January 29, 2026
d3-tm3.jpg

ನಾಗತಿಹಳ್ಳಿಮಂಜುನಾಥ್
ಹೊಸದುರ್ಗ: ವ್ಯಕ್ತಿತ್ವ ವಿಕಸನಕ್ಕೆ ಬಸವಣ್ಣನವರ ಕೊಟ್ಟ ಸಂಸ್ಕಾರವೇ ಸಾಕು. ಆದರೆ ಬಸವಣ್ಣನವರ ತತ್ವಗಳನ್ನು ಸರಿಯಾಗಿ ಗ್ರಹಿಸದೆ ಗುಡಿಗಳಿಗೆ ಹೋಗುತ್ತೀರಿ. ಆದರೆ ದೇವರು ಹೊರಗಿಲ್ಲ, ನಮ್ಮೊಳಗಿದ್ದಾನೆ ಎಂದು ಬಸವಣ್ಣನವರು ಹೇಳಿದ್ದನ್ನು ಮರೆಯಬಾರದು ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಸಲಹೆ ನೀಡಿದರು.

ತಾಲ್ಲೂಕಿನ ಸಾಣೇಹಳ್ಳಿಯ ಶ್ರೀಮಠದ ಬಸವ ಮಹಾಮನೆಯಲ್ಲಿ ಸೋಮವಾರ ಮುಂಜಾನೆ ಏರ್ಪಡಿಸಿದ್ದ ಮಾಸಿಕ ಇಷ್ಟಲಿಂಗ ದೀಕ್ಷಾ ಸಂಸ್ಕಾರ ಕಾರ್ಯಕ್ರಮದಲ್ಲಿ ಭಕ್ತರಿಗೆ ಲಿಂಗದೀಕ್ಷೆ ನೀಡಿ ಅವರು ಮಾತನಾಡಿದರು.
ನಮ್ಮ ಲಿಂಗಾಯತ ಧರ್ಮದ ಗುರುಗಳು ಬಸವಣ್ಣನವರು. ವಚನ ಸಾಹಿತ್ಯವೇ ಧರ್ಮಗ್ರಂಥ. ನಮ್ಮ ಧರ್ಮದ ಸಂಕೇತ ಇಷ್ಟಲಿಂಗ. ನಮ್ಮ ಧರ್ಮದ ಕೇಂದ್ರವಾದ ಆಚಾರವಿಚಾರಗಳನ್ನು ಶುದ್ಧವಾಗಿ ನಡೆಸುವುದೇ ಸಂಸ್ಕಾರ. ನಮಗೆ ಭದ್ರವಾದ ಬೇರು ಇಷ್ಟಲಿಂಗ ಸಂಸ್ಕಾರ. ಅಷ್ಟಾವರಣಗಳಾದ ಗುರು, ಲಿಂಗ, ಜಂಗಮ, ಪಾದೋದಕ, ಪ್ರಸಾದ, ವಿಭೂತಿ, ಮಂತ್ರ ಹಾಗೂ ರುದ್ರಾಕ್ಷಿ. ಇವು ಮಂತ್ರಗಳು. ನೀತಿ ಸಂಹಿತೆಗಳಾದ ಲಿಂಗಾಚಾರ, ಸದಾಚಾರ, ಶಿವಾಚಾರ, ಗಣಾಚಾರ ಹಾಗೂ ಭೃತ್ಯಾಚಾರ ಪಂಚಾಚಾರಗಳಾಗಿವೆ. ಹೀಗೆಯೇ ಭಕ್ತ, ಮಹೇಶ, ಪ್ರಾಣಲಿಂಗ, ಪ್ರಸಾದಿ, ಶರಣ ಹಾಗೂ ಐಕ್ಯ ಇವು ಷಟ್‌ಸ್ಥಲಗಳು. ಇವುಗಳ ಜೊತೆಗೆ ಸಾರ ಸಜ್ಜನರ ಸಂಗವೇ ಸತ್ಸಂಗ ಎಂದು ಅರಿಯಬೇಕು ಎಂದು ತಿಳಿಸಿದರು. ಎಚ್.ಎಸ್.ನಾಗರಾಜ್ ವಚನಗಳನ್ನು ಹಾಡಿದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading