ಚಳ್ಳಕೆರೆ ಜ.4
ಮನುಷ್ಯರಿಗೆ ಮನಶಾಂತಿ ಲಭಿಸಲು ದೇವಸ್ಥಾನಗಳ ಅವಶ್ಯಕತೆಯಿದ್ದು, ಧ್ವೇಶ.ಅಸೂಯೆ ನೆಮ್ಮಧಿಗಾಗಿ ದೇವಸ್ಥಾನ ಜಾತ್ರೆ ಉತ್ಸವಗಳಿಂದ ಮಾತ್ರ ಸಾಧ್ಯ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಚಳ್ಳಕೆರೆ ತಾಲ್ಲೂಕಿನ ಕುರುಡಿಹಳ್ಳಿ ಲಂಬಾಣಿಹಟ್ಟಿ ಗ್ರಾಮದಲ್ಲಿ 10 ಲಕ್ಷ ರೂ ವೆಚ್ಚದಲ್ಲಿ ಶ್ರೀ ಸಂತ ಸೇವಾಲಾಲ್ ದೇವಸ್ಥಾನ ನೂತನ ಕಟ್ಟಡ ಕಾಮಗಾರಿಗೆಭೂಮಿ ಪೂಜೆ ನೆರವೇರಿಸಿ ಮಾತನಾಡಿರು.
ಸಂತಸೇವಾಲಾಲ್ ದೇವಸ್ಥಾನ ನಿರ್ಮಾಣಕ್ಕೆ ಮುಖ್ಯಮಂತ್ರಿ ಗಳ ವಿಶೇಷ ಅನುದಾನದಡಿ ಸುಮಾರು 10.ಲಕ್ಷ ರೂಗಳ ವೆಚ್ಚದಲ್ಲಿ ದೇವಸ್ಥಾನ ಕಟ್ಟಡ ನಿರ್ಮಾಣವಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಿರ್ಮಿತಿ ಕೇಂದ್ರದ ಇಂಜಿನಿಯರ್ ಸಿದ್ದೇಶ್, ಗ್ರಾಪಂ ಅಧ್ಯಕ್ಷೆ ತಿಪ್ಪಕ್ಕ . ಉಪಾಧ್ಯಕ್ಷೆ ಬೇಬಿ ಬಾಯಿ. ಸದಸ್ಯರು ರಾಮಸ್ವಾಮಿ, ತಾಲ್ಲೂಕು ಗ್ಯಾರೆಂಟಿ ಸಮಿತಿಯ ಸದಸ್ಯ ಪುರುಷೋತ್ತಮ್, ಮುಖಂಡರಾದ ರಾಜೇಶ್, ಕಾಂತನಾಯ್ಕ್, ತಿಮ್ಮಣ್ಣ, ರಣಗನಾಯ್ಕ್, ಶಿವಣ್ಣ ನಾಯ್ಕ್, ಹನಮಿನಾಯ್ಕ್, ಒಬ್ಯಾನಾಯ್ಕ್ , ಹೇಮಂತಕುಮಾರ್, ತಿಪ್ಪೇಸ್ವಾಮಿ, ನಿರಂಜನ್, ಹರೀಶ್ , ಕುಮಾರ ನಾಯ್ಕ್, ದೇವ್ಲಾ ನಾಯ್ಕ್, ಇತರರಿದ್ದರು.






About The Author
Discover more from JANADHWANI NEWS
Subscribe to get the latest posts sent to your email.