March 17, 2026
1762184925234.jpg

ಹಿರಿಯೂರು:
ಬೆಂಗಳೂರು ಶ್ರೀನಿವಾಸುಲು ಮತ್ತು ಶ್ರೀದೇವಿ ಇವರ ವಿವಾಹ ವಾರ್ಷಿಕೋತ್ಸವ ಅಂಗವಾಗಿ ನಗರದ ಹೊರವಲಯದಲ್ಲಿರುವ ಕೊಳಚೆಪ್ರದೇಶದ ಬಡನಿವಾಸಿಗಳಿಗೆ ಈ ಚಳಿಗಾಲದಲ್ಲಿ ಆರೋಗ್ಯವಂತ ಬದುಕು ಕಟ್ಟಿಕೊಳ್ಳಲು ಹಾಗೂ ಬೆಚ್ಚಗಿರಲು ಬೆಚ್ಚನೆಯ ಹೊದಿಕೆಗಳಾದ ಉಚಿತ ಬ್ಲಾಂಕೆಟ್ ಗಳನ್ನು ನೀಡಲಾಗುತ್ತಿದೆ ಎಂಬುದಾಗಿ ರೆಡ್ ಕ್ರಾಸ್ ಚೇರ್ಮನ್ ಹೆಚ್.ಎಸ್. ಸುಂದರ್ ರಾಜ್ ಹೇಳಿದರು.
ನಗರದ ಅವಧಾನಿ ಬಡಾವಣೆಯ ಪಾರಿಜಾತ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ರೋಟರಿ ಸಂಸ್ಥೆ, ಹಾಗೂ ಶ್ರೀಮತಿ ರುಕ್ಮಿಣಮ್ಮ ಹೆಚ್.ಸಿ.ಸತ್ಯನಾರಾಯಣಶೆಟ್ಟಿ ಚಾರಿಟಬಲ್ ಟ್ರಸ್ಟ್ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ “ಉಚಿತ ಬ್ಲಾಕಿಂಟ್ ಹಾಗೂ ಉಪಹಾರ ವಿತರಣೆ” ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರೆಡ್ ಕ್ರಾಸ್ ಮತ್ತು ರೋಟರಿಸಂಸ್ಥೆಗಳು ಸದಾ ಸೇವಾ ಕಾರ್ಯವನ್ನು ನಡೆಸುತ್ತಿದ್ದು, ಇದಕ್ಕೆ ಹೆಚ್ಚಿನ ದಾನಿಗಳ ಸಹಕಾರ ದೊರೆಯುತ್ತಿದ್ದು, ಸದಸ್ಯರುಗಳ ನಿಸ್ವಾರ್ಥ ಭಾವನೆಯಿಂದ ಸೇವೆಯಲ್ಲಿ ತೊಡಗಿಕೊಂಡಿದ್ದು, ಈ ರೀತಿ ಸಾರ್ವಜನಿಕರ ಸೇವೆಗಳನ್ನು ನಡೆಸಲು ಸಾಧ್ಯವಾಗಿದೆ ಎಂಬುದಾಗಿ ಅವರು ಹೇಳಿದರು.

ರೋಟರಿ ಅಧ್ಯಕ್ಷರಾದ ಕೆ.ಎ.ವರುಣ್ ಅವರು ಮಾತನಾಡಿ, ನಮ್ಮ ರೋಟರಿ ಹಾಗೂ ರೆಡ್ ಕ್ರಾಸ್ ಸಂಸ್ಥೆಗಳು 2 ಕಣ್ಣುಗಳಂತೆ ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತಿದ್ದು, ಸದಸ್ಯರುಗಳ ಸಹಕಾರವೇ ನಮ್ಮ ಸಂಸ್ಥೆಗಳ ಸೇವಾ ಕಾರ್ಯಗಳ ಯಶಸ್ಸಿಗೆ ಕಾರಣವಾಗಿದ್ದು, ಈ ದಿನದ ವಿಶೇಷ ಕಾರ್ಯಕ್ರಮ ನಿಜಕ್ಕೂ ಸಂತಸದ ವಿಚಾರವಾಗಿದೆ ಎಂಬುದಾಗಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ರೆಡ್ ಕ್ರಾಸ್ ಚೇರ್ಮನ್ ಹೆಚ್.ಎಸ್.ಸುಂದರ್ ರಾಜ್, ರೋಟರಿ ನಿರ್ದೇಶಕರುಗಳಾದ ಎಲ್.ಆನಂದಶೆಟ್ಟಿ, ಹೆಚ್.ಎಸ್.ನಾಗರಾಜ ಗುಪ್ತಾ, ದೇವರಾಜ್ ಮೂರ್ತಿ, ಎಸ್.ಜೋಗಪ್ಪ, ಮಹಾಬಲೇಶ್ವರಶೆಟ್ಟಿ, ಪಿ.ಆರ್.ಸತೀಶ್ ಬಾಬು, ಹೆಚ್.ಎಸ್.ರಾಧಾಕೃಷ್ಣ, ಹೆಚ್.ಎಸ್.ಅಮರನಾಥ್, ಹನುಮಂತರಾಯ, ರೋಟರಿ ಅಧ್ಯಕ್ಷರಾದ ಕೆ.ಎ.ವರುಣ್, ವಿಕಾಸ್ ಜೈನ್, ರಾಜೇಶ್, ಚಂದ್ರಕೀರ್ತಿಗುಜ್ಜಾರ್, ರೆಡ್ ಕ್ರಾಸ್ ಮಹಿಳಾ ಅಧ್ಯಕ್ಷರಾದ ಗೀತಾರಾಧಕೃಷ್ಣ, ಗೌರಮ್ಮಸುಂದರಾಜ್, ರೆಡ್ ಕ್ರಾಸ್ ವೈಸ್ ಚೇರ್ಮನ್ ಎ.ರಾಘವೇಂದ್ರ, ಕಾರ್ಯದರ್ಶಿ ಎಂ.ಎಸ್.ರಾಘವೇಂದ್ರ, ತ್ರಿಯಂಬಕ ಮೂರ್ತಿ ಹಾಗೂ ಕೊಳಚೆ ಪ್ರದೇಶದ ನಿವಾಸಿಗಳು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading