ನಾಯಕನಹಟ್ಟಿ: ಹೋಬಳಿಯ ಅಬ್ಬೇನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಗುಂತಕೋಲಮ್ಮನಹಳ್ಳಿ ಗ್ರಾಮದ ಶ್ರೀ ಕೊಲ್ಲಾಪುರಮ್ಮ ಮತ್ತು ಶ್ರೀ ದುರ್ಗಾಂಬಿಕ ದೇವಿಗೆ ಹೂವಿನ ಕಾಲುವೆಯಲ್ಲಿ ಗಂಗಾ ಪೂಜೆ ನೆರವೇರಿಸಿದರು.




ನಂತರ ಮಾತನಾಡಿದ ಅವರು ನಮ್ಮ ಬುಡಕಟ್ಟು ಸಂಸ್ಕೃತಿಯ ಆರಾಧ್ಯ ದೈವಿಗಳಾದ ಶ್ರೀ ಕೊಲ್ಲಾಪುರದಮ್ಮ ದೇವಿ, ದುರ್ಗಾಂಬಿಕ ದೇವಿಗಳ ಗಂಗಾ ಪೂಜೆಯನ್ನು ನಮ್ಮ ಪೂರ್ವಜರು ಅನಾದಿಕಾಲದಿಂದಲೂ ಮಾಡಿಕೊಂಡು ಬಂದಿದ್ದಾರೆ. ಅದೇ ರೀತಿ ನಾವುಗಳು ನಾಯಕನಹಟ್ಟಿಯ ಶ್ರೀ ಗುರು ತಿಪ್ಪೇರುದ್ರಸ್ವಾಮಿ ನಿರ್ಮಿಸಿದಂತಹ ಹಿರೇಕೆರೆ ಮತ್ತು ಚಿಕ್ಕಕೆರೆ ನೀರು ಹರಿಯುವ ಹೂವಿನ ಕಾಲುವೆಗೆ ಬಂದು ಗಂಗಾ ಪೂಜೆ ನೆರವೇರಿಸುವುದು ನಮ್ಮ ಹಿರಿಯರ ಸಂಪ್ರದಾಯ. ಅದೇ ರೀತಿ ನಮ್ಮ ಬುಡಕಟ್ಟು ಸಂಸ್ಕೃತಿಯ ಪ್ರಕಾರ ಇಂದು ಗುಂತಕೋಲಮ್ಮನಹಳ್ಳಿಯ ಸಮಸ್ತ ಗ್ರಾಮಸ್ಥರು, ಸಾವಿರಾರು ಭಕ್ತರ ಸಮ್ಮುಖದಲ್ಲಿ ಗಂಗಾ ಪೂಜೆ ನೆರವೇರಿಸಲಾಯಿತು. ಬುಡಕಟ್ಟು ಸಂಸ್ಕೃತಿಯಲ್ಲಿ ನಮ್ಮ ಚಿತ್ರದುರ್ಗ ಜಿಲ್ಲೆ , ವಿಶೇಷ ಸ್ಥಾನಮಾನವನ್ನು ಪಡೆದಿದೆ. ಬುಡಕಟ್ಟು ಸಂಸ್ಕೃತಿಯನ್ನು ನಮ್ಮ ಪೂರ್ವಜರು ನಡೆಸಿಕೊಂಡು ಬಂದಂತೆ, ಇಂದಿನ ಯುವ ಪೀಳಿಗೆ ನಮ್ಮ ಬುಡಕಟ್ಟು ಸಂಸ್ಕೃತಿಯನ್ನು ನಡೆಸಿಕೊಂಡು ಹೋಗಬೇಕೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಗೊಂಚಿಗಾರ್ ಪಾಲಯ್ಯ, ಮೀಸೆ ಓಬಣ್ಣ, ಚಂದ್ರಣ್ಣ, ಮದಕರಿ, ಎಂ ಪಾಲಯ್ಯ, ಹೊಸ ಕಪಿಲೆ ಬೋರಯ್ಯ, ಪೂಜಾರಿ ಗುಂಡಪ್ಪ, ಗುರುಮೂರ್ತಿ,
ಅಬ್ಬೇನಹಳ್ಳಿ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಶ್ರೀಮತಿ ಬಿ. ಅನಿತಮ್ಮ ಜಿ.ಎಂ. ಜಯಣ್ಣ, ಸದಸ್ಯರಾದ ಬಿ ಗುಂಡಪ್ಪ, ಸಿದ್ದಲಿಂಗಮ್ಮ ಗುಂಡಪ್ಪ, ಮಂಜುಮ್ಮ ದುರುಗೇಶ್, ಮಾಜಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಕೆ.ಟಿ. ಮಲ್ಲಿಕಾರ್ಜುನ, ಎನ್, ತಿಪ್ಪೇಸ್ವಾಮಿ, ದಾನಮ್ಮ ಬೂಟ್ ತಿಪ್ಪೇಸ್ವಾಮಿ, ನಾಗೇಂದ್ರಮ್ಮ ವೆಂಕಟೇಶ್,ಗಜ್ಜುಗಾನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಸಿದ್ದಲಿಂಗಪ್ಪ, ಬಿಲ್ ಕಲೆಕ್ಟರ್ ಎಸ್. ಶಿವತಿಪ್ಪೇಸ್ವಾಮಿ, ವಾಸಣ್ಣ, ವಿಷ್ಣು, ವಕೀಲ ಮಲ್ಲೇಶ್, ಗುತ್ತಿಗೆದಾರ ಕುಮಾರ್, ಸಮಸ್ತ ಗುಂತಕೋಲಮ್ಮನಹಳ್ಳಿ ಗ್ರಾಮಸ್ಥರು ಇದ್ದರು
About The Author
Discover more from JANADHWANI NEWS
Subscribe to get the latest posts sent to your email.