September 16, 2025
CLK-Jayanthi-2.jpeg

ಚಳ್ಳಕೆರೆ:
ಅಡವಿವಾಸಿಯಾಗಿದ್ದ ವಾಲ್ಮೀಕಿ ತನ್ನ ಜ್ಞಾನಾರ್ಜನೆಯಿಂದ ವಿಶ್ವಕ್ಕೆ ಬೆಳಕಾಗಿದ್ದಾರೆ ಎಂದು ಕವಿ, ಪತ್ರಕರ್ತ ಕರ‍್ಲಕುಂಟೆ ತಿಪ್ಪೇಸ್ವಾಮಿ ಹೇಳಿದರು.
ಚಳ್ಳಕೆರೆ ತಾಲೂಕಿನ ಕರ‍್ಲಕುಂಟೆ ಗ್ರಾಮದಲ್ಲಿ ಶನಿವಾರ ವಾಲ್ಮೀಕಿ ಯುವಕ ಸಂಘ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತಿ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಾಲ್ಮೀಕಿ ರಾಮಾಯಣ ಮನುಕುಲ ಬದುಕಿನ ಮೌಲ್ಯತೆಯಾಗಿದೆ. ಇಲ್ಲಿ ಪ್ರಧಾನವಾಗಿ ಕುಟುಂಬ ಪ್ರೀತಿ, ಧರ್ಮ, ಭಕ್ತಿ ಸಂದೇಶ ಸಾರುವ ಮಾನವೀಯತೆ ಕಾಣುತ್ತೇವೆ. ರಾಮಾಯಣದಲ್ಲಿನ ರಾಮನ ಆದರ್ಶವನ್ನು ಅನುಕರಣೆ ಮಾಡುವ ಸಮಾಜದಲ್ಲಿ ವಾಲ್ಮೀಕಿಯ ಮಹತ್ವ ಪ್ರಧಾನವಾಗಬೇಕು. ಆದರ್ಶ ಮಹನೀಯರ ಜಯಂತಿ ಆಚರಣೆ ಸಮಾಜಮುಖಿಯಾಗಿ ಇರಬೇಕು ಎಂದು ಹೇಳಿದರು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಕಲಾತಂಡಗಳೊAದಿಗೆ ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು.
ಗ್ರಾಪಂ ಸದಸ್ಯರಾದ ವರಲಕ್ಷö್ಮಮ್ಮ, ಲಕ್ಷಿö್ಮದೇವಿ, ಗೋವಿಂದರೆಡ್ಡಿ, ಎಸ್. ಶಿವಣ್ಣ, ಮುಖಂಡರಾದ ಎನ್. ನಾಗರಾಜಪ್ಪ, ಕೆಂಗಪ್ಪ, ಚನ್ನರಾಯಪ್ಪ, ಬೊಮ್ಮಯ್ಯ, ಡಿ. ಸಿರಿಯಣ್ಣ, ಮೀಸೆ ಮಹಲಿಂಗಪ್ಪ, ಸಿದ್ದಲಿಂಗಪ್ಪ, ಕೆ.ಎಂ. ವೀರಣ್ಣ, ಟೆಂಪೋ ಮಲ್ಲೇಶಿ, ಕೆ.ಆರ್. ನರೇಂದ್ರಬಾಬು, ಪಿ. ರಾಮದಾಸ, ಶೆಟ್ರು ಶಿವಣ್ಣ, ಎನ್. ಈರಣ್ಣ, ಯುವರಾಜ, ರೇಣುಕಾಸ್ವಾಮಿ, ಶಿವಾನಂದ, ಸಿ. ನಾಗರಾಜ, ವೀರೇಂದ್ರ, ಕೂಟೇವು ರಾಜ, ಇಟ್ಟಿಗೆ ತಿಪ್ಪಣ್ಣ, ಕರೀಈರಣ್ಣ ಮತ್ತಿತರರು ಇದ್ದರು.

ಚಳ್ಳಕೆರೆ ತಾಲೂಕಿನ ಕರ‍್ಲಕುಂಟೆ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತಿ ಆಚರಣೆಯಲ್ಲಿ ಅದ್ದೂರಿಯಾಗಿ ಕಲಾತಂಡಗಳೊಂದಿಗೆ ಮೆರವಣಿಗೆ ನಡೆಸಲಾಯಿತು

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading