಸಬೇಕು ಎಂದರು.

ಕಾರ್ಯಕ್ರಮದ ಅಂಗವಾಗಿ ದೇವಾಲಯದಲ್ಲಿ ಯಾಗ ಶಾಲಾ ಪ್ರವೇಶ, ಶ್ರೀ ಮಹಾಗಣಪತಿ ಪೂಜೆ, ಮೃತ್ಯುಂಜಯ ಹೋಮ, ನವಗ್ರಹ ಹೋಮ, ಆರಾಧನೆ, ಪ್ರಧಾನ ಕಳಸ ಸ್ಥಾಪನೆ, ಅಗ್ನಿಪೂಜೆ, ಪ್ರಾಣ ಪ್ರತಿಷ್ಠಾಪನೆ, ದರ್ಪಣ ದರ್ಶನ, ಕಳಸಾರೋಣ, ಕುಂಭಾಭಿಷೇಕ, ಪಂಚಾಮೃತ ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕಾರ್ಯಗಳನ್ನು ಮೈಸೂರಿನ ಶ್ರೀ ವ್ಯಾಘ್ರಶಿಲಾ ದಯಾನಂದ ಶರ್ಮ ಮತ್ತು ಸಂಗಡಿಗರ ಪೌರೋಹಿತ್ಯದಲ್ಲಿ ನೆರವೇರಿಸಿ ಮಹಾ ಮಂಗಳಾರತಿ ಮಾಡಿ ನಂತರ ಪ್ರಸಾದ ವಿನಿಯೋಗ ಮಾಡಲಾಯಿತು.

ಸಮಾರಂಭದಲ್ಲಿ ದಾನಿಗಳಾದ ಪಾರ್ವತಮ್ಮ ಪುಟ್ಟಸ್ವಾಮಚಾರ್, ಡಿ.ಪಿ.ರಾಜಾಚಾರ್ಯ,
ಎನ್.ಆರ್.ಲಕ್ಷ್ಮಿ, ಡಿ.ಪಿ.ಸ್ವಾಮಿ, ಡಿ.ಪಿ.ಲೋಕೇಶ್, ಮಂಜೇಶ್, ಗಾಯತ್ರಿ ಹಾಗೂ ಕುಟುಂಬ ವರ್ಗದವರು, ತಾ.ಪಂ. ಮಾಜಿ ಅಧ್ಯಕ್ಷ ಸಣ್ಣಪ್ಪ, ಗ್ರಾ.ಪಂ. ಉಪಾಧ್ಯಕ್ಷೆ ಪುಷ್ಪಹರೀಶ್, ಸದಸ್ಯರಾದ ಭಾರತಿ ಮಹದೇವ್, ಸುಂದ್ರಮ್ಮಸೋಮಣ್ಣಚಾರ್, ಹುಚ್ಚೇಗೌಡ, ತಾಲೂಕು ಸರ್ಕಾರಿ ನೌಕರರ ಸಂಘದ ನಿರ್ದೇಶಕ ರಘು, ಮುಖಂಡರುಗಳಾದ ಪ್ರಭಾಕರ್, ಸೋಮಣ್ಣಾಚಾರ್, ಪ್ರಸನ್ನ ಚಾರ್, ಪ್ರತಾಪಚಾರ್, ರಾಜಾಚಾರ್, ಪ್ರಕಾಶಚಾರ್, ಜಯೇಂದ್ರಚಾರ್, ಮಹಿಳೆಯರು, ಮುಖಂಡರು, ಜನಪ್ರತಿನಿಧಿಗಳು ಸೇರಿದಂತೆ ಹಲವರು ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading