September 16, 2025
d3-tm1.jpg

ವರದಿ:ನಾಗತಿಹಳ್ಳಿಮಂಜುನಾಥ್
ಹೊಸದುರ್ಗ ಪ್ರತಿಯೋರ್ವ ಸಾಧಕನ ಸಾಧನೆಯ ಮೊದಲ ಹಂತವೆಂ

  ದರೆ ನಾನು ಎಂಬ ಅಹಂಕಾರ ಹೋಗಬೇಕು. ಆದರೆ ನಾನು ನನ್ನದು ಎಂಬ ಹಂಬಲ ಸುಮ್ಮನೇ ಅಳಿಯುವುದಿಲ್ಲ. ಪರಮಾತ್ಮನ ದಯೆ ಇರಬೇಕು ಎಂದು ತಮ್ಮ ಕೀರ್ತನೆಯಲ್ಲಿ ತಿಳಿಸಿದ್ದಾರೆ ಎಂದು ಯುವ ಉದ್ಯಮಿ ಸದ್ಗುರು ಪ್ರದೀಪ್ ಡಿ.ಎಸ್ ತಿಳಿಸಿದರು.
ತಾಲೂಕಿನ ಗೊರವಿನಕಲ್ಲು ಕನಕ ಯುವಕ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಕನಕ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು
ದಾಸರ ಕೀರ್ತನೆಗಳ ವೈಶಿಷ್ಟ್ಯವೆಂದರೆ ಸರಳ ಭಾಷೆಯಲ್ಲಿ ವಿಷಯವನ್ನು ಮನಮುಟ್ಟುವಂತೆ ತಿಳಿಸುತ್ತಾರೆ. ನಮ್ಮ ಹುಟ್ಟು ಸಾವಿನ ಮಧ್ಯೆ ಬದುಕು ಸಾರ್ಥಕಳ್ಳಬೇಕು ಎಂದು ತಮ್ಮ ಕೀರ್ತನೆಗಳ ಮುಖಾಂತರ ಕನಕದಾಸರು ಜಗತ್ತಿಗೆ ಸಂದೇಶ ನೀಡಿದ್ದಾರೆ ಎಂದ ಅವರು ಹಳೆಗನ್ನಡ ಮತ್ತು ಹೊಸಗನ್ನಡ ಸಾಹಿತ್ಯದ ಮಧ್ಯೆ ಐದು  ಶತಮಾನಗಳ ಹಿಂದೆಯೇ ಆಧ್ಯಾತ್ಮಿಕ ಸಂತಕವಿ ಕನಕದಾಸರು ಮಾನವನ ಬದುಕಿನಲ್ಲಿ ಏನೆಲ್ಲಾ ಎದುರಿಸಬೇಕಾಗುತ್ತದೆ ಎಂಬುದನ್ನು ಚಿತ್ರಿಸುತ್ತಲೇ ಜೀವನ ಮೌಲ್ಯಗಳನ್ನು ತಿಳಿಸಿದ್ದಾರೆ ಎಂದರು.
ಕರ್ನಾಟಕ ರಾಜ್ಯ ಪ್ರಾದೇಶಿಕ ಕುರುಬರ ಸಂಘದ ಉಪಾಧ್ಯಕ್ಷ ಡಾ: ಎಂ.ಎಚ್, ಕೃಷ್ಣಮೂರ್ತಿ ಮಾತನಾಡಿ  ಕನಕದಾಸರು  ವಿಶ್ವ ಮಾನವರಾಗಿ ಸಮಾನತೆ ಸಾರಿದರು, ಪುರೋಹಿತಶಾಹಿಗಳು  ಕೃಷ್ಣನ ದರ್ಶನಕ್ಕೆ  ಅವಕಾಶ ಕಲ್ಪಿಸದಿದ್ದಾದ್ದಾಗ ನಂತರ ಹರಿಯನ್ನ ಭಜಿಸಿದಾಗ ಹಿಂಬಾಗಿಲಲ್ಲಿ ದರ್ಶನ ನೀಡಿದರು.ಅವರ ತತ್ವಗಳನ್ನು ನಮ್ಮ  ಬದುಕಿನಲ್ಲಿ ಅಳವಡಿಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಚಿತ್ರದುರ್ಗ ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ ಅನಂತ್, ಭಾರತ್ ಸೇವಾದಳದ ಅಧ್ಯಕ್ಷ ಎಂ ಆರ್ ಸಿ ಮೂರ್ತಿ,ಸಮಾಜದ ಮುಖಂಡ ಆಗ್ರೋ ಹೆಚ್,ಶಿವಣ್ಣ, ಕಾರೇಹಳ್ಳಿ ರೇವಣಸಿದ್ದೇಶ್ವರ ಮಠದ ಶೇಖರಯ್ಯ ಒಡೆಯರ್, ಕನಕ ಯುವಕ ಸಂಘದ ಅಧ್ಯಕ್ಷ ಶ್ರೀನಿವಾಸ್, ರಾಷ್ಟ್ರೀಯ ಕರಾಟೆ ಪಟು ಅರ್ಚನಾ ಸೇರಿದಂತೆ ಸಮಾಜದ ಮುಖಂಡರು,ಗ್ರಾಮದ ಮುಖಂಡರುಗಳು ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು. ಶ್ರೀ ರಾಮಾಂಜನೇಯ ಭಜನಾ ಮಂಡಳಿಯವರಿAದ ಕನಕದಾಸರ ಕೀರ್ತನೆಗಳನ್ನು ಹಾಡಿದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading