ನಾಯಕನಹಟ್ಟಿ-: ಸಮೀಪದ ಎನ್.ಮಹದೇವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುದಾಪುರ ಲಂಬಾಣಿ ಹಟ್ಟಿ ಗ್ರಾಮದಲ್ಲಿ ನೂತನ ಅಂಗನವಾಡಿ ಕೊಠಡಿಯನ್ನು ಶಾಸಕ ಎನ್ ವೈ ಗೋಪಾಲಕೃಷ್ಣ ಉದ್ಘಾಟಿಸಿ ಚಾಲನೆ ನೀಡಿ ಮಾತನಾಡಿದರು. ಮಕ್ಕಳಿಗೆ ಉತ್ತಮ ಆಹಾರವನ್ನು ನೀಡಬೇಕು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರ ಜೊತೆಗೆ ಆರೋಗ್ಯದ ಕಡೆ ಗಮನ ನೀಡಬೇಕು ಎಂದರು.








ಸಿಡಿಪಿಒ ರಾಜ ನಾಯ್ಕ ಮಾತನಾಡಿದರು ತಾಲೂಕಿನಲ್ಲಿ ಅಂಗನವಾಡಿ ಕೇಂದ್ರಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಕಾರ್ಯಕರ್ತರು ನಿರೀಕ್ಷೆಗೂ ಮೀರಿ ಉತ್ತಮ ಕೆಲಸ ನಿರ್ವಹಿಸುವುದರಿಂದ ಕೇಂದ್ರಗಳು ಹೆಚ್ಚು ಕ್ರಿಯಾ ಶೀಲತೆಯಿಂದ ಕೂಡಿವೆ. ಹಾಗೆ ಅಗತ್ಯ ಇರುವ ಕಡೆಗಳಲ್ಲಿ ನೂತನ ಕಟ್ಟಡಗಳು ನಿರ್ಮಿಸಿ ಬಳಕೆಗೆ ಅನುಕೂಲ ಮಾಡಿಕೊಡಲಾಗುತ್ತಿದೆ ಇದರಿಂದ ಮಕ್ಕಳಿಗೆ ಉತ್ತಮ ವಾತಾವರಣದಲ್ಲಿ ಪೋಷಣೆ ಮತ್ತು ಆರೈಕೆ ಸಿಗುವಂತೆ ಮಾಡಬೇಕು ಎಂದರು
ಈ ಸಂದರ್ಭದಲ್ಲಿ ಬಗರು ಹುಕುಂ ಕಮಿಟಿ ಸದಸ್ಯ ಪಿ.ಜಿ. ಬೋರನಾಯಕ, ಗ್ರಾಮ ಪಂಚಾಯತಿ ಅಧ್ಯಕ್ಷ ಬಿ. ತಿಪ್ಪೇಸ್ವಾಮಿ, ಉಪಾಧ್ಯಕ್ಷೆ ಅಕ್ತರ್ ಬಾನು, ಸದಸ್ಯರಾದ ಗೋಮ್ಲಿಬಾಯಿ, ಎಚ್. ಶಿವಣ್ಣ, ಓಬಳೇಶಪ್ಪ, ಕೆ.ಟಿ. ಜಯಂತಿ, ಊರಿನ ಮುಖಂಡರಾದ ಸುನಿಲ್ ಕುಮಾರ್, ಸುಧಾ, ಮೂರ್ತಿ ನಾಗರಾಜ್, ಗುತ್ತಿಗೆದಾರ ಮಂಜಣ್ಣ, ಅಂಗನವಾಡಿ ಮೇಲ್ವಿಚಾರಕಿ ನಾಗರತ್ನ, ಅಂಗನವಾಡಿ ಶಿಕ್ಷಕಿಯರಾದ ಸಿ. ಶೀಲಾಬಾಯಿ, ಕಾವ್ಯ, ಕುದಾಪುರ ಆರ್. ಪಿ.ಸುಜಾತ, ಸೇರಿದಂತೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಹಾಗೂ ಊರಿನ ಗ್ರಾಮಸ್ಥರು ಇದ್ದರು,
About The Author
Discover more from JANADHWANI NEWS
Subscribe to get the latest posts sent to your email.