ವರದಿ ನಾಗತಿಹಳ್ಳಿಮಂಜುನಾಥ್
ಹೊಸದುರ್ಗ : ಕಡ್ಡಾಯ ಶಿಕ್ಷಣ, ಆರೋಗ್ಯ, ಉದ್ಯೋಗ, ಮಾಹಿತಿ ಹಕ್ಕು ಕಾಯ್ದೆ ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ರೂಪಿಸಿ, ಬಡವರ ಏಳಿಗೆಗಾಗಿ ಶ್ರಮಿಸಿದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಸದಾ ನೆನೆಯಬೇಕು ಎಂದು ಶಾಸಕ ಬಿ.ಜಿ. ಗೋವಿಂದಪ್ಪ ಹೇಳಿದರು.ಹೆಜ್ಜೆ ಸಾಲು ಒಂದು ಸಾಂಸ್ಕೃತಿಕ ವೇದಿಕೆ ವತಿಯಿಂದ ಳ ಪಟ್ಟಣದ ದುರ್ಗಾಂಭಿಕ ದೇವಿ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ 'ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಗೆ ನುಡಿನಮನ, ಚಿಂತನಾ ಮಂಥನ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ವಿಶ್ವ ಆರ್ಥಿಕ ಸಂಕಷ್ಟ ಎದುರಿಸುತ್ತಿರುವಾಗ ಅಂದು ಮನಮೋಹನ್ ಸಿಂಗ್ ಅವರ ಸಲಹೆ ಪಡೆದಿದ್ದು, ದೇಶದ ಹೆಮ್ಮೆ. ಅವರು ಈ ದೇಶದಲ್ಲಿ ಉತ್ತಮ ಆಡಳಿತ ನಡೆಸಿದ್ದಾರೆ. ದೇಶಕ್ಕೆ ಕಪ್ಪುಚುಕ್ಕೆ ತರುವಂತಹ ಯಾವ ಕೆಲಸವನ್ನು ಮಾಡಿಲ್ಲ. ಅವರು ಬದುಕಿದ್ದಾಗ ತೆಗಳಿದ ಕೆಲವರು ಅವರು ನಿಧನರಾದಾಗ ಗುಣಗಾನ ಮಾಡಿದರು. ಮನಮೋಹನ್ ಸಿಂಗ್ ಅವರು ಬಗ್ಗೆ ಕೀಳಾಗಿ ಮಾತನಾಡಿದವರೇ ಅವರನ್ನು ಹೊಗಳಿದರು ಅಂತಹ ವ್ಯಕ್ತಿತ್ವ ಮನಮೋಹನ್ ಸಿಂಗ್ ಅವರದು ಎಂದು ಗುಣಗಾನ ಮಾಡಿದರು. ಆರ್ಥಿಕ ತಜ್ಞ ಜಿ.ಎಸ್. ಮಲ್ಲಿಕಾರ್ಜುನಪ್ಪ ಅವರು 'ಉದಾರೀಕರಣ ಮತ್ತು ಮನಮೋಹನ್ ಸಿಂಗ್ 'ಕುರಿತು ಉಪನ್ಯಾಸ ನೀಡಿದರು. ಈ ವೇಳೆ ಹೆಜ್ಜೆ ಸಾಲು ಒಂದು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಗೋ. ತಿಪ್ಪೇಶ್, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹೆಚ್ ಬಿಲ್ಲಪ್ಪ, ನಗರ ಘಟಕದ ಅಧ್ಯಕ್ಷ ಆಗ್ರೋ ಶಿವಣ್ಣ, ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಪಿ. ಓಂಕಾರಪ್ಪ ಮುಖಂಡರುಗಳಾದ ಈಶ್ವರಪ್ಪ, ವೀರಭದ್ರಪ್ಪ, ಕೈನೊಡು ಚಂದ್ರಪ್ಪ, ದೊಡ್ಡಘಟ್ಟ ತಿಪ್ಪಯ್ಯ ಸೇರಿದಂತೆ ಸಾರ್ವಜನಿಕರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.