January 29, 2026
d3-tm2.jpg

ನಾಗತಿಹಳ್ಳಿ ಮಂಜುನಾಥ್

ಹೊಸದುರ್ಗ: ಮರಗಳನ್ನು ಕಡಿಯುತ್ತ ನಗರಗಳು ಬರಡಾಗುವಾಗ, ಅರಣ್ಯ ನಾಶಗೊಳಿಸುವ ಸಂದರ್ಭದಲ್ಲಿ ಒಂದು ಗಿಡಕ್ಕೆ ನೀರು ಹಾಕವುದಲ್ಲ. ಇಡೀ ಪರಿಸರಕ್ಕೆ ನೀರು ಹಾಕಬೇಕಿದೆ. ಹೀಗೆಯೇ ಮಾನವ ಎಂಬ ಗಿಡಕ್ಕೆ ಸದಾ ಸಂಸ್ಕೃತಿ, ಸಂಸ್ಕಾರವೆಂಬ ನೀರುಣಿಸಬೇಕಿದೆ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಸಲಹೆ ನೀಡಿದರು.

ತಾಲ್ಲೂಕಿನ ಸಾಣೇಹಳ್ಳಿಯಲ್ಲಿ ಆಯೋಜಿಸಿರುವ ರಾಷ್ಟ್ರೀಯ ನಾಟಕೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಭಾನುವಾರ ಅವರು ಸಾನ್ನಿಧ್ಯ ವಹಿಸಿ ಮಾತನಾಡಿದರು.
ಜನರನ್ನು ಮದ್ಯಪಾನದಿಂದ ಮುಕ್ತಿ ಮಾಡುತ್ತಿಲ್ಲ. ಇದರಿಂದ ಮೌಲ್ಯಗಳು ಕುಸಿಯುತ್ತಿವೆ. ಮತ್ತೆ ಮೌಲ್ಯಗಳು ಕುಸಿಯದ ಹಾಗೆ ನೋಡಿಕೊಳ್ಳಬೇಕಾದ ಅಗತ್ಯವಿದೆ. ಇದಕ್ಕಾಗಿ ಕಂಡ ಕನಸುಗಳನ್ನು ಕಟ್ಟಬೇಕು. ಆದರೆ ಕನಸುಗಳನ್ನು ಕಟ್ಟುವ ನೇತಾರರು ಧಾರ್ಮಿಕ ಕ್ಷೇತ್ರದಲ್ಲೂ ಇಲ್ಲ. ಇದಕ್ಕಾಗಿ ಸಾಹಿತ್ಯ ಮತ್ತು ರಂಗಭೂಮಿ ಮೂಲಕ ಸಮಾಜವನ್ನು ಸನ್ಮಾರ್ಗದಲ್ಲಿ ಮುನ್ನಡೆಸುವ ಕಾರ್ಯ ಕೈಗೊಂಡಿದ್ದೇವೆ ಎಂದು ತಿಳಿಸಿದರು.
ಶೇಗುಣಸಿ ವಿರಕ್ತಮಠದ ಮಹಾಂತ ಪ್ರಭು ಸ್ವಾಮೀಜಿ ಮಾತನಾಡಿ ಜಗತ್ತಿನ ಎಂಬತ್ತು ಭಾಷೆಗಳಲ್ಲಿ ಕನ್ನಡವೂ ಉಳಿಯುತ್ತದೆ. ಇದಕ್ಕೆ ಕಾರಣ ಬಸವಾದಿ ಶರಣರು ಬರೆದ ವಚನಗಳು. ಅವರ ಮೂಲಕ ಕನ್ನಡ ಉಳಿಯುತ್ತಿದೆ ಎಂದರು.
ಚಲನ ಚಿತ್ರ ನಟ ಮುಖ್ಯ ಮಂತ್ರಿ ಚಂದ್ರು ಶಿವಸಂಚಾರ ನಾಟಕಗಳ ಉದ್ಘಾಟನೆ ಮತ್ತು ಚಲನಚಿತ್ರ ನಿರ್ಧೇಶಕ ನಾಗತಿಹಳ್ಳಿಚಂದ್ರಶೇಖರ್ ಕನ್ನಡ ರಾಜ್ಯೋತ್ಸವದ ಉದ್ಘಾಟನೆ ಮಾಡಿದರು.
ಮುಖ್ಯ ಅತಿಧಿಗಳಾಗಿ ಲೋಕಸಭಾ ಸದಸ್ಯ ಗೋವಿಂದ ಕಾರಜೋಳ, ಶಾಸಕ ಎಂ.ಚAದ್ರಪ್ಪ, ಕರ್ನಾಟಕ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷ ವಡ್ನಾಳ್‌ರಾಜಣ್ಣ ಭಾಗವಹಿಸಿದ್ದರು.ಹೊಳಲ್ಕೆರೆ ಶಾಸಕ ಚಂದ್ರಪ್ಪ ಮತ್ತಿತರರು ಭಾಗವಹಿಸಿದ್ದರು. ಶಿವಸಂಚಾರ-25 ರ ಕೈಪಿಡಿ, ಕಲೆ ಕಾಯಕವಾದಾಗ ಹಾಗೂ ಅಂತರAಗದ ಬೆಳಕು ಎಂಬ ಕೃತಿಗಳ ಲೋಕಾರ್ಪಣೆ ಮಾಡಲಾಯಿತು. ಸಾಣೇಹಳ್ಳಿಯ ಶ್ರೀ ಗುರುಪಾದೇಶ್ವರ ಪ್ರೌಢಶಾಲೆ ಮತ್ತು ಶ್ರೀ ಶಿವಕುಮಾರ ಸ್ವಾಮೀಜಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಂದ ನೃತ್ಯ ರೂಪಕಗಳು ನಡೆದವು ನಂತರ ನಡೆದ ನಾಟಕೋತ್ಸವದಲ್ಲಿ ಶಿವಸಂಚಾರ -25 ಅಭಿನಯದ, ಜಗದೀಶ್ ಆರ್. ಸಂಗೀತ ನಿರ್ಧೆಶನದ ಶ್ರೀ ಪಂಡಿತಾರಾಧ್ಯ ಶಿವಚಾರ್ಯ ಸ್ವಾಮೀಜಿಯವರ ರಚನೆಯ ಜಂಗಮದೆಡೆಗೆ ಎಂಬ ನಾಟಕ ಪ್ರದರ್ಶನಗೊಂಡಿತು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading