
ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ ದೀಪವಾಳಿ ಹಬ್ಬದ ಅಂಗವಾಗಿ ಎತ್ತಿನಹಬ್ಬವನ್ನು ಸಡಗರ ಸಂಭ್ರಮದಿಂದ ಶನಿವಾರ ಸಂಜೆ ಆಚರಣೆ ಮಾಡಲಾಯಿತು.
ದೀವಣಿಗೆ ಹಬ್ಬದ ವಿಶೇಷವೆಂದರೆ ದನಗಳಿಗೆ ಅಲಂಕಾರ ಮಾಡಿ ಅವುಗಳ ಮೆರವಣಿಗೆ ನಡೆಸಿಊರ ಹೊರಗಿನ ದೇವಸ್ಥಾನ ಮುಂದೆ ಗ್ರಾಮದ
9 ಆಯಾಗಾರರು ಕಳ್ಳೆ ಮುಳ್ಳಿ ಜಾತಿ ಬೇಲಿ
ಕಡಿದು ಈಡು(ಕಿಚ್ಚು) ಕಟ್ಟಲಾಗುತ್ತದೆ. ಗ್ರಾಮದ ಎಲ್ಲಾ ದನದ ಕೋಡುಗಳಿಗೆ ಬಣ್ಣ, ಕೋಡನ್ಸ್,ಹೂವಿನ ಹಾರ, ಬಲೂನ್ ಟೇಪ್ ಆಲಂಕರಿಸುತ್ತಾರೆ. ಹೀಗೆ ಅಲಂಕರಿಸಿದ ದನಗಳನ್ನು ಪ್ರತಿಯೊಬ್ಬರು ಮೆರವಣಿಗೆ ಮೂಲಕ ಗ್ರಾಮದ ಬಸ್ ನಿಲ್ದಾಣದಲ್ಲಿ ಒಂದೆಡೆ ಕರೆತಂದು
ಪಟಾಕಿ ಸಿಡಿಸಿ ಹರ್ಷಗೊಳ್ಳುತ್ತಾರೆ. ಪಟಾಕಿ
ಸದ್ದಿಗೆ ದನಗಳು ಬೆದರುವಾಗ ಜನಗಳು ಕೇಕೆ ಹಾಕುತ್ತಾರೆ. ನಂತರ ಮೆರವಣಿಗೆ ಮೂಲಕ ಊರ ಹೊರಗಿನ ರುದ್ರಭೂಮಿ ಸಮೀಪ ಗ್ರಾಮದ ಒಂಬತ್ತು ಆಯಾಗಾರರು ಕಳ್ಳೆ ಮುಳ್ಳಿನಿಂದ ನಿರ್ಮಿಸಿದ ಈಡು (ಕಿಚ್ಚು) ಬಳಿದನ ಹೊಡೆದುಕೊಂಡು ಹೋಗಿ ಈಡಿಗೆ ಪೂಜೆ ಸಲ್ಲಿಸಿ ನಂತರ ಬೆಂಕಿ ಹಚ್ಚಿದಾಗ ದನ ಮೂರುಸುತ್ತು ಸುತ್ತರಸಿ ಗ್ರಾಮದತ್ತ ಮರಳಿಗೆ ಮನೆಗೆ ಹೋಗುತ್ತವೆ. ನಂತರ ಅವುಗಳಿಗೆ ಆರತಿ ಬೆಳೆಗೆ ಎಡೆ ಹಾಕಿ ಪೂಜೆ ಮಾಡಿ ಎಲ್ಲರೂ ಗೋಪೂಜೆ ಮಾಡುತ್ತಾರೆ.
ಕಣ್ಮರೆಯಾಗುತ್ತಿರುವ ಗುಮ್ಮಟ: ಸುಮಾರು
15 ವರ್ಷಗಳ ಹಿಂದೆ ಎತ್ತುಗಳಿಗೆ ಗುಮ್ಮಟ,
ಗಾಡಿಗುಮ್ಮಟ, ಧ್ವನಿವರ್ಧಕ ಹಾಕಿಕೊಂಡು
ಹಬ್ಬ ಆಚರಣೆ ಮಾಡಲಾಗುತ್ತಿತ್ತು. ಆದರೆ,
ಇತ್ತೀಚೆಗೆ ದನಗಳ ಸಂಖ್ಯೆ ಕಡಿಯಾಗಿ ಗುಮ್ಮಟಗಳು ಕಣ್ಮರೆಯಾಗಿವೆ ಪ್ರತಿ ವರ್ಷವೂ ದನಗಳ ಸಂಖ್ಯೆ ರೈತರಿಬ್ಬರ ಕಡಿಮೆಯಾಗುತ್ತಿರುವ ದೃಶ್ಯ ಕಂಡು ಬಂತು.

















About The Author
Discover more from JANADHWANI NEWS
Subscribe to get the latest posts sent to your email.