September 14, 2025


ಹಿರಿಯೂರು:
ನಗರಸಭೆಗೆ ಪಾವತಿಸುವ ಆಸ್ತಿ ತೆರಿಗೆ, ನೀರಿನ ಕಂದಾಯ, ನಗರಸಭೆ ಮಳಿಗೆ ಬಾಡಿಗೆ ಇನ್ನಿತರೆ ಯಾವುದೇ ತೆರಿಗೆ ಆಗಲಿ ಅಥವಾ ಶುಲ್ಕ ಇರಲಿ ರಸೀದಿಗಳನ್ನು ದಯಮಾಡಿ ಭದ್ರವಾಗಿ ಇಟ್ಟುಕೊಳ್ಳಿರಿ ಕುವೆಂಪುನಗರದ ನಾಗರೀಕರಾದ ವಿ.ಕುಬೇರಪ್ಪ ಸಾರ್ವಜನಿಕರಿಗೆ ಎಚ್ಚರಿಸಿದ್ದಾರೆ.
ಬಹುತೇಕ ತೆರಿಗೆದಾರರಿಂದ ನಿತ್ಯ ಬರುತ್ತಿರುವ ದೂರುಗಳೇನೆಂದರೆ ನಗರಸಭೆಯಲ್ಲಿ ನಾಗರೀಕರು ಪಾವತಿಸಲಾದ ಹಣವನ್ನು ಸಂಬಂಧಪಟ್ಟ ಖಾತೆಗಳಿಗೆ ಕಾಲ ಕಾಲಕ್ಕೆ ಅಪ್ಡೆಟ್ ಮಾಡದೇ ಇರುವುದರಿಂದ, ಸಕಾಲದಲ್ಲಿ ತೆರಿಗೆ ಪಾವತಿಸಿದ್ದಾಗ್ಯೂ ನಗರಸಭೆ ಲೆಡ್ಜರ್ ಗಳಲ್ಲಿ ಕಂದಾಯ ಬಾಕಿ ಇರುತ್ತದೆ.
ನೀವೇನಾದರೂ ರಸೀದಿ ಕಳೆದುಕೊಂಡರೆ, ನಿಮ್ಮ ಮಕ್ಕಳು, ಮೊಮ್ಮಕ್ಕಳು ಮತ್ತೊಮ್ಮೆ ದಂಡ ಸಹಿತ ತೆರಿಗೆ ಕಟ್ಟಬೇಕಾಗುತ್ತದೆ. ತೆರಿಗೆದಾರ ಕಟ್ಟಿದ ತೆರಿಗೆ ಹಣದ ಒಂದು ಚಲನ್ ಕಾಪಿ ಬ್ಯಾಂಕಿನಿಂದ ನಗರಸಭೆಗೆ ಬರುತ್ತದೆ.
ಮತ್ತೊಂದು ಕಾಪಿ ಜೆರಾಕ್ಸ್ ಮಾಡಿಸಿ ತೆರಿಗೆದಾರರು ಟಪಾಲು ಶಾಖೆಗೆ ಕೊಟ್ಟು ಸ್ವೀಕೃತಿ ಪಡೆದರೂ ಕೂಡ ಸಂಬಂಧಿಸಿದ ಕಂದಾಯ ಶಾಖೆ ನೌಕರರು ಮಾಡುವ ಕರ್ತವ್ಯ ನಿರ್ಲಕ್ಷ್ಯ ನಿಮ್ಮನ್ನು ಇಕ್ಕಟ್ಟಿಗೆ ಸಿಲುಕಿಸಿ ಮತ್ತೊಮ್ಮೆ ದಂಡ ಸಹಿತ ನೀವು ಬಾಕಿ ಕಂದಾಯ ಕಟ್ಟಲು ಬಾಧ್ಯಸ್ಥರಾಗುತ್ತೀರಿ.
ಏಕೆಂದರೆ ಕುವೆಂಪು ನಗರ ವಾಸಿಯಾದ ನಾನು ಕಾಲ ಕಾಲಕ್ಕೆ ಮನೆ ಮತ್ತು ನಲ್ಲಿ ಕಂದಾಯ ಪಾವತಿ ಮಾಡಿದ್ದರೂ ಕೂಡ ಸೆಪ್ಟೆಂಬರ್ 30ರಂದು ನನಗೆ ನಲ್ಲಿ ಕಂದಾಯ ಬಾಕಿ ಮತ್ತು ದಂಡ ಸಹಿತ ರೂ 9921ರೂ ಪಾವತಿಸಲು ನೋಟೀಸು ಕೊಟ್ಟಿರುತ್ತಾರೆ. ಹಾಗಾದರೆ ನಾವು ಈ ಹಿಂದೆ ಕಟ್ಟಿದ ತೆರಿಗೆ ಹಣ ಯಾರ ಖಾತೆಗೆ ಜಮೆ ಆಗಿದೆ ಎಂದು ಅನುಮಾನ ಬರುತ್ತದೆ .ಈಗಿನ ಆನ್ಲೈನ್ ಯುಗದಲ್ಲಿ ಕೂಡ ಲೆಡ್ಜರ್ ನೋಡಿ ಕಂದಾಯ ಬಾಕಿ ವಸೂಲಿ ನೋಟೀಸು ಕೊಡುವುದು ಎಷ್ಟು ಸರಿ.
ಹೀಗಿದ್ದರೂ ಸಹ ಅಲ್ಲಿನ ಸಂಬಂಧಿಸಿದ ವಿಷಯ ನಿರ್ವಾಹಕರು ಕಾಲ ಕಾಲಕ್ಕೆ ಆಯಾ ಲೆಕ್ಕ ಶೀರ್ಷಿಕೆಗೆ ಹಣ ಸಂದಾಯ ಆಗಿರುವ ಬಗ್ಗೆ ಪೋಸ್ಟಿಂಗ್ ಮಾಡುವುದಿಲ್ಲ. ಇದನ್ನ ಮೇಲ್ವಿಚಾರಕರು ನೋಡಲ್ಲ. ಸಾರ್ವಜನಿಕರು ಪ್ರಶ್ನೆ ಮಾಡುವ ತನಕ ಅಲ್ಲಿನ ಸಿಬ್ಬಂದಿ ಎಚ್ಚೆತ್ತುಕೊಳ್ಳುವುದಿಲ್ಲ.
ಆಯಾ ವರ್ಷದ ಆಡಿಟ್ ಯಾವ ರೀತಿ ನಡೆಯುತ್ತಿದೆ ಎಂದು ನೀವೆ ಯೋಚಿಸಿ. ಇದಕ್ಕೆ ಪುಷ್ಟಿ ನೀಡುವಂತೆ ಮನೆ ಕಟ್ಟಿ 10 ರಿಂದ 15 ವರ್ಷ ಕಳೆದರು ಕೆಲವರ ಕಂದಾಯ ಬಾಕಿ ವಸೂಲಿ ಮಾಡಲು ಕ್ರಮಜರುಗಿಸಿಲ್ಲ. ಇನ್ನೂ ಕೆಲವು ಕಡೆ ಲಕ್ಷಾನುಗಟ್ಟಲೆ ಕಂದಾಯ ಬಾಕಿ ಇದ್ದವರಿಗೆ ಹೊಂದಾಣಿಕೆ ಮಾಡಿಕೊಂಡು ಸರ್ಕಾರಕ್ಕೆ ವಂಚನೆ ಮಾಡುವ ಮಾತು ಕೇಳಿ ಬರುತ್ತಿದೆ.
ಪರವಾನಿಗೆ ಇಲ್ಲದೆ ಮನೆಕಟ್ಟಿ ಕೊಂಡಿದ್ದಾರೆ. ಅಂತವರಿಗೆ ಏನು ಮಾಡಿಲ್ಲ. ಸಕ್ರಮ ನಲ್ಲಿಗಳಿಗಿಂತ ಅಕ್ರಮ ನಲ್ಲಿ ಸಂಪರ್ಕ ಜಾಸ್ತಿಯಾಗಿದೆ. ನಗರಸಭೆ ವ್ಯಾಪ್ತಿಯ ರಸ್ತೆಗಳು, ಉದ್ಯಾನವನ ಜಾಗಗಳನ್ನು ಒತ್ತುವರಿ ಮಾಡಿರುವ ಬಗ್ಗೆ ಗೊತ್ತಿದ್ದರೂ ಕ್ರಮ ಜರುಗಿಸಿಲ್ಲ.
ಪ್ರಯುಕ್ತ ದಕ್ಷ ಪ್ರಾಮಾಣಿಕ ಅಧಿಕಾರಿ ಪೌರಾಯುಕ್ತರು ಆದ ವಾಸಿಂ ಸರ್ ರವರು ತಮ್ಮ ಕಚೇರಿ ಬಿಲ್ ಕಲೆಕ್ಟರ್ ಮತ್ತು ಕಂದಾಯ ಶಾಖೆ ಸಿಬ್ಬಂದಿಗಳ ಕರ್ತವ್ಯ ನಿರ್ಲಕ್ಷ್ಯದ ಬಗ್ಗೆ ಅಗತ್ಯ ಕ್ರಮ ಕೈಗೊಂಡು ನಾಗರೀಕರಿಗೆ ಪಾರದರ್ಶಕ ಆಡಳಿತ ನೀಡುವ ಮೂಲಕ ನಗರದ ನಾಗರೀಕರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ ಕುವೆಂಪು ನಗರ ವಾಸಿಯಾದ ವಿ.ಕುಬೇರಪ್ಪ ಆಗ್ರಹ ಪೂರ್ವಕ ಒತ್ತಾಯ ಮಾಡಿದ್ದಾರೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading