
ತಳಕು. ಅ.3. ಪ್ರತಿಯೊಬ್ಬರು ಸ್ವಚ್ಛತೆಗೆ ಆದ್ಯತೆ ನೀಡಿ ಸಹಕರಿಸಿ ಎಂದು ಬೇಡರೆಡ್ಡಿ ಗ್ರಾ.ಪಂ ಅಧ್ಯಕ್ಷ ವೈ.ಇ. ನಾಗೇಶ್ ಕುಮಾರ್ ಹೇಳಿದ್ದಾರೆ.
ಗುರುವಾರ ಹೋಬಳಿಯ ಬೇಡರೆಡ್ಡಿ ಗ್ರಾಮ ಪಂಚಾಯತಿ ಕಾರ್ಯಾಲಯದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು ಗ್ರಾಮೀಣ ಪ್ರದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಸಾಂಕ್ರಾಮಿಕ ರೋಗಗಳ ಅವಾಂತರ ಹೆಚ್ಚಾಗಿದೆ ಆದ್ದರಿಂದ ಪ್ರತಿಯೊಬ್ಬರೂ ಮನೆಯ ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ನಮ್ಮ ಪಂಚಾಯತಿಯ ಸಿಬ್ಬಂದಿಗಳು ಜನರಿಗೆ ಕುಡಿಯುವ ನೀರು ಬೀದಿ ದೀಪ ಚರಂಡಿ ಸ್ವಚ್ಛತೆ ಸೇರಿದಂತೆ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕಾರ್ಯನಿರ್ವಹಿಸಬೇಕು ಶೀಘ್ರದಲ್ಲಿ ಕಸ ವಿಲೇವಾರಿ ಘಟಕಕ್ಕೆ ಮತ್ತು ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಸಭೆಯಲ್ಲಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಉಪಾಧ್ಯಕ್ಷ ಎನ್ ಪದ್ಮ, ಸದಸ್ಯರಾದ ರಾಮರೆಡ್ಡಿ, ಬಿ ವಿ.ವೇಣುಗೋಪಾಲರೆಡ್ಡಿ, ಬಿ.ಓ. ತಿಮ್ಮಯ್ಯ, ಎನ್ ತ್ರಿವೇಣಿ, ವಿ.ಶೃತಿ, ಶಿಲ್ಪ, ಕೆ.ವಿ.ಶಿವಕುಮಾರ್, ಪಿಡಿಒ ಕೆ.ಕೋರ್ಲಯ್ಯ , ಸಿಬ್ಬಂದಿ ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.