December 14, 2025
IMG-20250104-WA0151.jpg

ಚಳ್ಳಕೆರೆ-04 ಬುಡಕಟ್ಟು ಸಂಸ್ಕೃತಿ ಅಸ್ಮಿತೆ ಆಧುನಿಕತೆಯ ಗಾಳಿಗೆ ಸಿಲುಕಿ ನಲುಗುತ್ತಿದೆ. ತಾಂತ್ರಿಕತೆಯೊಂದಿಗೆ ಸಂಸ್ಕೃತಿಯೂ ಉಳಿಸುವ ಕೆಲಸ ಮಾಡಬೇಕು ಎಂದು ರಾಜ್ಯ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಬಂಜಿಗೆರೆಜಯಪ್ರಕಾಶ್ ತಿಳಿಸಿದರು.
ಅವರು, ಶನಿವಾರ ನಗರದ ಬಾಪೂಜಿಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಬುಡಕಟ್ಟು ಸಂಸ್ಕøತಿ ಅಧ್ಯಯ ಹಾಗೂ ಅಭಿವೃದ್ದಿ ಸಂಸ್ಥೆ ಆಯೋಜಿಸಿದ್ದ ರಾಜ್ಯಮಟ್ಟದ ಬುಡಕಟ್ಟು ಸಮುದಾಯದ ಆಸ್ಮಿತೆ ವಿಚಾರ ಸಂಕಿರಣವನ್ನು ಗಿಡಕ್ಕೆ ನೀರು ಎರೆಯುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಆಧುನಿಕತೆ ಹೆಸರಿನಲ್ಲಿ ನಮ್ಮ ಮೂಲಸಂಸ್ಕøತಿಯನ್ನು ಮರೆಮಾಚುವ ಕೆಲಸ ನಮ್ಮಿಂದಲೇ ಆಗುತ್ತಿದೆ. ಈಗಾಗಲೇ ಭಾರಿಪ್ರಮಾಣದಲ್ಲಿ ನಮ್ಮ ಸಂಸ್ಕøತಿಯ ಬೆಳವಣಿಗೆಗೆ ಅಡ್ಡಿಯಾಗಿದೆ. ವಿಪರ್ಯಾಸವೆಂದರೆ ಸರ್ಕಾರಗಳು ಕೂಡ ಸಂಸ್ಕøತಿಯನ್ನು ಉಳಿಸುವತ್ತ ಹೆಚ್ಚು ಗಮನಹರಿಸುತ್ತಿಲ್ಲ, ರಾಜ್ಯ ಸರ್ಕಾರ ಅಧೀನದಲ್ಲಿ ಕಾರ್ಯನಿರ್ವಹಿಸುವ ಕನ್ನಡಸಂಸ್ಕøತಿ ಇಲಾಖೆಯೂ ಸಹ ಇಂತಹ ವಿಚಾರಗಳ ಬಗ್ಗೆ ಗಂಭೀರಚಿಂತನೆ ನಡೆಸಬೇಕು. ಸರ್ಕಾರ ಮುಂದಿನ ದಿನಗಳಲ್ಲಾದರೂ ನಮ್ಮ ಮೂಲಸಂಸ್ಕøತಿಯ ಉಳಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಬೇಕು. ಅವಶ್ಯವಿದ್ದಲ್ಲಿ ಬುಡಕಟ್ಟು ಸಂಸ್ಕøತಿ ಅಧ್ಯಯ ಹಾಗೂ ಅಭಿವೃದ್ದಿ ಸಂಸ್ಥೆ ಹಾಗೂ ನಾಡಿನ ಹಿರಿಯರನ್ನು ಸೇರಿಸಿ ಚರ್ಚಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ, ರಾಜ್ಯಸಣ್ಣಕೈಗಾರಿಕೆ ಅಭಿವೃದ್ದಿ ನಿಗಮದ ಅಧ್ಯಕ್ಷ ಟಿ.ರಘುಮೂರ್ತಿ ಮಾತನಾಡಿ, ಆಧುನಿಕತೆ, ತಾಂತ್ರಿಕತೆ ಪೈಪೋಟಿಯಲ್ಲಿ ಬುಡಕಟ್ಟು ಸಂಸ್ಕøತಿಯನ್ನು ಮರೆತಂತೆ ಬಾಸವಾಗುತ್ತಿದೆ ಇದು ನಿಜವೂ ಹೌದು. ಕಾರ್ಯಕ್ರಮದ ಉದ್ಘಾಟಕರಾದ ಡಾ.ಬಂಜಿಗೆರೆಜಯಪ್ರಕಾಶ್‍ರವರ ಅಂಶಗಳ ಬಗ್ಗೆ ಸರ್ಕಾರದ ಗಮನಸೆಳೆಯುವುದಾಗಿ ಭರವಸೆ ನೀಡಿದರು.
ರಂಗಭೂಮಿ ಕಲಾವಿದ ಹಾಗೂ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಪಿ.ತಿಪ್ಪೇಸ್ವಾಮಿ, ಬುಡಕಟ್ಟು ಸಮುದಾಯದಗಳ ಅಸ್ಥಿತ್ವ ಹಾಗೂ ಸವಾಲುಗಳ ಬಗ್ಗೆ ಮಾತನಾಡಿ, ಇಂದಿಗೂ ಸಹ ತಾಲ್ಲೂಕಿನ ನನ್ನಿವಾಳ ಗ್ರಾಮದಲ್ಲಿ ಬುಡಕಟ್ಟು ಸಮುದಾಯಕ್ಕೆ ಸೇರಿದ ಕಟ್ಟೆಮನೆ ಹಾಗೂ ಆ ಭಾಗದ ಕಿಲಾರಿಗಳ ಕಾರ್ಯಚಟುವಟಿಕೆಗಳ ಬಗ್ಗೆ ವಿವರಣೆ ನೀಡಿದರು. ಬುಡಕಟ್ಟು ಸಮುದಾಯದಿಂದ ಇಂದಿಗೂ ನಮ್ಮ ನಾವು ನಮ್ಮ ಅಸ್ಥಿತ್ವವನ್ನು ಗುರುತಿಸಿಕೊಳ್ಳಬಹುದಾಗಿದೆ. ಬುಡಕಟ್ಟು ಸಮುದಾಯದ ಕೊಡಗೆ ಸಮಾಜಕ್ಕೆ ಅಪಾರವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಜೈತುಂಬಿ, ಉಪಾಧ್ಯಕ್ಷೆ ಸುಮ, ಸದಸ್ಯರಾದ ರಮೇಶ್‍ಗೌಡ, ವೀರಭದ್ರಪ್ಪ, ಎಂ.ಜೆ.ರಾಘವೇಂದ್ರ, ಬಾಪೂಜಿ ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಜಿ.ಬಾಲರೆಡ್ಡಿ, ಸಂಚಾಲಕ ಕೆ.ಚಿತ್ತಯ್ಯ, ಪ್ರಾಧ್ಯಾಪಕರಾದ ಡಿ.ಕರಿಯಣ್ಣ, ವಿ.ಚಂದ್ರಶೇಖರ್, ಜಿ.ಡಿ.ಚಿತ್ತಣ್ಣ, ಆರ್.ಎಸ್.ಉಮೇಶ್, ಡಾ.ಜೆ.ತಿಪ್ಫೇಸ್ವಾಮಿ, ಡಾ.ಜಿ.ವಿ.ರಾಜಣ್ಣ, ನಂದಿನಿ, ಮುಜೀಬುಲ್ಲಾ, ಕೆಡಿಪಿ ನಾಮಿನಿಸದಸ್ಯ ಸುರೇಶ್, ಗ್ಯಾರಂಟಿ ಸಮಿತಿ ಅಧ್ಯಕ್ಷ ಗದ್ದಿಗೆತಿಪ್ಫೇಸ್ವಾಮಿ, ಶಶಿಧರ ಮುಂತಾದವರು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading