December 14, 2025
IMG-20250303-WA0163.jpg

” ಚಳ್ಳಕೆರೆ:-ನಗರದ ಬೆಂಗಳೂರು ರಸ್ತೆಯ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಭಗವಾನ್ ಶ್ರೀರಾಮಕೃಷ್ಣರ 190ನೇ ಜಯಂತ್ಯುತ್ಸವದ ಪ್ರಯುಕ್ತ ಬೆಂಗಳೂರಿನ ಶ್ರೀಮತಿ ಜಯಂತಿ ಸುರೇಶ್ ನೇತೃತ್ವದ ಕ್ಷೇಮಂಕರಿ ಸತ್ಸಂಗ ಕೇಂದ್ರದ ಸದಸ್ಯರು ವಿಶೇಷ ಭಜನಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು.ಈ ಭಜನಾ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ ಅವರು ರಾಷ್ಟ್ರಕವಿ ಕುವೆಂಪು ಹೇಳಿದಂತೆ ಶ್ರೀರಾಮಕೃಷ್ಣ ಪರಮಹಂಸರು ಈ ಯುಗಕ್ಕೆ ಬೇಕಾದ ಧರ್ಮ ಸಮನ್ವಯ ದೃಷ್ಟಿಯನ್ನು ನೀಡಿ ಮತಭೇದದ ವಿಷವನ್ನು ಹೋಗಲಾಡಿಸಿ ಸಮ ಸಮಾಜವನ್ನು ನಿರ್ಮಿಸುವ ಪ್ರಯತ್ನ ಮಾಡಿದರು ಎಂದು ತಿಳಿಸಿದರು. ಜಗದ್ವಿಖ್ಯಾತ ಸ್ವಾಮಿ ವಿವೇಕಾನಂದರಂತಹ ಸಮರ್ಥ ಶಿಷ್ಯನನ್ನು ರೂಪಿಸುವಲ್ಲಿ ಶ್ರೀರಾಮಕೃಷ್ಣ ಪರಮಹಂಸರ ಕೊಡುಗೆ ಮಹತ್ವದ್ದಾಗಿದ್ದು ಅದನ್ನು ನಾವೆಲ್ಲರೂ ಸ್ಮರಿಸಬೇಕಾದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.ಈ ಸಂದರ್ಭದಲ್ಲಿ ಶ್ರೀರಾಮಕೃಷ್ಣರ ಸಂದೇಶಗಳನ್ನು ಒಳಗೊಂಡಿರುವ ಅನೇಕ ದೃಷ್ಟಾಂತ ಕಥೆಗಳನ್ನು ಹೇಳಿದರು.ಈ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಬೆಂಗಳೂರಿನ ಕ್ಷೇಮಕರಿ ಸತ್ಸಂಗ ಕೇಂದ್ರದ ಸದಸ್ಯರಾದ ಪದ್ಮ ಆನಂದ,ನಳಿನಿ, ಭಾಗ್ಯಲಕ್ಷ್ಮೀ,ಸುಮ, ಸವಿತ,ಕಲಾವತಿ, ನಾಗವೇಣಿ,ಸುಭಾಗ್ಯ, ಪ್ರಭಾವತಿ, ಕೃಷ್ಣಮೂರ್ತಿ, ಪದ್ಮಾವತಿ, ಚಿನ್ಮಯ,ಆಶಾ, ವಿನೋದಮ್ಮ,ರಾಧಾ, ಪುಷ್ಪ,ಕಮಲ, ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ವನಜಾಕ್ಷಿ, ಯಶೋಧಾ ಪ್ರಕಾಶ್,ಸುಮನ ಕೊಟೇಶ್ವರ, ಕಲ್ಪನ ಮಧುಸೂದನ್, ಎಸ್,ಎಚ್,ಸಯ್ಯದ್, ಯತೀಶ್ ಎಂ ಸಿದ್ದಾಪುರ, ಹೂವಿನ ಲಕ್ಷ್ಮೀದೇವಮ್ಮ, ಮಹಾದೇವಿ, ತಿಪ್ಪೇಸ್ವಾಮಿ, ವೆಂಕಟೇಶ್, ಸಂತೋಷ್, ಚೇತನ್, ಮಾನ್ಯ, ರವಿಚಂದ್ರ,ಶಾರದಾ ಶ್ರೀನಿವಾಸ್ , ಮಾಣಿಕ್ಯ ಸತ್ಯನಾರಾಯಣ,ಸೇರಿದಂತೆ ಸದ್ಭಕ್ತರು ಭಾಗವಹಿಸಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading