ಹಿರಿಯೂರು:
ತಾಲ್ಲೂಕಿನಲ್ಲಿ ಹಲವು ಗೊಬ್ಬರಅಂಗಡಿಗಳು ಕೃತಕ ಕೊರತೆ ಸೃಷ್ಟಿಸಿ, ಎಂ.ಆರ್.ಪಿ ದರಕ್ಕಿಂತ ಹೆಚ್ಚಿನ ದರದಲ್ಲಿ ಗೊಬ್ಬರವನ್ನು ಮಾರಾಟ ಮಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಇದರಿಂದ ರೈತರಿಗೆ ಭಾರೀ ನಷ್ಟ ಉಂಟಾಗಿದೆ ಎಂಬುದಾಗಿ ಕಿಸಾನ್ ಘಟಕದ ಅಧ್ಯಕ್ಷರಾದ ಜೆ.ಜಿ.ಹಳ್ಳಿ ಕೇಶವ್ ಅವರು ಆರೋಪಿಸಿದ್ದಾರೆ.
ರೈತರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ತಾಲ್ಲೂಕು ಕಾಂಗ್ರೇಸ್ ಕಿಸಾನ್ ಘಟಕ ತಹಶೀಲ್ದಾರರನ್ನು ಭೇಟಿ ಮಾಡಿ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಅವರು ಮಾತನಾಡಿದರು.
ತಾಲ್ಲೂಕು ಆಡಳಿತ ನಗರದ ಗೊಬ್ಬರ ಮಾರಾಟಗಾರರೊಂದಿಗೆ ತುರ್ತು ಸಭೆ ಕರೆಯುವಂತೆ ಹಾಗೂ ನಿಗದಿತ ದರದಲ್ಲಿ ಮಾತ್ರ ಗೊಬ್ಬರ ಮಾರಾಟವಾಗುವಂತೆ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದಾಗಿ ಕಾಂಗ್ರೆ ಸ್ ಕಿಸಾನ್ ಘಟಕದ ನೇತೃತ್ವದಲ್ಲಿ ತಾಲ್ಲೂಕು ತಹಶೀಲ್ದಾರ್ ರಿಗೆ ಮನವಿ ಮಾಡಿದ್ದಾರೆ.
ತಾಲ್ಲೂಕಿನ ರೈತರ ಹಿತಕ್ಕಾಗಿ ತಾಲ್ಲೂಕು ಕಾಂಗ್ರೆಸ್ ಕಿಸಾನ್ ಘಟಕ ಇದೆ ರೀತಿ ಹೋರಾಟವನ್ನು ಸದಾ ಮುಂದುವರಿಸಲಿದ್ದು, ತಾಲ್ಲೂಕಿನ ರೈತರು ತಮ್ಮ ಯಾವುದೇ ಸಮಸ್ಯೆಗಳಿದ್ದರೆ ಕಿಸಾನ್ ಘಟವನ್ನು ಸಂಪರ್ಕಿಸಬೇಕು ಎಂಬುದಾಗಿ ಅವರು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ತಾಲ್ಲೂಕು ಕಿಸಾನ್ ಘಟಕದ ಅಧ್ಯಕ್ಷರಾದ ಜೆ.ಜಿ.ಹಳ್ಳಿ ಕೇಶವ್ , ಉಪಾಧ್ಯಕ್ಷರಾದ ಮಾರುತಿ[ಸ್ಟೀಫನ್], ಪ್ರಧಾನ ಕಾರ್ಯದರ್ಶಿಯಾದ ರವಿ, ಕಾರ್ಯದರ್ಶಿಗಳಾದ ಕಾರ್ತಿಕ್, ಮಂಜುನಾಥ್, ಜಬಿವುಲ್ಲಾ, ಅವಿನಾಶ್, ಅರುಣ್ ,ಜಿ.ಏಂ. ಕಿರಣ್ ,ಕೀರ್ತನ್, ಮನು, ರಾಹುಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.