ಚಳ್ಳಕೆರೆ:
ಸರ್ಕಾರಿ ಯೋಜನೆಗಳನ್ನು ಪಡೆದುಕೊಳ್ಳುವ ಫಲಾನುಭವಿಗಳು ಸರ್ಕಾರದ ಆದೇಶಗಳಂತೆ ಮನೆ ಮತ್ತು ಜಮೀನುಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಪಡೆದುಕೊಳ್ಳಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ. ರಾಜಣ್ಣ ಹೇಳಿದರು.
ಚಳ್ಳಕೆರೆ ತಾಲೂಕಿನ ಹಿರೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬುಕ್ಲೋರಹಳ್ಳಿ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶೇಷ ಗ್ರಾಮಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪೈಲಟ್ ಯೋಜನೆಯಡಿ ಗ್ರಾಮಗಳ ಸರ್ವೆ ಕಾರ್ಯ ನಡೆಯುತ್ತಿದೆ. ಪಂಚಾಯಿತಿ ವ್ಯಾಪ್ತಿಯ ಬುಕ್ಲೋರಹಳ್ಳಿ ಗ್ರಾಮ ಸರ್ವೆಗೆ ಆಯ್ಕೆ ಮಾಡಲಾಗಿದೆ. ಗ್ರಾಮದಲ್ಲಿ ನಡೆಯುವ ಸರ್ವೆ ಕಾರ್ಯಕ್ಕೆ ಸಾರ್ವಜನಿಕರು ಅಗತ್ಯ ದಾಖಲೆಗಳನ್ನು ನೀಡಬೇಕು. ಪ್ರತಿಯೊಂದು ಸರ್ಕಾರಿ ಯೋಜನೆಗಳಿಗೆ ಬೇಕಾಗುವ ದಾಖಲೆಗಳನ್ನು ಸರಿಪಡಿಸಿಕೊಳ್ಳುವ ಜಾಗೃತಿ ಜನರಲ್ಲಿ ಇರಬೇಕು ಎಂದು ಹೇಳಿದರು.
ಪಿಡಿಒ ಕೆ. ನರಸಿಂಹಪ್ಪ ಮಾತನಾಡಿ, ಬುಕ್ಲೋರಹಳ್ಳಿ ಗ್ರಾಮದಲ್ಲಿ 201 ಮನೆಗಳ ಖಾತೆ ಇದೆ. ಮಾರ್ಚ್ 4ರಿಂದ ಪೈಲಟ್ ಸರ್ವೆ ಕಾರ್ಯ ಆರಂಭವಾಗಲಿದೆ. ಪ್ರತಿ ಮನೆಯ ಖಾತೆದಾರರು ಆದಾರ್ ಕಾರ್ಡ್, ಮೊಬೈಲ್ ಸಂಖ್ಯೆ ಮತ್ತು ಖಾತೆ ದಾಖಲೆ ಕೊಡಬೇಕು. ಸರ್ವೆ ಕಾರ್ಯದಲ್ಲಿ ಪ್ರತಿ ಮನೆಗೆ ನೊಂದಾಣಿ ಸಂಖ್ಯೆ ನೀಡಲಾಗುವುದು. ಪೈಲಟ್ ಯೋಜನೆಯಡಿ ಮನೆಯ ವ್ಯಾಪ್ತಿಯ ಗ್ರಾಮಠಾಣಾ ಜಾಗವೇ ಅಥವಾ ಸರ್ಕಾರಿ ಜಾಗವೇ ಎನ್ನುವುದು ನಮೂದು ಮಾಡಲಾಗುತ್ತದೆ. ಗ್ರಾಮದಲ್ಲಿ ಮನೆಗಳ ಸಂಖ್ಯೆ, ಕುಡಿಯುವ ನೀರಿನ ಘಟಕ, ಶಾಲೆಯ ಸ್ಥಾಪನೆ ಸೇರಿದಂತೆ ಗ್ರಾಮದ ಒಟ್ಟಾರೆ ಚಿತ್ರಣವನ್ನು ವಿವರಿಸುವ ದಾಖಲೆ ನೀಡಲಾಗುತ್ತದೆ ಎಂದು ತಿಳಿಸಿದರು.
ಗ್ರಾಪಂ ಸದಸ್ಯ ಜಗದೀಶ, ಸರ್ವೆ ಇಲಾಖೆಯ ನಾಗರಾಜ, ಬಾಲಾಜಿ, ಸಿದ್ದೇಶ್ ಮತ್ತಿತರರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.