ನಾಯಕನಹಟ್ಟಿ :ಚಿತ್ರದುರ್ಗದ ಕೋಟೆ ನಾಡಿನ ಶಾಸಕ ಕೆ.ಸಿ. ವೀರೇಂfದ್ರ ಪಪ್ಪಿ ಮಧ್ಯ ಕರ್ನಾಟಕದ ಪವಾಡ ಪರುಷ ನಾಯಕನಹಟ್ಟಿಯ ಶ್ರೀಗುರು ತಿಪ್ಪೇರುದ್ರಸ್ವಾಮಿ ನೆಲೆಸಿರುವ ಪುಣ್ಯ ಕ್ಷೇತ್ರದ ದೇವರ ದರ್ಶನ ಪಡೆದು ನಾಯಕನಹಟ್ಟಿ ಸ್ಪೋರ್ಟ್ಸ್ ಕ್ಲಬ್ (ರಿ) ೨೦ ವರ್ಷದೊಳಗಿನ ರಾಜ್ಯಮಟ್ಟದ ಪುರುಷರ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಎನ್.ಕೆ.ಪಿ.ಎಲ್ ಸೀಸನ್ – ೨ ಕಾರ್ಯಕ್ರಮ ಉದ್ಘಾಟಿಸಿದರು





ಯುವಕರು ದುಶ್ಚಟಕ್ಕೆ ಬಲಿಯಾಗದಿರಿ, ತಾವುಗಳು ತಮ್ಮ ಆರೋಗ್ಯ ಕಾಪಾಡಿಕೊಳ್ಳುವ ಜೊತೆಗೆ ನಿಮ್ಮ ತಂದೆ-ತಾಯಿಯರನ್ನು ಚೆನ್ನಾಗಿ ನೋಡಿಕೊಳ್ಳಿ. ಅವರಿಗೆ ವಯಸ್ಸಾದ ಮೇಲೆ ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಚಿತ್ರದುರ್ಗದ ಶಾಸಕರಾದ ಕೆ.ಸಿ.ವೀರೇಂದ್ರಪಪ್ಪಿ ತಿಳಿಸಿದರು.
ಪಟ್ಟಣದ ಎಸ್.ಟಿ.ಎಸ್.ಆರ್. ಶಾಲಾ ಆವರಣದಲ್ಲಿ ಶುಕ್ರವಾರ ನಾಯಕನಹಟ್ಟಿ ಸ್ಪೋರ್ಟ್ಸ್ ಕ್ಲಬ್ (ರಿ) ೨೦ ವರ್ಷದೊಳಗಿನ ರಾಜ್ಯಮಟ್ಟದ ಪುರುಷರ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಎನ್.ಕೆ.ಪಿ.ಎಲ್ ಸೀಸನ್ – ೨ ಉದ್ಘಾಟಿಸಿ ಮಾತನಾಡಿದ ಅವರು ನಾಯಕನಹಟ್ಟಿಯು ನಮ್ಮ ತವರು ಮನೆಯಿದ್ದಂತೆ ಓಡಾಡುತ್ತಿರುವುದು ನಿಮ್ಮೆಲ್ಲರ ಸ್ನೇಹ ಪ್ರೀತಿ ಅಂದಿಗೂ ಇತ್ತು ನಮ್ಮ ಕುಟುಂಬದ ಮೇಲೆ ಎಂದೆAದಿಗೂ ಇರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು. ಇವತ್ತು ಇದೊಂದು ಸುಂದರವಾದ ಕಾರ್ಯಕ್ರಮ. ಒಂದು ಪಟ್ಟಣದಲ್ಲಿ ಇದೊಂದು ಮಾಡುತ್ತಿರುವುದು ಬಹಳ ಸಂತೋಷ ತರುವಂತದ್ದು ಇಷ್ಟೊಂದು ವ್ಯವಸ್ಥೆ ಮಾಡಿದ್ದಾರೆ ಎಂದರು. ಒಬ್ಬ ಆಟಗಾರನಿಗೆ ಒಂದು ಪಂದ್ಯವನ್ನು ಸೋತರೆ ಮತ್ತೊಂದು ಪಂದ್ಯ ಗೆಲ್ಲುತ್ತೇವೆ ಎಂಬ ಆತ್ಮ ವಿಶ್ವಾಸ ನಿಮ್ಮಲ್ಲಿರುತ್ತದೆ. ಜೀವನದಲ್ಲಿ ಕೂಡ ಹಾಗೆ ಆತ್ಮ ವಿಶ್ವಾಸವನ್ನು ನಾವು ಎಲ್ಲೇ ಸೋತರೂ ಕೂಡ ಮತ್ತೊಂದು ಸಾರಿ ನಾವು ಗೆಲ್ಲುತ್ತೇವೆಂಬ ಛಲ ಇರಬೇಕು.
ಕ್ರೀಡಾಪಟುಗಳು ಸೋಲು-ಗೆಲುವು ಸಹಜ ಪ್ರತಿಯೊಬ್ಬ ಆಟಗಾರರ ಜೀವನದಲ್ಲಿ ಬಹಳ ಸಾರಿ ಬರುತ್ತದೆ, ಹೋಗುತ್ತದೆ. ತಾವುಗಳು ತಮ್ಮ ಪ್ರಯತ್ನವನ್ನು ಬಿಡಬಾರದು, ಈ ಪಂದ್ಯ ಸೋತಿದ್ದೇವೆ ಮುಂದಿನ ಪಂದ್ಯವನ್ನು ಗೆಲ್ಲುತ್ತೇವೆ. ತಾವುಗಳು ಆತ್ಮ ವಿಶ್ವಾಸದೊಂದಿಗೆ ಆಟ ಆಡಬೇಕು ಪಟ್ಟಣದಲ್ಲಿ ಕಬಡ್ಡಿ ಕ್ರೀಡಾಪಟುಗಳು ರಾಷ್ಟçಮಟ್ಟಕ್ಕೆ ಹೋಗಿರುವುದು ಬಹಳ ಖುಷಿಯಾಗಿದೆ ಮುಂದಿನ ದಿನಗಳಲ್ಲಿ ತಾವುಗಳು ಯಾವುದೇ ರೀತಿಯ ಕೋಚಿಂಗ್ ಬೇಕು, ತಾವು ಯಾವುದೇ ರೀತಿಯ ನನ್ನಿಂದ ಬೆಂಬಲ ಕ್ರೀಡಾಪಟುಗಳಿಗೆ ಇರುತ್ತದೆ ಎಂದರು. ಮುಂದಿನ ದಿನಗಳಲ್ಲಿ ಮೊಳಕಾಲ್ಮೂರು ಶಾಸಕ ಎನ್.ವೈ.ಗೋಪಾಲಕೃಷ್ಣ ರವರೊಂದಿಗೆ ನಾನು ಕೂಡ ಇಬ್ಬರೂ ಒಟ್ಟಿಗೆ ಸೇರಿ ಇಲ್ಲಿ ಒಂದು ಕ್ರೀಡಾಂಗಣವನ್ನು ನಿರ್ಮಾಣ ಮಾಡುವಂತಹ ಕೆಲಸ ಆಗುತ್ತದೆ. ಕ್ರೀಡಾಂಗಣಕ್ಕೆ ಜಾಗ ಸಹ ಇದೆ. ನಮ್ಮ ಶಾಸಕರ ಸಹಕಾರ ಕೂಡ ಇರುತ್ತದೆ. ನಿಮ್ಮ ಮನೆಯ ಹುಡುಗ ಕೆ.ಸಿ.ವೀರೇಂದ್ರ ಪಪ್ಪಿ ಅಲ್ಪ ಕಾಣಿಕೆ ಇರುತ್ತದೆ ಎಂದು ಭರವಸೆ ನೀಡಿದರು.
ನನ್ನ ಮೇಲೆ ಅಪಾರವಾಗಿ ಇಟ್ಟಂತಹ ಪ್ರೀತಿಗೆ ಯುವಕರು ಮತ್ತು ಕ್ರೀಡಾಭಿಮಾನಿಗಳಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಶ್ರೀ ಗುರು ತಿಪ್ಪೇರುದ್ರಸ್ವಾಮಿ ಆಶೀರ್ವಾದ ನಾಯಕನಹಟ್ಟಿಗೆ ಮತ್ತು ನಮ್ಮ ಕುಟುಂಬಕ್ಕೆ ಎಂದೆAದಿಗೂ ಒಂದು ನಂಟು ಇರುತ್ತದೆ. ನಾಯಕನಹಟ್ಟಿಯಲ್ಲಿ ನಮ್ಮ ಕುಟುಂಬದ ಸೇವೆ ಬಹಳಷ್ಟು ಇದೆ ಎಂದು ಹೇಳಿದರು.
ನಿಕಟಪೂರ್ವ ತಹಶೀಲ್ದಾರ್ ಎನ್. ರಘುಮೂರ್ತಿ ಮಾತನಾಡಿ ಕಬಡ್ಡಿ ಪಂದ್ಯ ೪೦೦೦ ವರ್ಷಗಳ ಇತಿಹಾಸ ಇರುವ ಕ್ರೀಡೆ ದ್ವಾಪರ ಯುಗದ ಶ್ರೀ ಕೃಷ್ಣ ಮತ್ತು ಕ್ರಿಸ್ತಪೂರ್ವದ ಗೌತಮಬುದ್ದ ಈ ಕ್ರೀಡೆಗೆ ಮರುಹೋಗಿದ್ದರು. ಭಾರತ ಸತತವಾಗಿ ೩ ಬಾರಿ ವಿಶ್ವ ಚಾಂಪಿಯನ್ ಮತ್ತು ೮ ಏಷಿಯನ್ ಸ್ಪರ್ಧೆಗಳಲ್ಲಿ ಚಿನ್ನದ ಪದಕ ಪಡೆದು ವಿಶ್ವದಲ್ಲಿ ಈ ಕ್ರೀಡೆಯು ಮುಂಚೂಣಿಯಲ್ಲಿದೆ. ಭಾರತದ ಪರಂಪರೆ ಮತ್ತು ಗಂಡೆದೆಗೆ ಹೆಸರು ವಾಸಿಯಾದಂತಹ ಈ ಕ್ರೀಡೆ ನಮ್ಮ ಭಾರತೀಯ ಯುವಕರಿಗೂ ಅತ್ಯಂತಹ ಪ್ರಿಯವಾದ ಕ್ರೀಡೆ, ಸ್ಪರ್ಧಿಗಳು ತಾವು ಪ್ರತಿ ಸ್ಪರ್ಧಿಸುವ ಪಂದ್ಯಗಳಲ್ಲಿನ ವೈಫÀಲ್ಯಗಳನ್ನು ಮತ್ತು ಸೋಲುಗಳನ್ನು ಸಾಧನೆಯ ಸಾಲುಗಳನ್ನಾಗಿ ಮಾಡಿಕೊಂಡಾಗ ವೃತ್ತಿಗೆ ಮತ್ತು ಬದುಕಿಗೆ ಒಂದು ಅರ್ಥ ಬರುತ್ತದೆ. ಕ್ರೀಡೆಗಳಲ್ಲಿ ಸೋಲು-ಗೆಲುವು ಸಹಜ ಆದರೆ ಸೋಲಿಗೆ ಬೆನ್ನು ತೋರಿಸದೆ ಸವಾಲಾಗಿ ಸ್ವೀಕರಿಸಿದ್ದಲ್ಲಿ ಯಶಸ್ಸಿನ ಉನ್ನತ ಮಟ್ಟಕ್ಕೆ ಏರಬಹುದು. ಇಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಮುಂದಿನ ದಿನಗಳಲ್ಲಿ ಹೆಚ್ಚು-ಹೆಚ್ಚು ರಾಜ್ಯ, ದೇಶ ಮತ್ತು ಏಶಿಯನ್ ಕ್ರೀಡೆಗಳಲ್ಲಿ ಭಾಗವಹಿಸುವಂತಹ ಅವಕಾಶವನ್ನು ಪಡೆದುಕೊಳ್ಳಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಾದ ಪ.ಪಂ. ಅಧ್ಯಕ್ಷೆ ಟಿ. ಮಂಜುಳಶ್ರೀಕಾAತ್, ಉಪಾಧ್ಯಕ್ಷೆ ಸರ್ವಮಂಗಳಉಮಾಪತಿ, ಸದಸ್ಯರಾದ ಸೈಯದ್ ಅನ್ವರ್, ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಜೆ.ಆರ್.ರವಿಕುಮಾರ್, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಹೆಚ್.ಓ.ಶ್ವೇತ, ಎಂ.ವೈ.ಟಿ.ಸ್ವಾಮಿ ಎಸ್.ಟಿ.ಎಸ್.ಆರ್. ವಿದ್ಯಾಸಂಸ್ಥೆ ಕಾರ್ಯದರ್ಶಿ, ಕ.ಸಾ.ಪ. ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ ಮಾಜಿ ಪ.ಪಂ. ಸದಸ್ಯರಾದ ಮನ್ಸೂರ್, ಬೆವಿಕಂ ಶಾಖಾಧಿಕಾರಿ ಎನ್.ಬಿ.ಬೋರಯ್ಯ, ಆಯೋಜಕರಾದ ಹಫೀಜ್‌ಉರ್‌ರೆಹಮಾನ್, ತ್ರಿಶೂಲ್‌ಕುಮಾರ್, ಶಾಮಿಯಾನ ಗೋಪಿ, ಪಟೇಲ್‌ಜಿ.ಎಂ.ತಿಪ್ಪೇಸ್ವಾಮಿ, ಪೊಲೀಸ್ ಇಲಾಖೆಯವರು, ಸಿಬ್ಬಂದಿ ವರ್ಗದವರು ತಂಡಗಳ ಮಾಲೀಕರು, ಮಾಜಿ ಗ್ರಾ.ಪಂ.ಸದಸ್ಯ ಆರ್.ಶ್ರೀಕಾಂತ್, ಹಿರಿಯ ಪತ್ರಕರ್ತ ಬಸವರಾಜ್, ಕ್ರೀಡಾಪಟುಗಳು, ಕ್ರೀಡಾಭಿಮಾನಿಗಳು ಭಾಗವಹಿಸಿದ್ದರು.
About The Author
Discover more from JANADHWANI NEWS
Subscribe to get the latest posts sent to your email.