January 29, 2026
FB_IMG_1767518644152.jpg

ಹಿರಿಯೂರು:
ಅತ್ಯಂತ ಕ್ರೀಯಾಶೀಲ ವ್ಯಕ್ತಿತ್ವದೊಂದಿಗೆ ಸಮಾಜ ಸೇವೆಯ ತುಡಿತ ಹೊಂದಿರುವ ಬೇತೂರು ಪಾಳ್ಯ ಜೆ.ರಾಜು ಅವರು ಸಮಾಜ ಸೇವೆಗೆ ಮುಂದಾಗಿ ಬಡವರ ಕಣ್ಣೀರನ್ನು ಒರೆಸುವಂತ ಕಾರ್ಯವನ್ನು ಮಾಡಲಿ ಎಂಬುದಾಗಿ ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ.ಹನುಮಂತನಾಥ ಸ್ವಾಮೀಜಿಗಳು ಹೇಳಿದರು.

ನಗರದ ಹೊರಹೊಲಯದ ವೈಟ್ ವಾಲ್ ನಲ್ಲಿ ಗುರುವಾರ ರಾತ್ರಿ ಹಮ್ಮಿಕೊಳ್ಳಲಾಗಿದ್ದಅಭಿನಂದನಾ ಸಮಾರಂಭದ ದಿವ್ಯ ಸಾನಿಧ್ಯವನ್ನು ವಹಿಸಿ ಅವರು ಮಾತನಾಡಿದರು.
ಜೆ.ರಾಜು ಅವರು ಸರ್ಕಾರಿ ನೌಕರಿಯಿಂದ ಮಾತ್ರ ನಿವೃತ್ತರಾಗಿದ್ದಾರೆ. ಆದರೆ ಅವರು ಸಮಾಜ ಸೇವೆಯಿಂದ ನಿವೃತ್ತಿಯಾಗಿಲ್ಲ. ಅತಿಮುಖ್ಯವಾಗಿ ಉತ್ತಮ ಆರೋಗ್ಯ ಹೊಂದಿದ್ದಾರೆ. ಜನ ಸಮಾನ್ಯರನ್ನು ಪ್ರೀತಿಸುವ ಗುಣವಿದೆ. ಸೇವಾ ಮನೋಭಾವನೆಯಿದೆ ಎಂದರಲ್ಲದೆ,
ತಮ್ಮ ವೃತ್ತಿ ಜೀವನದಲ್ಲಿ ಅವರು ನೇರವಾಗಿ ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಅರಿತಿದ್ದಾರೆ. ಇಂಥವರು ರಾಜಕೀಯ ಕ್ಷೇತ್ರದತ್ತ ಮುಖಮಾಡಿದರೆ ಜನ ಸಾಮಾನ್ಯರಿಗೆ ನೇರವಾಗಿ ಸಹಾಯ ಮಾಡಲು ಸಾಧ್ಯವಾಗಿದೆ ಎಂಬುದಾಗಿ ಅವರು ಹೇಳಿದರು.
ಕಸವನಹಳ್ಳಿ ರಮೇಶ್ ಅವರು ಮಾತನಾಡಿ, ನಿವೃತ್ತಿ ಎಂಬುದು ಒಂದು ವೃತ್ತಿಯಿಂದ ವಿಶಾಲವಾದ ಪ್ರವೃತ್ತಿಯೆಡೆಗಿನ ಪಯಣ. ನೌಕರಿ ಎನ್ನುವ ಚೌಕಟ್ಟಿನ ಗೆರೆ ದಾಟಿ ಸೇವೆ ಎಂಬ ವಿಶಾಲ ಪ್ರಪಂಚದಲ್ಲಿ ಭಾಗವಹಿಸಲು ವಿಫಲ ಅವಕಾಶಗಳಿವೆ. ಜನರ ಮೂಲಭೂತ ಅವಶ್ಯಕತೆಗಳಾದ ನೀರು, ಆರೋಗ್ಯ, ಶಿಕ್ಷಣ, ರಸ್ತೆ ಇನ್ನಿತರ ಅನುಕೂಲಗಳನ್ನು ಮಾಡಿಕೊಟ್ಟರೆ ಇದಕ್ಕಿಂತ ದೊಡ್ಡ ಸೇವೆ ಬೇರೆ ಇಲ್ಲ ಎಂಬುದಾಗಿ ಅವರು ಹೇಳಿದರು.
ಬೇತೂರುಪಾಳ್ಯ ಡಾ.ಜೆ.ರಾಜು ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ, ನಾನು ಉಪನ್ಯಾಸಕನಾಗಿ, ಇಲಾಖೆಯ ಮುಖ್ಯಸ್ಥನಾಗಿ ಬಿ.ಬಿ.ಎಂ.ಪಿಯ ಉಪ ಆಯುಕ್ತನಾಗಿ ಕೆಲಸ ಮಾಡಿದ್ದು, ನನ್ನ ಸಂಪರ್ಕಕ್ಕೆ ಬಂದ ಬಹುತೇಕ ಜನರ ಸಮಸ್ಯೆಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ನನ್ನ ಪರಿಮಿತಿಯಲ್ಲಿ ಬಗೆಹರಿಸಿದ್ದೇನೆ ಎಂದರಲ್ಲದೆ,
ನೇರ ನುಡಿ, ದಿಟ್ಟತನದಿಂದ ಕೆಲಸ ಮಾಡಿ ನನಗೆ ಗೊತ್ತು. ಅವಕಾಶ ಇದ್ದಾಗ ನಾಲ್ಕು ಜನಕ್ಕೆ ಒಳ್ಳೆಯದು ಮಾಡೋಣ ಎನ್ನುವ ಉದ್ದೇಶದಿಂದ ಕೆಲಸ ಮಾಡಿದ್ದೇನೆ.ಅದರ ಪ್ರತಿಫಲವಾಗಿ ನನ್ನ ಸ್ನೇಹಿತರು ಹಿತೈಷಿಗಳು ಅಭಿಮಾನ ಸ್ನೇಹದಿಂದ ಬಂದಿದ್ದಾರೆ. ನಿಮಗೆಲ್ಲಾ ನನ್ನ ಕಡೆಯಿಂದ ಧನ್ಯವಾದಗಳು ಎಂಬುದಾಗಿ ಅವರು ಹೇಳಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಹರಿಯಬ್ಬೆ ಬಿ.ಎಸ್.ರಘುನಾಥ್, ಎರೆನಾಡು ರೈತ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಕೆ.ಟಿ.ರುದ್ರಮುನಿ, ರೈತ ಮುಖಂಡ ಹೆಚ್.ಆರ್.ತಿಮ್ಮಯ್ಯ, ಪ್ರೊ.ಮೈಸೂರ್ ಶಿವಣ್ಣ, ನಿವೃತ್ತ ಡಿ.ವೈ.ಎಸ್ಪಿ ಬಿ.ರಾಮಚಂದ್ರಪ್ಪ, ಪ್ರಾಂಶುಪಾಲರಾದ ವಸಂತ್ ಕುಮಾರ್ , ಕೆ.ಜಿ.ಹನುಮಂತರಾಯ, ಕುಬೇರಪ್ಪ, ನಿವೃತ್ತ ಪ್ರಾಂಶುಪಾಲರಾದ ರಾಜಶೇಖರ್, ಅರ್ಬನ್ ಬ್ಯಾಂಕ್ ಮಾಜಿ ಅಧ್ಯಕ್ಷರಾದ ಮಹಮ್ಮದ್ ರಫೀಕ್, ಮೈಕಲ್, ತಿಮ್ಮನಹಳ್ಳಿ ರಾಜು, ಬಬ್ಬೂರು ಕುಮಾರ್, ಕುಸುಮಾ, ವಾಣಿ ಮಹಾಲಿಂಗಪ್ಪ, ಭೈರೇಶ್ ಪಟೇಲ್, ಸುಧಾ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ವಿಜಯನಗರದ ತೋಟೇಶ್, ರಾಜ್ಯದ ನಾನಾ ಮೂಲಗಳಿಂದ ಬಂದಿದ್ದ ರಾಜು ಅವರ 500 ಕ್ಕೂ ಹೆಚ್ಚು ಸ್ನೇಹಿತರು, ಸರ್ಕಾರಿ ಅಧಿಕಾರಿಗಳು, ರೈತರು, ಮಹಿಳೆಯರು, ಸ್ನೇಹಿತರು, ಹಿತೈಷಿಗಳು ರಾಜು ಅವರಿಗೆ ಸನ್ಮಾನ ಮಾಡಿದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading